Fact Check : ನನ್ನ ಪೂರ್ವಜರು ಮುಸ್ಲಿಮರು ಎಂದು ರಾಹುಲ್‌ ಗಾಂಧಿ ಹೇಳಿಲ್ಲ

“ನನ್ನ ಪೂರ್ವಜರು ಮುಸ್ಲಿಮರು,ಹಾಗಾಗಿ ನಾನೊಬ್ಬ ಅಪ್ಪಟ ಮುಸಲ್ಮಾನ, ನಾನೊಬ್ಬ ಮುಸಲ್ಮಾನ ಆಗಿರುವುದರಿಂದ ನಾನು ಪಾಕಿಸ್ತಾನಕ್ಕೆ ಸಹಾಯ  ಮಾಡುವುದು ಅಗತ್ಯವಿದೆ! ನಾನು ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಸಹಾಯ ಪ್ರಥಮವಾಗಿ ಮಾಡೇ ಮಾಡುತ್ತೇನೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ತಾನಕ್ಕೆ 8 ಸಾವಿರ ಕೋಟಿಗಳನ್ನು ಬಡ್ಡಿರಹಿತ ಸಾಲವಾಗಿ 50 ವರ್ಷಗಳಿಗೆ ನೀಡಲಿದ್ದೇವೆ” ಎಂಬ ಸಂದೇಶವೊಂದು ವೈರಲ್‌ ಆಗಿದೆ.

ಇದರ ಮುದುವರಿದ ಭಾಗವಾಗಿ “ಕಾಂಗ್ರೆಸ್ ಮುಸ್ಲಿಮರ ಪಕ್ಷವೇ, ಮುಸ್ಲಿಂ ಪಕ್ಷವಾಗಿಯೇ ಮುಂದುವರೆಯಲಿದೆ ಅನ್ನೋದು ಇನ್ನೂ ಯಾರಿಗಾದರೂ ಅನು ಮಾನವಿದೆಯೇ, ಕರ್ನಾಟಕದ ವಿಜಯದಿಂದ ಸ್ಫೂರ್ತಿ ಪಡೆದ ಹಿಂದೂಗಳು ಕಾಂಗ್ರೆಸ್ಸಿಗೆ ಓಟ್ ಹಾಕುತ್ತಾರೆ ಅನ್ನೋ ಅತಿಯಾದ ಭರವಸೆಯಿಂದ ರಾಹುಲ್ ಗಾಂಧಿ ಮಾಧ್ಯಮದ ಮುಂದೆ ಹೇಳಿದ ಮನದಾಳದ ಮಾತುಗಳು!,  ಕಾಂಗ್ರೆಸ್ಸಿಗೆ ಓಟ್ ಹಾಕಿದ ಹಿಂದೂಗಳೇ ನಿಮಗೆ ಮಾನ ಮರ್ಯಾದೆ ಏನಾದರೂ ಇದ್ದರೆ.. ಇದನ್ನು ಓದಿದ ಮೇಲೆ ಕೇಳಿದ ಮೇಲಾದರೂ ಬದಲಾಗದಿದ್ದರೆ ಮುಂದಿನ ದಿನಗಳಲ್ಲಿ ನೀವು ಅಲ್ಲದಿದ್ದರೂ ನಿಮ್ಮ ಮಕ್ಕಳು ಅನುಭವಿಸಬೇಕಾಗುತ್ತದೆ ಎಚ್ಚರ ಹಿಂದೂಗಳೇ ಎಚ್ಚರ..!” ಎಂಬ ಸಂದೇಶವೊಂದು ವೈರಲ್‌ ಆಗಿದೆ.

ಎಬಿಪಿ ನ್ಯೂಸ್‌ ಚಾನಲ್‌ ಟೆಂಪ್ಲೇಟ್‌ನೊಂದಿಗೆ ವೈರಲ್‌ ಆಗುತ್ತಿರುವ ಸುಳ್ಳು ಪ್ರತತಿಪಾದನೆ
 ವೈರಲ್‌ ಆಗುತ್ತಿರುವ ಸುಳ್ಳು ಪ್ರತತಿಪಾದನೆ

ಇದನ್ನ ಸಾಕಷ್ಟು ಮಂದಿ ಶೇರ್‌ ಮಾಡಿದ್ದು ಇದು ನಿಜವಾಗಿಯೂ ರಾಹುಲ್‌ ಗಾಂಧಿ ಅವರೇ ಹೇಳಿದ್ದಾರೆ ಎಂದು ನಂಬುತ್ತಿದ್ದಾರೆ. ಹಾಗಿದ್ದರೆ ಹೀಗೆ ಹಂಚಿಕೊಳ್ಳುತ್ತಿರುವ ಈ ಪ್ರತಿಪಾದನೆ ನಿಜವೇ ಎಂಬುದನ್ನು  ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಈ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವೈರಲ್‌ ಆಗತ್ತಿರುವ ಎಬಿಪಿ ಟೆಂಪ್ಲೆಟ್‌ಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು, ಈ ವೇಳೆ ಇದೇ ರೀತಿಯ ಹಲವು ಅಬಿಪಿ ಟೆಂಪ್ಲೇಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳೊಂದಿಗೆ ಹಂಚಿಕೊಳ್ಳುತ್ತಿರುವುದು ಪತ್ತೆಯಾಗಿದೆ.

ಹೀಗಾಗಿ ಎಬಿಪಿ ನ್ಯೂಸ್‌ ಚಾನಲ್‌ನ ಮೂಲ ಬ್ರೇಕಿಂಗ್‌ ಟೆಂಪ್ಲೇಟ್‌ಗಳನ್ನು ಪರಿಶೀಲನೆ ನಡೆಸಿದಾಗ ವೈರಲ್‌ ಆಗಿರುವ ಬ್ರೇಕಿಂಗ್‌ ಟೆಂಪ್ಲೆಟ್ ನಕಲಿ ಎಂದು ತಿಳಿದು ಬಂದಿದೆ. ಇದನ್ನು ಎಡಿಟ್‌ ಮಾಡಿ ಸುಳ್ಳು ಸಾಳುಗಳನ್ನು ಸೇರಿಸಿ ವಿವಿಧ ಬರಹಗಳೊಂದಿಗೆ ಹಂಚಿಕೊಂಡಿರುವುದು ಪತ್ತೆಯಾಗಿದೆ. ಬಹು ಮುಖ್ಯವಾಗಿ ಈ ಸುದ್ದಿ 2018ರಿಂದಲೂ ಹರಿದಾಡುತ್ತಿದ್ದು, ಎಬಿಪಿಯ ಈ  ನಕಲಿ ಬ್ರೇಕಿಂಗ್‌ ಟೆಂಪ್ಲೆಟ್‌ ಕುರಿತು ಎಬಿಪಿ ಸುದ್ದಿ ಸಂಸ್ಥೆ ತನ್ನ ಅಧಿಕೃತ ಎಕ್ಸ್‌ ( ಈ ಹಿಂದಿನ ಟ್ವಿಟರ್‌ ) ಖಾತೆಯಲ್ಲಿ ಕೂಡ ತಿಳಿಸಿದೆ.

ಇನ್ನು ರಾಹುಲ್‌ ಗಾಂಧಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂದು ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಪರಿಶೀಲನೆ ನಡೆಸಿದಾಗಲೂ ಈ ಕುರಿತು ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ರಾಹುಲ್‌ ಗಾಂಧಿ ಅವರು ಈ ರೀತಿಯ ಹೇಳಿಕೆ ನೀಡಿದ್ದು ನಿಜವೇ ಆಗಿದ್ದರೆ, ಇನ್ನೂ ಹಲವು ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು ಆದರೆ ಅಂತಹ ಯಾವುದೇ ವರದಿಗಳು ಕಂಡು ಬಂದಿಲ್ಲ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ರಾಹುಲ್‌ ಗಾಂಧಿ ತನ್ನ ಪೂರ್ವಜರು ಪಾಕಿಸ್ತಾನಿಗಳು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಬಡ್ಡಿರಹಿತ ಸಾಕವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ ಎಂಬ ಪ್ರತಿಪಾದನೆ ಸುಳ್ಳಾಗಿದೆ. ಇಂತಹ ಯಾವುದೇ ವಿಡಿಯೋಗಳನ್ನು ಪೋಸ್ಟ್‌ಗಳನ್ನು ಶೇರ್‌ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ


ವಿಡಿಯೋ ನೋಡಿ  : Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ಈ ಸುದ್ದಿ ಓದಿ : Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *