Fact Check | ಕಾಂಗ್ರೆಸ್ ಪರಿಶಿಷ್ಟರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿತ್ತು ಎಂದು ಸುಳ್ಳು ಹೇಳಿದ ಪ್ರಧಾನಿ ಮೋದಿ

“ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರದ ಅವಕಾಶ ಸಿಕ್ಕಾಗ ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟರಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ನಾವು ರದ್ದುಗೊಳಿಸಿ ವಾಪಾಸ್ ಪರಿಶಿಷ್ಟರಿಗೆ ನೀಡಿದ್ದೇವೆ.” ಎಂದು ಪ್ರಧಾನಿ ನರೇಂದ್ರ ಮೋದಿ  ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಇದೇ ವಿಡಿಯೋವನ್ನು ಕರ್ನಾಟಕ ಬಿಜೆಪಿ ತನ್ನ ಎಕ್ಸ್‌ ಖಾತೆಯಲ್ಲಿ ಕೂಡ ಹಂಚಿಕೊಂಡಿದೆ.

ಇದರ ಜೊತೆಗೆ ಇನ್ನೂ ಮುಂದುವರೆದು ” 2004 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾಡಿದ ಮೊದಲ ಕೆಲಸವೆಂದರೆ ಆಂಧ್ರ ಪ್ರದೇಶದಲ್ಲಿ ಪರಿಶಿಷ್ಟರ ಮೀಸಲಾತಿಯನ್ನು ಕಡಿತಗೊಳಿಸಿ ಮುಸಲ್ಮಾನರಿಗೆ ಅಂದಿನ ಕಾಂಗ್ರೆಸ್‌ ಸರ್ಕಾರ ಮೀಸಲಾತಿಯನ್ನು ನೀಡಿತ್ತು” ಎಂದು ಹೇಳಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ ಪ್ರಧಾನಿ ಮೋದಿ ಹೇಳಿದ್ದರಲ್ಲಿ ಎಷ್ಟು ನಿಜ  ಮತ್ತು ಎಷ್ಟು ಸುಳ್ಳು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಪ್ರಧಾನಿ ಮೋದಿ ಅವರ ಹೇಳಿಕೆಗೆ ಸರಿಯಾದ ಸಾಕ್ಷಿ ಕಂಡು ಬಾರದ ಕಾರಣ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಈ ಕುರಿತು ಸತ್ಯ ಶೋಧನೆ ನಡೆಸಲು ಮುಂದಾಯಿತು. ಇದಕ್ಕಾಗಿ ಮೊದಲು ಕರ್ನಾಟಕದ ಬಿಜೆಪಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಮೀಸಲಾತಿ ಕಡಿತ ಗೊಳಿಸಿ ಮುಸಲ್ಮಾನರಿಗೆ ಮೀಸಲಾತಿ ನೀಡಿರುವ ಯಾವುದಾದರು ವರದಿಗಳು ಇದೆಯೇ ಎಂದು ಹುಡುಕಾಟ ನಡೆಸಿತು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ.

ರಾಜ್ಯದಲ್ಲಿ ಯಾವುದೇ ಮೀಸಲಾತಿ ಕಡಿತಗೊಳಿಸಿದ ಕುರಿತು ಒಂದೇ ಒಂದು ವರದಿಗಳು ಇದುವರೆಗೂ ಕೂಡ ಕಂಡು ಬಂದಿಲ್ಲ. ಕರ್ನಾಟಕದಲ್ಲಿ ಯಾವುದೇ ಸರ್ಕಾರವು ಇದುವರೆಗೂ ಪರಿಶಿಷ್ಟರ ಮೀಸಲಾತಿ ಕಿತ್ತುಕೊಂಡ, ಕಡಿಮೆ ಮಾಡಿದ ವರದಿಗಳಿಲ್ಲ. ಹಿಂದುಳಿದ ವರ್ಗಗಳ ಅಡಿಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡಲಾಗಿದೆ ಹೊರತು ಪರಿಶಿಷ್ಟ ಜಾತಿಯಿಂದ ಕಿತ್ತುಕೊಂಡು ಕೊಟ್ಟಿಲ್ಲ ಎಂಬುದು ತಿಳಿದು ಬಂದಿದೆ.

ಇನ್ನೂ ಆಂಧ್ರ ಪ್ರದೇಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯ ಆಧಾರದ ಮೇಲೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದಾಗ ಎಕನಾಮಿಕ್ಸ್‌ ಟೈಮ್ಸ್‌ ವರದಿಯೊಂದು ಪತ್ತೆಯಾಗಿದೆ. ಅದರಲ್ಲಿ ಕರ್ನಾಟಕದಂತೆ ಆಂಧ್ರ ಪ್ರದೇಶದಲ್ಲಿಯೂ ದಲಿತರ ಮೀಸಲಾತಿ ಕಡಿಮೆ ಮಾಡಿಲ್ಲ. ಬದಲಿಗೆ 4.5% ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದೆ ಎಂಬುದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಈ ಬಾರಿಯ ಲೋಕಸಭೆ ಚುನಾವಣೆಯನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಜನರ ದಾರಿ ತಪ್ಪಿಸಲು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ. ಹಾಗಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ


ಇದನ್ನೂ ಓದಿ : ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ಈ ವಿಡಿಯೋ ನೋಡಿ :  ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *