Fact Check: ಕಳೆದೊಂದು ದಶಕದಲ್ಲಿ ನೋಯ್ಡಾ ನಗರ ಎಷ್ಟು ಅಭಿವೃದ್ಧಿಯಾಗಿದೆ ನೋಡಿ ಎಂದು ದುಬೈನ ಚಿತ್ರ ಹಂಚಿಕೊಳ್ಳಲಾಗುತ್ತಿದೆ

ನೋಯ್ಡಾ

ಕಳೆದೊಂದು ದಶಕದಲ್ಲಿ ಉತ್ತರ ಪ್ರದೇಶದ ನೋಯ್ಡಾ ಹೇಗೆ ಅಭಿವೃದ್ಧಿ ಹೊಂದಿದೆ ನೋಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಒಂದು 2015 ರಿಂದ ಇನ್ನೊಂದು 2024 ರಲ್ಲಿ ಎಂದು ನಗರವೊಂದರ ಎರಡು ವೈಮಾನಿಕ ಚಿತ್ರಗಳನ್ನು ತೋರಿಸುತ್ತದೆ. ಹಾಗಾದರೆ ನಿಜಕ್ಕೂ ನೋಯ್ಡಾ ಕೆಳಗಿನ ಚಿತ್ರದಲ್ಲಿ ತೋರಿಸಲಾಗಿರುವಷ್ಟು ಅಭಿವೃದ್ದಿಯಾಗಿದೆಯೇ ನೋಡೋಣ ಬನ್ನಿ. 

ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೊದಲ್ಲಿ ಬರುವ ಮೊದಲ ಕ್ಲಿಪ್, 2015 ರಲ್ಲಿ ಚಿತ್ರೀಕರಿಸಲಾಗಿದೆ, ಇದು ಹೆದ್ದಾರಿ ಜಂಕ್ಷನ್ ಅನ್ನು ತೋರಿಸುತ್ತದೆ. ನಮ್ಮ ತಂಡ ಇದನ್ನು Google ನಕ್ಷೆಯ ಮೂಲಕ ನೋಯ್ಡಾದ ಇದೇ ಪ್ರದೇಶಗಳಿಗೆ ಹೋಲಿಸಿ ಮತ್ತು ನಿಖರವಾದ ಸ್ಥಳವನ್ನು ಕಂಡುಕೊಂಡಿದ್ದೇವೆ: ಇದು ನೋಯ್ಡಾ-ಗ್ರೇಟರ್ ನೋಯ್ಡಾ ಲಿಂಕ್ ರಸ್ತೆ. ವೀಡಿಯೊದಲ್ಲಿ ಗೋಚರಿಸುವ ಹಲವಾರು ವೈಶಿಷ್ಟ್ಯಗಳು ಉಪಗ್ರಹ ಚಿತ್ರದಲ್ಲಿ ಇವೆ.

ಗೂಗಲ್ ನಕ್ಷೆಗಳ ಉಪಗ್ರಹ ಚಿತ್ರದ ಹೋಲಿಕೆ ಮತ್ತು ವೈರಲ್ ವೀಡಿಯೊ ಕ್ಲಿಪ್‌ನಿಂದ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಬಹುದು:

ವೈರಲ್ ವೀಡಿಯೊದಲ್ಲಿನ ಎರಡನೇ ಕ್ಲಿಪ್‌ನಿಂದ ನಾವು ಹಿಮ್ಮುಖವಾಗಿ ಹುಡುಕಿದೆವು. ಇದೇ ರೀತಿಯ ದೃಶ್ಯಗಳನ್ನು ವಿವಿಧ ಪೋಸ್ಟ್‌ಗಳಲ್ಲಿ ದುಬೈನ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಹಿಡಿದಿದ್ದೇವೆ.

ಈ ಪೋಸ್ಟ್‌ಗಳು ದುಬೈನ ಯಾವ ಭಾಗವನ್ನು ತೋರಿಸುತ್ತಿವೆ ಎಂಬುದನ್ನು ನಿರ್ದಿಷ್ಟಪಡಿಸದಿದ್ದರೂ, ನಾವು ವೀಡಿಯೊದಲ್ಲಿ ವಿಶಿಷ್ಟವಾದ ಕಟ್ಟಡದ ಮೇಲ್ಛಾವಣಿಯನ್ನು ಗಮನಿಸಿದ್ದೇವೆ, ಅದರ ಕೆಳಗೆ ಮೆಟ್ರೋ ಮಾರ್ಗವು ಹಾದುಹೋಗುತ್ತದೆ. ನಾವು ದುಬೈನ ವಿವಿಧ ಮೆಟ್ರೋ ಸ್ಟೇಷನ್ ಕಟ್ಟಡಗಳನ್ನು ಹುಡುಕಿದೆವು ಮತ್ತು ವೈರಲ್ ವೀಡಿಯೊಗೆ ಹೋಲುವ ಒಂದ ಚಿತ್ರವನ್ನು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೊದಲ್ಲಿ ತೋರಿಸಿರುವ ಮೆಟ್ರೋ ನಿಲ್ದಾಣವನ್ನು ನಾವು ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿರುವ ಮಶ್ರೆಕ್ ಮೆಟ್ರೋ ನಿಲ್ದಾಣ ಎಂದು ಜಿಯೋಲೊಕೇಶನ್ ಮೂಲಕ ಪತ್ತೆ ಮಾಡಿದ್ದೇವೆ. ನಾವು ರಸ್ತೆ ವೀಕ್ಷಣೆಯ ಮೂಲಕ ಮತ್ತು ಹತ್ತಿರದ ಸ್ಥಳಗಳು ಮತ್ತು ನಿರ್ಮಾಣಗಳನ್ನು ಪರಿಶೀಲಿಸುವ ಮೂಲಕ ಸ್ಥಳವನ್ನು ಖಚಿತಪಡಿಸಿಕೊಂಡಿದ್ದೆವೆ.

ವೈರಲ್ ವೀಡಿಯೊ ಮತ್ತು Google ನಕ್ಷೆಗಳ ಸ್ಕ್ರೀನ್‌ಶಾಟ್‌ಗಳ ಹೋಲಿಕೆಯನ್ನು ಕೆಳಗೆ ನೋಡಬಹುದು:

ಹೀಗಾಗಿ, ಕಳೆದ ದಶಕದಲ್ಲಿ ನೋಯ್ಡಾದ ಬೆಳವಣಿಗೆಯನ್ನು ವೀಡಿಯೊ ತೋರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಏಕೆಂದರೆ ಇದರಲ್ಲಿ ನೋಯ್ಡಾ ಎಂದು ತೋರಿಸಲಾಗಿಲಿರುವ ಇನ್ನೋಂದು ಕ್ಲಿಪ್ ದುಬೈನದಾಗಿದ್ದು, ಭಾರತದದ್ದಲ್ಲ.


ಇದನ್ನು ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಅತಿಥಿ ಉಪನ್ಯಾಸಕಿ ಸಾವಿನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ


ವಿಡಿಯೋ ನೋಡಿ: ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *