ಹಲವಾರು ಜನರು ರಾಮ, ಹನುಮ ಸೇರಿದಂತೆ ಹಲವು ಹಿಂದೂ ದೇವತೆಗಳ ಪೋಸ್ಟರ್, ಬ್ಯಾನರ್ ಹರಿದು ಹಾಕುತ್ತಿರುವ, ಅವುಗಳನ್ನು ತುಳಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಿಂದೂ ದೇವತೆಗಳ ಫೋಟೋ ಹರಿದು ಸನಾತನಾ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೇಲ್ನೋಟಕ್ಕೆ ಈ ರೀತಿ ಪೋಸ್ಟರ್ ಹರಿದು ಪ್ರತಿಭಟನೆ ಮಾಡುತ್ತಿರುವವು ಕಾಂಗ್ರೆಸ್ ಬೆಂಬಲಿಗರಲ್ಲ, ಬದಲಿಗೆ ಬಿಜೆಪಿ ಕಾರ್ಯಕರ್ತರು ಎಂದು ಅವರು ಹಾಕಿರುವ ಬಿಜೆಪಿ ಶಾಲುಗಳಿಂದಲೇ ತಿಳಿಯುತ್ತದೆ. ಈ ಕೆಳಗಿವ ಟ್ವೀಟ್ ವಿಡಿಯೋ ಗಮನಿಸಿ.
देखिये भाजपा महिला मोर्चे की शर्मनाक हरकत कॉंग्रेस से नफरत और घृणा मे इन्होने प्रभु श्री रामचंद्र जी और हनुमान जी के चित्रों को भी पेरो तले कुचला..@jitupatwari जी
के विरोध के चलते प्रभु श्री रामचंद्र जी को भी पैरों तले कुचलने से इन्होंने गुरेज नहीं किया.. @BJP4MP @INCMP 👇🏻🔥 pic.twitter.com/HdPDQ1wU5s— 🇮🇳 AMIT CHOURASIA 🏹 🎯 (@amit77721) May 3, 2024
ಹೆಚ್ಚಿನದಾಗಿ ಈ ಕುರಿತು ಹುಡುಕಿದಾಗ 2024ರ ಮೇ 3ರಂದು ಪ್ರಕಟವಾದ ಹಲವು ಪತ್ರಿಕಾ ವರದಿಗಳು ದೊರಕಿವೆ. ವರದಿಗಳ ಪ್ರಕಾರ ಈ ಘಟನೆಯು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿಯವರ ಮನೆ ಎದುರು ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ನಡೆಸಿದ ಪ್ರತಿಭಟನೆ ಎಂದು ತಿಳಿಸಲಾಗಿದೆ. ಜಿತು ಪಟ್ವಾರಿಯವರು ಮಾಜಿ ಸಚಿವ ಇಮಾರ್ತಿ ದೇವಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆದಿದೆ.
ಪ್ರತಿಭಟನೆಯ ವೇಳೆ ಜಿತು ಪಟ್ವಾರಿಯವರ ಬ್ಯಾನರ್ ಹರಿದು ಕಾಲಿನಿಂದ ತುಳಿಯಲಾಗಿದೆ. ಅದೇ ಬ್ಯಾನರ್‌ನಲ್ಲಿ ರಾಮ, ಹನುಮ ಸೇರಿದಂತೆ ಹಲವು ಹಿಂದೂ ದೇವತೆಗಳ ಫೋಟೊ ಮುದ್ರಿಸಲಾಗಿತ್ತು. ಈ ವಿಡಿಯೋ ವೈರಲ್ ಆದಾಗ ಬಿಜೆಪಿಯು ದೇವರುಗಳನ್ನು ಸಹ ಗೌರವಿಸುವುದಿಲ್ಲ ಎಂದು ಆರೋಪಿಸಿದೆ. ಅದೇ ಸಮಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಹಿಂದೂ ದೇವತೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಬನ್ಸಾಲ್ ನ್ಯೂಸ್ ವರದಿ ಮಾಡಿದೆ.
ಈ ಎಲ್ಲಾ ಆಧಾರಗಳಿಂದ ರಾಮ, ಹನುಮರ ಪೋಸ್ಟರ್ ಹರಿದವರು ಬಿಜೆಪಿ ಸದಸ್ಯರೇ ಹೊರತು ಕಾಂಗ್ರೆಸ್ ಬೆಂಬಲಿಗರಲ್ಲ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ; Fact Check: ಮನಮೋಹನ್ ಸಿಂಗ್ ಅವರ 18 ವರ್ಷಗಳ ಹಳೆಯ ಭಾಷಣದ ಕುರಿತು ಸುಳ್ಳು ಹೇಳಿದ ಪ್ರಧಾನಿ ಮೋದಿ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ