ರಾಜಕೀಯ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಆದರೆ ಈಗ ಅವರ ಮಕ್ಕಳ ಮೇಲೂ ಸಹ ಅನಾಗತ್ಯವಾದ ಆರೋಪಗಳನ್ನು, ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ.
“ಮಿರಾಯ ವಾದ್ರಾ, ರಾಬರ್ಟ್ ವಾದ್ರಾ ಮತ್ತು ಪ್ರಿಯಾಂಕಾ ವಾದ್ರಾ ಅವರ ಪುತ್ರಿ, ಆಕೆಯ ನಿವ್ವಳ ಮೌಲ್ಯ 376 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 3,126 ಕೋಟಿ ರೂ. ತಂದೆ ರಾಬರ್ಟ್ ವಾದ್ರಾ ಅವರ ಸಂಪತ್ತು $2.1 ಬಿಲಿಯನ್ ಅಂದರೆ ಸರಿಸುಮಾರು 17,458 ಕೋಟಿ ರೂ. ಮಿರಾಯ ವಾದ್ರಾ ತನ್ನ 21 ನೇ ವಯಸ್ಸಿನಲ್ಲಿ ತನ್ನ ಹೆಸರಿನಲ್ಲಿ ಇಷ್ಟೊಂದು ಸಂಪತ್ತು ಹೇಗೆ ಬಂತು?” ಎಂದು ಪ್ರತಿಪಾದಿಸಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್: ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಮಗಳಾಗಿರುವ ಮಿರಾಯ ವಾದ್ರಾ, ಇತ್ತೀಚೆಗೆ ರಾಜಸ್ತಾನದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ನಡೆದ “ನಾರಿ ಶಕ್ತಿ ಪಾದಯಾತ್ರ” ನಡಿಗೆಯಲ್ಲಿ ತನ್ನ ಮಾವ ರಾಹುಲ್ ಗಾಂಧಿಯವರ ಜೊತೆಗೆ ಭಾಗವಹಿಸಿದ ಸುದ್ದಿ ಬಿಟ್ಟರೆ ಅವರ ಕುರಿತು ಯಾವ ಮಾಹಿತಿಯೂ ಲಭ್ಯವಿಲ್ಲ. ಮಿರಾಯ ಆಸ್ತಿಯ ಕುರಿತು ಯಾವ ಮಾಧ್ಯಮಗಳು ಸಹ ವರದಿ ಮಾಡಿಲ್ಲ. ಪ್ರಿಯಾಂಕಾ ಮತ್ತು ರಾಬರ್ಟ್ ಅವರ ಇಬ್ಬರು ಮಕ್ಕಳಿದ್ದು, ಅದರಲ್ಲಿ ಮಿರಾಯಾ ಕಿರಿಯವಳು. ಮತ್ತು ಆಕೆ ಅಥ್ಲೆಟ್ ಆಗಿ ಹೆಸರು ಮಾಡಿದ್ದಾಳೆ. ಅವರ ಮಗ ರೆಹಾನ್ ತನ್ನ ಸಹೋದರಿಗಿಂತ ಒಂದು ವರ್ಷ ಹಿರಿಯವನಾಗಿದ್ದಾನೆ. ಸಧ್ಯ ಇಬ್ಬರೂ ಕಾಲೇಜು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.
ಆದರೆ ಉಧ್ಯಮಿ ಆಗಿರುವ ತಂದೆ ರಾಬರ್ಟ್ ವಾದ್ರಾ ಅವರ ಬಳಿ $2.1 ಬಿಲಿಯನ್ ಅಂದರೆ ಸರಿಸುಮಾರು 15,000 ಕೋಟಿ ರೂ ಆಸ್ತಿ ಇದೆ. ರಾಬರ್ಟ್ ವಾದ್ರಾ ಅವರ ಸಂಪತ್ತು ಮತ್ತು ಆಸ್ತಿ ವಿವಾದ, ಅವರ ರಿಯಲ್ ಎಸ್ಟೇಟ್ ವ್ಯವಹಾರಗಳು ಮತ್ತು ಒಟ್ಟು ಮೌಲ್ಯದ ಕುರಿತಂತೆ ಆರೋಪಗಳಿವೆ. ವಾದ್ರಾ ಅವರು ವಿವಿಧ ವಂಚನೆಗಳ ಆರೋಪ ಹೊತ್ತಿದ್ದಾರೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಆರೋಪಗಳನ್ನು ಎದುರಿಸಿದ್ದಾರೆ. ರಾಜಕೀಯವಾಗಿ ಸಹ ಅನೇಕ ವಿರೋದ ಪಕ್ಷಗಳ ಆರೋಪಗಳಿಗೆ ವಾದ್ರಾ ಅವರು ಗುರಿಯಾಗಿದ್ದಾರೆ.
ತನ್ನ ತಂದೆ ಉದ್ಯಮಿ ಆಗಿರುವುದರಿಂದ ಸಾಮಾನ್ಯವಾಗಿಯೇ ಮಿರಾಯಾ ಮತ್ತು ರೆಹಾನ್ ವಾದ್ರಾ ಅವರು ಆರ್ಥಿಕವಾಗಿ ಸಭಲರಾಗಿದ್ದಾರೆ. ಪ್ರಿಯಾಂಕಾ ಮತ್ತು ರಾಬರ್ಟ್ ದಂಪತಿಗಳು ಆದಷ್ಟು ತಮ್ಮ ಮಕ್ಕಳನ್ನು ರಾಜಕೀಯದಿಂದ ದೂರ ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಮಿರಾಯ ಅವರ ಒಟ್ಟು ಆಸ್ತಿಯ ಕುರಿತು ಎಲ್ಲಿಯೂ ಮಾಹಿತಿ ಲಭ್ಯವಿಲ್ಲ.
ವಿಡಿಯೋ ನೋಡಿ: ರಾಯಚೂರಿನಲ್ಲಿ ರವಿ ಸಾಬ್ ಜಿಂದಾಬಾದ್ ಎಂದಿದ್ದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ