Fact Check | ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಅತಿಥಿ ಉಪನ್ಯಾಸಕಿ ಸಾವಿನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ

ಚನ್ನರಾಯಪಟ್ಟಣದಲ್ಲಿನ ಗಾಯತ್ರಿ ಬಡಾವಣೆಯ ದೀಪಾ (34) ಎಂಬ ಅತಿಥಿ ಉಪನ್ಯಾಸಕಿ ಸಾವನ್ನಪ್ಪಿರುವ ಪ್ರಕರಣದಲ್ಲಿ ಪ್ರಜ್ವಲ ರೇವಣ್ಣ ವಿಡಿಯೋ ಲೀಕ್ ವಿಚಾರಕ್ಕೆ ಸಂಬಂಧವಿದೆ ಎಂಬ ರೀತಿಯಲ್ಲಿ, ಬರಹದೊಂದಿಗೆ ಡಿಜಿಟಲ್‌ ನ್ಯೂಸ್‌ನ ವರದಿಯ ಸ್ಕೀನ್‌ಶಾಟ್‌ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದನ್ನು ನೋಡಿದ ಬಹುತೇಕರು ಇದೇ ನಿಜವೆಂದು ನಂಬಿ ಈ ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದಾರೆ. ಆದರೆ ಈ ಪ್ರಕರಣದ ಕುರಿತು ಇನ್ನೂ ತನಿಖೆ ನಡೆಯುತ್ತಿದ್ದರು, ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ,  ಗುಮಾನಿಯ ರೀತಿಯಲ್ಲಿ ಈ ಸುದ್ದಿಯನ್ನು ಹರಡಿರುವುದರಿಂದ ಇದೀಗ ಬಹುತೇಕರು ಇದನ್ನ ನಿಜವೆಂದು ನಂಬಿದ್ದಾರೆ. ಹಾಗಾದರೆ ಈ ಪ್ರಕರಣದ ಕುರಿತ ನೈಜ ಅಂಶಗಳು ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ “ನೋಡ್ರಪ್ಪ ನಿಮ್ಮ ಕಾಮಪಿಶಾಚಿ ಎಂಪಿ ಕಾಮಪುರಾಣದಿಂದ ಮೊದಲನೇ ವಿಕೆಟ್ ಡಮಾರ್” ಎಂಬ ಕೆಟ್ಟ ಮತ್ತು ಅಸಹ್ಯಬರಿತ ವ್ಯಕ್ತಿಗಳಿಂದ ಈ ರೀತಿ ಶೀರ್ಷಿಕೆಯನ್ನು ನೀಡಲಾಗಿದ್ದು, ಡಿಜಿಟಲ್‌ ಸುದ್ದಿಯೊಂದರ ವರದಿಯನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ಇದರ ಸತ್ಯ ಪರಿಶೀಲನೆಗಾಗಿ ಕನ್ನಡ ಫ್ಯಾಟ್ ಚೆಕ್ ತಂಡಕ್ಕೆ ಈ ಪೋಸ್ಟನ್ನು ಸಾರ್ವಜನಿಕರು ಕಳುಹಿಸಿದ್ದರು.

ಇದರ ಬೆನ್ನಲೆ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವೈರಲ್ ಪೋಸ್ಟ್ ನೈಜತೆಯನ್ನು ಪರಿಶೀಲಿಸಲು ಕೆಲವೊಂದು ಕೀ ವರ್ಡ್ಸ್ ಗಳನ್ನ ಬಳಸಿ ಗೂಗಲ್ ನಲ್ಲಿ ಪರಿಶೀಲನೆ ನಡೆಸಿದವು. ಈ ವೇಳೆ ಪೋಸ್ಟ್ ನಲ್ಲಿ ಹೇಳಿರುವಂತೆ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಅತಿಥಿ ಉಪನ್ಯಾಸಕಿಯ ಸಾವಿನ ಪ್ರಕರಣಕ್ಕೂ ಹೋಲಿಕೆಯಾಗುವ ಯಾವುದೇ ವರದಿಗಳು ಕಂಡುಬಂದಿಲ್ಲ.

ಒಂದು ವೇಳೆ ಈ ವಿಚಾರ ನಿಜವೇ ಆಗಿದ್ದರೆ ಅಥವಾ ಈ ಕುರಿತು ಯಾವುದಾದರೂ ಮೂಲಗಳಿಂದ ಸುದ್ದಿ ಹೊರಬಂದಿದ್ದರೆ, ಅದು ಈಗ ರಾಜ್ಯಮಟ್ಟದಲ್ಲಿ ಅಥವಾ ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಸುದ್ದಿ ಆಗಬೇಕಿತ್ತು ಆದರೆ ಅಂತಹ ಯಾವುದೇ ಬೆಳವಣಿಗೆ ಈ ಪ್ರಕರಣದಲ್ಲಿ ನಡೆದಿಲ್ಲ.

ಇನ್ನು ಈ ಅತಿಥಿ ಉಪನ್ಯಾಸಕಿಯ ಸಾವಿನ ವಿಚಾರಕ್ಕೆ ಸಂಬಂಧಪಟ್ಟಂತೆ ಈಕೆ ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಿಕೆಯಾಗಿದ್ದು, ನಗರದ ಗಾಯತ್ರಿ ಬಡಾವಣೆಯ ನಿವಾಸಿಗಳಾದ ಸೋಮಶೇಖರ್ ಮತ್ತು ಭಾಗ್ಯ ದಂಪತಿಯ ಪುತ್ರಿಯಾಗಿದ್ದಾಳೆ ಇನ್ನು ಅವಿವಾಹಿತ ಯಾಗಿದ್ದ 34 ವರ್ಷದ ದೀಪ ಮದುವೆಯಾಗದ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಊಹಿಸಲಾಗಿದೆ. ಆದರೆ ಇದುವೇ ನಿಜ ಎಂಬುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಸದ್ಯಕ್ಕೆ ಪೊಲೀಸ್ ತನಿಖೆ ನಡೆಯುತ್ತಿದ್ದು ಇನ್ನಷ್ಟೇ ಈಕೆಯ ಸಾವಿಗೆ ನಿಜವಾದ ಕಾರಣ ಏನು ಎಂಬುದು ಬಹಿರಂಗವಾಗಬೇಕಿದೆ. ಈ ಕುರಿತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ ವರದಿಯನ್ನು ಮಾಡಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಈ ಅತಿಥಿ ಉಪನ್ಯಾಸಕಿ ಸಾವಿನ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈಕೆಯ ಸಾವಿಗೆ ಮತ್ತು ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಹೋಲಿಕೆ ಮಾಡಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಇಂತಹ ಸುಳ್ಳು ಸುದ್ದಿಯನ್ನು ನಂಬುವ ಮೊದಲು ಎಚ್ಚರವಹಿಸಿ.


ಇದನ್ನೂ ಓದಿ : Fact Check | ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ


ಈ ವಿಡಿಯೋ ನೋಡಿ : Fact Check | ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *