ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಪರ ಚುನಾವಣಾ ಪ್ರಚಾರದಲ್ಲಿ ಅಭಿಮಾನಿಗಳು ಪಾಕಿಸ್ತಾನ್‌ಕಿ ಜೈ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ 20 ಸೆಕೆಂಡ್‌ಗಳ ವಿಡಿಯೋವೊಂದನ್ನು ವಾಟ್ಸಾಪ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ವಿಡಿಯೋದಲ್ಲಿ ಡಿ.ಕೆ ಸುರೇಶ್‌ರವರು ಇರುವುದರಿಂದ ಇಂದಿನ ಅವರ ಚುನಾವಣಾ ಪ್ರಚಾರದ ಸುದ್ದಿಗಳನ್ನು ಹುಡುಕಿದಾಗ ಹೆಚ್.ಸಿ ಬಾಲಕೃಷ್ಣ ಎಂಬ ಫೇಸ್‌ಬುಕ್ ಖಾತೆಯಲ್ಲಿ ಇದೇ ವಿಡಿಯೋವನ್ನು ಲೈವ್ ಮಾಡಿರುವುದು ಕಂಡುಬಂದಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರದಲ್ಲಿ ಇಂದು ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಈ ವಿಡಿಯೋ ಚಿತ್ರೀಕರಿಸಿರುವುದು ಕಂಡುಬಂದಿದೆ.
ರೋಡ್ ಶೋ ವೇಳೆ ಕಾಂಗ್ರೆಸ್ ಅಭಿಮಾನಿಯೊಬ್ಬರು ಬಾಲಕೃಷ್ಣಕಿ ಜೈ, ಡಿ.ಕೆ ಸುರೇಶ್‌ಕಿ ಜೈ, ಹೆಚ್.ಎಂ ರೇವಣ್ಣಕಿ ಜೈ ಎಂದು ಘೋಷಣೆ ಕೂಗಿದ್ದಾರೆ. ಹೀಗೆ ಘೋಷಣೆ ಕೂಗಿವಾಗ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ, ಸಂಸದ ಡಿ.ಕೆ ಸುರೇಶ್ ಮತ್ತು ಹೆಚ್.ಎಂ ರೇವಣ್ಣನವರು ಪ್ರಚಾರ ವಾಹನದಲ್ಲಿ ಕಂಡುಬರುತ್ತಾರೆ. ಲೈವ್ ವಿಡಿಯೋದ 17ನೇ ಸೆಕೆಂಡ್ ಮತ್ತು 21ನೇ ಸೆಕೆಂಡ್‌ನಲ್ಲಿ ಅವರು ಸ್ಪಷ್ಟವಾಗಿ ಬಾಲಕೃಷ್ಣಕಿ ಎಂದು ಕೂಗುವುದನ್ನು ನೋಡಬಹುದು.
ಮೂಲ ವಿಡಿಯೋ ಹೆಚ್.ಸಿ ಬಾಲಕೃಷ್ಣರವರ ಫೇಸ್‌ಬುಕ್ ಲೈವ್‌ನಲ್ಲಿದೆ. ಆದರೆ ಕಿಡಿಗೇಡಿಗಳು ಬಾಲಕೃಷ್ಣಕಿ ಜೈ ಎಂದಿದ್ದನ್ನು ಪಾಕಿಸ್ತಾನ್‌ಕಿ ಜೈ ಎಂದು ಸುಳ್ಳು ಹಬ್ಬಿಸಿದ್ದಾರೆ ಅಷ್ಟೆ.
ಇದನ್ನೂ ಓದಿ; ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಶಿವರಾಜ್‌ಕುಮಾರ್ ಅಲ್ಪಸಂಖ್ಯಾರತನ್ನು ಓಲೈಸಲು ಕುಂಕುಮ ಅಳಿಸಿದ್ದಾರೆ ಎಂಬುದು ಸುಳ್ಳು
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ