Fact Check: ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬ ರಾಹುಲ್ ಗೆಲುವಿಗಾಗಿ ಹಸುವನ್ನು ಬಲಿ ನೀಡಿದ್ದಾನೆಂಬುದು ಸುಳ್ಳು

ಮಣಿಪುರದಲ್ಲಿ ಕುಕಿ ಮತ್ತು ಮೇಥಿ ಸಮುದಾಯಗಳ ನಡುವೆ ಹಿಂಸಾಚಾರ ಪ್ರರಂಭವಾಗಿ ಅನೇಕ ತಿಂಗಳುಗಳೇ ಕಳೆದರು ಕೇಂದ್ರ ಸರ್ಕಾರವಾಗಲಿ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಾಗಲೀ ಒಮ್ಮೆಯೂ ಈ ಬಿಕ್ಕಟ್ಟನ್ನು ಬಗೆ ಹರಿಸುವ ಕುರಿತು ಒಂದೇ ಒಂದು ಮಾತು ಆಡಿಲ್ಲ. ಮಣಿಪುರದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ತಮ್ಮ ಆಡಳಿ ಇರುವ ರಾಜ್ಯದ ಜನರನ್ನು ಕೇಂದ್ರ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಈ ಹಿಂಸಾಚಾರ ಪ್ರಾರಂಭವಾಗಲು ಬಿಜೆಪಿಯ ಒಡೆದು ಆಳುವ ನೀತಿಯೇ ಕಾರಣ ಅಥವಾ ದ್ವೇಷ ರಾಜಕಾರಣವೇ ಕಾರಣ ಎಂದು ದೇಶದ ಜನರು ಟೀಕಿಸುತ್ತಿದ್ದಾರೆ.

ಈಗ, ಕಾಂಗ್ರೆಸ್ ಪಕ್ಷವು ಹಿಂದೂಗಳ ಮೇಲಿನ ದ್ವೇಷದ ಉತ್ತುಂಗವನ್ನು ದಾಟಿದೆ. ಈ ಕಿಡಿಗೇಡಿಯ ಹೆಸರು ಮೊಹಮ್ಮದ್ ಮುಜಾಹಿದ್ ಇಸ್ಲಾಂ ಮತ್ತು ಈತ ಕೇರಳ ಕಾಂಗ್ರೆಸ್‌ನ ಮಾಧ್ಯಮ ಉಸ್ತುವಾರಿ. ಈತ ರಾಹುಲ್ ಗಾಂಧಿ ಗೆಲುವಿಗಾಗಿ ಗೋವನ್ನು ಗುಂಡಿಟ್ಟು ಬಲಿ ಕೊಟ್ಟಿದ್ದಾನೆ. ಎಂದು ಆರೋಪಿಸಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಈ ಚಿತ್ರದಲ್ಲಿರುವ ವ್ಯಕ್ತಿ ಮಣಿಪುರದ ಕುಕಿ ಸಮುದಾಯದವನಾಗಿದ್ದಾನೆ. ಮಣಿಪುರದ ಹಿಂಸಾಚಾರದಲ್ಲಿ ಮೇಥಿ ಸಮುದಾಯಕ್ಕೆ ಸೇರಿದ ಸಾಕು ಪ್ರಾಣಿಗಳನ್ನು ಕಳ್ಳತನ ಮಾಡಿ ಕ್ರೂರವಾಗಿ ಕೊಲ್ಲಲಾಗುತ್ತಿದೆ. ಈ ಮೂಲಕ ಮೇಥಿ ಸಮುದಾಯದ ಆರ್ಥಿಕವಾಗಿ ಹಿಂದುಳಿಯಲು ಮತ್ತು ಪೂಜನೀಯವಾಗಿ ಕಾಣುವ ಹಸುಗಳನ್ನು ಕೊಲ್ಲುವ ಮೂಲಕ ತಮ್ಮ ದ್ವೇಷ ತೀರಿಸಿಕೊಳ್ಳಲಾಗುತ್ತಿದೆ. ಎಂದು ಡಿಫೆನ್ಸ್‌ ನ್ಯೂಸ್ ಅವರು ವರದಿ ಮಾಡಿದ್ದಾರೆ.

ಅನೇಕರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದು ಮೇಥಿಗೆ ಸೇರಿದ ಹಸುಗಳನ್ನು ಕುಕಿ ಮಿಲಿಟೆಂಟ್‌ಗಳು ಕೊಂದಿದ್ದಾರೆ ಎಂದು ಅಮಿತಬ್ ಚೌದರಿ ಎಂಬ ಬಲಪಂಥೀಯ ಕಾರ್ಯಕರ್ತರೊಬ್ಬರು ಹಂಚಿಕೊಂಡಿದ್ದಾರೆ. ಮಣಿಪುರದ ಹಿಂದೂಗಳಾದ ಮೇಥಿಗಳು ದನಗಳನ್ನು ಪವಿತ್ರವಾಗಿ ಕಾಣುತ್ತಾರೆ ಎಂದು ಹಿಂದುತ್ವದ ಶೈಲಿಯಲ್ಲಿ ಸಂದೇಶ ಬರೆಯಲಾಗಿದೆ. ಆದರೆ ಮೇಥಿಗಳು ಸೇರಿದಂತೆ ಮಣಿಪುರದ ಬಹುಸಂಖ್ಯಾತ ಸಮುದಾಯಗಳು ದನದ ಮಾಂಸವನ್ನು ತಿನ್ನುವುದು ಜನರ ಆಹಾರ ಪದ್ದತಿಯಾಗಿದೆ.

 

ಆದ್ದರಿಂದ ಈ ಚಿತ್ರಕ್ಕೂ ಕೇರಳಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಈ ಚಿತ್ರದಲ್ಲಿರುವ ವ್ಯಕ್ತಿ ಮುಸ್ಲಿಂ ಅಲ್ಲ. ವಿಡಿಯೊದಲ್ಲಿರುವ ವ್ಯಕ್ತಿಯ ಮುಖ ಚಹರೆ ನೋಡಿದ ತಕ್ಷಣ ಈತ ಈಶಾನ್ಯ ಭಾರತೀಯ ಎಂದು ಹೇಳಬಹುದು. ಮಣಿಪುರದಲ್ಲಿ ಕುಕಿ ಮತ್ತು ಮೇಥಿ ಸಮುದಾಯಗಳ ನಡುವೆ ದ್ವೇಷ ಬಿತ್ತಿದಂತೆಯೇ ದೇಶದಾದ್ಯಂತ ಮುಸ್ಲಿಂ ಮತ್ತು ಹಿಂದುಗಳ ನಡುವೆ ದ್ವೇಷ ಬಿತ್ತುವ ಸಲುವಾಗಿ ಈ ರೀತಿಯ ಸುಳ್ಳನ್ನು ಹರಿಬಿಡಲಾಗಿದೆ.


ಇದನ್ನು ಓದಿ: ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಗಾಂಧಿ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿಲ್ಲ


ವಿಡಿಯೋ ನೋಡಿ: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *