Fact Check: ಮೋದಿಜಿ ರ್ಯಾಲಿಯಲ್ಲಿ ಜನಸ್ತೋಮ ಎಂದು 2019ರ ಕಾಂಗ್ರೆಸ್‌ ಸಮಾವೇಶದ ವಿಡಿಯೋ ಹಂಚಿಕೆ

ಲೋಕಸಭಾ ಚುನಾವಣೆಯ ಬಿಜೆಪಿಯ ರಾಜಕೀಯ ಪ್ರಚಾರದ ಭಾಗವಾಗಿ ಭಾನುವಾರ ರಾಜಸ್ಥಾನದ ಜಲೋರ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ, ಅನೇಕ ಸಾಮಾಜಿಕ ಮಾಧ್ಯಮದ ಬಳಕೆದಾರರು ರಸ್ತೆಯೊಂದರಲ್ಲಿ ಭಾರಿ ಜನಸಮೂಹ ಸೇರಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದನ್ನು ಜಲೋರ್‌ನಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಯ ಸಂದರ್ಭದ್ದು ಎಂದು ಹಂಚಿಕೊಳ್ಳಲಾಗುತ್ತಿದೆ.

“ಇದು ರಾಜಸ್ಥಾನದ ಜಲೋರ್‌ನಲ್ಲಿ ಮೋದಿಜಿ ರ್ಯಾಲಿಗೂ ಮುನ್ನ ದೃಶ್ಯವಾಗಿದೆ. ಅಶೋಕ್ ಗೆಹ್ಲೋಟ್ ಅವರ ಪುತ್ರ ಜಲೋರ್ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ಬಿಜೆಪಿ 400 ದಾಟಲಿದೆ.” ಎಂಬ ಸಂದೇಶಗಳೊಂದಿಗೆ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋ ಕಾಂಗ್ರೆಸ್ ಸಮಾವೇಶದ ಕಾರ್ಯಕ್ರಮದ್ದಾಗಿದೆ. ಏಪ್ರಿಲ್ 25, 2019 ರಂದು ಜಲೋರ್ ಸೇರಿದಂತೆ ರಾಜಸ್ಥಾನದ ಅನೇಕ ಸ್ಥಳಗಳಲ್ಲಿ ಕಾಂಗ್ರೆಸ್ ರ್ಯಾಲಿಗಳನ್ನು ಆಯೋಜಿಸಿತ್ತು. ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕಾರ್ಯಕ್ರಮದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ನಾವು ಫೇಸ್‌ಬುಕ್‌ನಲ್ಲಿ “ರಾಮಸೀನ್” ಮತ್ತು “ಕಾಂಗ್ರೆಸ್” ಕೀವರ್ಡ್‌ಗಳನ್ನು ಬಳಸಿ ಹುಡುಕಾಟದ ನಡೆಸಿದಾಗ @ML Bishnoi Chadi ಎನ್ನುವವರ ಪೋಸ್ಟ್ ಲಭ್ಯವಾಗಿದ್ದು ಇದರಲ್ಲಿ ಏಪ್ರಿಲ್ 25, 2019 ರಂದು ಜಲೋರ್‌ನ ರಾಮ್‌ಸೀನ್‌ನಲ್ಲಿ ಕಾಂಗ್ರೆಸ್ ರ್ಯಾಲಿಯಿಂದ ಬಂದವರ ದೃಶ್ಯಗಳು ಎಂದು ಪೋಸ್ಟ್ ಮಾಡಲಾಗಿದೆ.

ವೈರಲ್ ವಿಡಿಯೋವನ್ನು 2019 ರ ಏಪ್ರಿಲ್ 26 ರಂದು SVG CSO ನಿಂದ “ರಾಮ್‌ಸೀನ್ (ಜಲೋರ್) ಕಾಂಗ್ರೆಸ್ ಮೀಟಿಂಗ್ (25/04/2019)” ಎಂಬ ಶೀರ್ಷಿಕೆಯೊಂದಿಗೆ YouTube ಗೆ ಅಪ್‌ಲೋಡ್ ಮಾಡಲಾಗಿದೆ.

ಆದ್ದರಿಂದ ಇದು ಪ್ರಧಾನಿ ಮೋದಿ ಭಾಗವಹಿಸಿದ ಬಿಜೆಪಿ ರ್ಯಾಲಿಯ ವಿಡಿಯೋ ಎಂಬುದು ಸುಳ್ಳು. ಕಾಂಗ್ರೆಸ್‌ ಸಮಾವೇಶದ ಪೋಟೋ ಮತ್ತು ವಿಡಿಯೋಗಳನ್ನು ಇತ್ತೀಚಿನ ಬಿಜೆಬಿ ಸಮಾವೇಶದ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: Fact Check: ರಾಜಸ್ತಾನದಲ್ಲಿ ಜಮೀನು ವ್ಯಾಜ್ಯದ ಗಲಾಟೆಯನ್ನು ಹಿಂದು ಮನೆಗೆ ಕಲ್ಲು ತೂರಾಟ ಎಂದು ತಪ್ಪಾಗಿ ಹಂಚಿ


ವಿಡಿಯೋ ನೋಡಿ: Fact Check | ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *