Fact Check: ಸೋನಮ್ ವಾಂಗ್ಚುಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು

Sonam Wangchuck

ಕಳೆದ 21 ದಿನಗಳಿಂದ ಉವವಾಸ ಸತ್ಯಗ್ರಹವನ್ನು ಕೈಗೊಂಡಿರುವ ಸಾಮಾಜಿಕ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಲಡಾಖ್‌ಗೆ ಸ್ವಾಯತ್ತತೆಯನ್ನು ತರಲು ಪ್ರತಿಭಟಿಸುತ್ತಿದ್ದಾರೆ ಮತ್ತು ಕೈಗಾರಿಕೀಕರಣದಿಂದ ಹಿಮಾಲಯ ಪ್ರದೇಶದ ದುರ್ಬಲ ಪರಿಸರ ಮತ್ತು ಹಿಮನದಿಗಳಿಗೆ ಆಗುತ್ತಿರುವ ಹಾನಿಯನ್ನು ದೇಶದ ಜನರಿಗೆ ತೋರಿಸುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶಕ್ಕೆ ಸಾಂವಿಧಾನಿಕ ರಕ್ಷಣೆ ಮತ್ತು ಕೈಗಾರಿಕಾ ಮತ್ತು ಗಣಿಗಾರಿಕೆ ಲಾಬಿಗಳಿಂದ ಲಡಾಖ್‌ನ ರಕ್ಷಣೆಗಾಗಿ ಅವರು ತಮ್ಮ ಬೇಡಿಕೆಯನ್ನು ಒತ್ತಾಯಿಸುತ್ತಿದ್ದಾರೆ.

ಅವರು ಕೇಂದ್ರ ಬಿಜೆಪಿ ಸರ್ಕಾರ 2019ರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಹೀಡೇರಿಸಿಲ್ಲ. ಲಡಖ್‌ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ್ದಾರೆ ಆದರೆ ಕೇಂದ್ರಾಡಳಿತ ಪ್ರದೇಶಕ್ಕೆ ಒದಗಿಸಬೇಕಾದ ರಕ್ಷಣೆ ಮತ್ತು ಕಾನೂನನ್ನು ರೂಪಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಮಾಡಿರುವ ಆರೋಪದಿಂದ ಸಿಟ್ಟಾಗಿರುವ ಬಲಪಂಥೀಯ ಕಾರ್ಯಕರ್ತರು ಸೋನಮ್ ವಾಂಗ್ಚುಕ್ ಅವರ ಹೋರಾಟವನ್ನು ತಪ್ಪಾಗಿ ಅರ್ಥೈಸುವ ಸಲುವಾಗಿ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಸೋನಮ್ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ್ದರಿಂದ ತಮ್ಮ ಭೂ ಮಾಫಿಯಾ ನಡೆಸಲು ಆಗದೇ ಪ್ರತಿಭಟಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಇದರ ಭಾಗವಾಗಿ ಈಗ, “ನಾನು ಇದನ್ನು ಈ ರೀತಿ ನೋಡುತ್ತೇನೆ, ಅವರು ರಾವಣನಿಂದ ಸೀತೆಯನ್ನು ರಕ್ಷಿಸಿದ ರಾಮರಾಗಿದ್ದಾರೆ. ಆದರೆ ಅವರು ಸೀತೆಯನ್ನು ಮನೆಗೆ ಕರೆದೊಯ್ಯಲಿಲ್ಲ, ಅವಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಬಿಟ್ಟರು.” ಎಂದು ಸೋನಮ್ ವಾಂಗ್ಚುಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋ ತುಣುಕೊಂದನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋವನ್ನು ಹೀಗಾಗಲೇ ಅನೇಕ ಸುಳ್ಳುಗಳನ್ನು ಮತ್ತು ದ್ವೇಷ ಭಾಷಣಗಳನ್ನು ಹರಡಿ ಕುಖ್ಯಾತಿ ಪಡೆದಿರುವ ಮೇಘ್ ಅಪ್ಡೇಡ್ಸ್ ಮೊದಲು ಹಂಚಿಕೊಂಡಿದೆ.

ಫ್ಯಾಕ್ಟ್‌ಚೆಕ್: ಈ ಮಾತನ್ನು ಬಿಜೆಪಿ ಲಡಾಖ್‌ನ ಜನರಿಗೆ ನೀಡಿದ ಭರವಸೆಗಳು ಮತ್ತು ಅವುಗಳನ್ನು ಹೇಗೆ ಈಡೇರಿಸಿಲ್ಲ ಎಂದು ಹೇಳುವಾಗ ಉಲ್ಲೇಖಿಸಿದ್ದಾರೆ. ಮೂಲ ವೀಡಿಯೊ ಮಾರ್ಚ್ 19 ರಂದು ಸೋನಮ್ ವಾಂಗ್ಚುಕ್ ಅವರನ್ನು NDTV ಸಂದರ್ಶಿಸಿದ ವೀಡಿಯೋ ಇದಾಗಿದೆ. ಇದಕ್ಕೆ NDTV Exclusive: “ಸಂದರ್ಶನವು ವಾಂಗ್‌ಚುಕ್ ಲಡಾಖ್‌ನಲ್ಲಿ ತನ್ನ ಉಪವಾಸದ ಬಗ್ಗೆ ಮಾತನಾಡುವುದನ್ನು ತೋರಿಸಿದೆ ಮತ್ತು ಪ್ರದೇಶದ ಜನರ ಬೇಡಿಕೆಗಳನ್ನು ಎತ್ತಿ ತೋರಿಸಿದೆ ಎಂಬ ಶೀರ್ಷಿಕೆ ನೀಡಿದ್ದಾರೆ.

ಸಂದರ್ಶನದಲ್ಲಿ “2019 ರಲ್ಲಿ ಬಿಜೆಪಿ ಹೃದಯಗಳನ್ನು ಗೆದ್ದಿದೆ ಆದರೆ ಈಗ ಅದು ಅವರನ್ನು ಮುರಿದಿದೆ” ಎಂದಿದ್ದಾರೆ. ಹಾಗೆಯೇ “ಬಿಜೆಪಿಗರು ರಾಮನಂತೆ ರಾವಣನಿಂದ ಸೀತೆಯನ್ನು ರಕ್ಷಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗದೆ ಮಾರುಕಟ್ಟೆಯಲ್ಲಿ ಮಾರಿದ ಪರಿಸ್ಥಿತಿಯನ್ನು ಲಡಾಖಿನ ಜನರು ಎದುರಿಸುತ್ತಿದ್ದೇವೆ. ಅವರು ಇಲ್ಲಿನ ಜನರಿಗೆ  ಉದ್ಯೋಗ ಒದಗಿಸಿಲ್ಲ, ಯಾವುದೇ  ರಕ್ಷಣೆಯಿಲ್ಲದೆ ವ್ಯಾಪಾರ ಮತ್ತು ಗಣಿಗಾರಿಕೆ ಚಟುವಟಿಕೆಗಳಿಗೆ ಪ್ರದೇಶವನ್ನು ಮುಕ್ತಗೊಳಿಸಿದ್ದಾರೆ. ಬಿಜೆಪಿ ಭರವಸೆ ನೀಡಿದ ನಂತರ ಈ ಸಂಗತಿಗಳು ನಡೆಯುತ್ತಿವೆ. ಅವರು ಈ ಭರವಸೆಗಳನ್ನು ನೀಡದಿದ್ದರೆ, ನಾವು ದೂರು ಮಾತ್ರ ನೀಡುತ್ತಿದ್ದೆವು” ಎಂದು ಹೇಳಿದ್ದಾರೆ.

ಇನ್ನೂ ಮುಂದುವರೆದು “ಶ್ರೀ ರಾಮ ತನ್ನ ವಾಕ್ಯ ಪರಿಪಾಲನೆಗೆ ಹೆಸರುವಾಸಿಯಾಗಿದ್ದಾನೆ. ಆದರೆ ಬಿಜೆಪಿಗರು ಶ್ರೀ ರಾಮನ ಹೆಸರಿನಲ್ಲಿ ಎರಡು ಬಾರಿ ಅಧಿಕಾರ ಹಿಡಿದರು. ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರವನ್ನು ಕಟ್ಟಿದರು. ಆದರೆ ರಾಮನ ಆದರ್ಶಗಳನ್ನು ಅವರು ಎಂದಿಗೂ ಪಾಲಿಸುತ್ತಿಲ್ಲ” ಎಂದು ದೂರಿದ್ದಾರೆ.

ಆದ್ದರಿಂದ ಸೋನಮ್ ವಾಂಗ್ಚುಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು


ಇದನ್ನು ಓದಿ: JNU ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ABVP ನಾಲ್ಕು ಸ್ಥಾನ ಗಳಿಸಿದೆ ಎಂದು ಸುದ್ದಿ ತಿರುಚಿದ ಕನ್ನಡ ಮಾಧ್ಯಮಗಳು


ವಿಡಿಯೋ ನೋಡಿ: Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *