ಬೆಂಗಳೂರಿನಲ್ಲಿರುವ ಏಷ್ಯಾದ ಅತಿ ದೊಡ್ಡ ಪಬ್ ಎಂದು ಹೆಸರಾದ ‘ಈಯಾ ಪಬ್’ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಅವರ ಮಾಲಿಕತ್ವದಲ್ಲಿ ಇದೆ ಎಂಬ ಸುದ್ದಿಯೊಂದು ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ನಮೋ ಕರ್ನಾಟಕ ಮತ್ತು ಸಪೋರ್ಟ್ ಪ್ರತಾಪ್ ಸಿಂಹ ಎಂಬ ಫೇಸ್‌ಬುಕ್ ಪುಟದಿಂದ ಮೊದಲು ಹಂಚಿಕೊಳ್ಳಲಾಗಿತ್ತು. ಈಗ ಇದೇ ಪ್ರತಿಪಾದನೆಯೊಂದರೆ ಗೃಹಲಕ್ಷಿ ಯೋಜನೆಯ ಹಣ ಸಂಗ್ರಹಿಸಿ ಸಿದ್ದರಾಮಯ್ಯನವರ ಸೊಸೆ ಏಷ್ಯಾದ ಅತಿ ದೊಡ್ಡ ಪಬ್ ನಿರ್ಮಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ ಬೆಂಗಳೂರಿನ ಹೆಣ್ಣೂರಿನಲ್ಲಿರುವ ಏಷ್ಯಾದಲ್ಲೇ ಅತಿ ದೊಡ್ಡ ಪಬ್ ಎಂದೆನಿಸಿಕೊಂಡಿರುವ ಈಯಾ ಎಂಬ ಹೆಸರಿನ ಪಬ್ 87,000 ಚದರಡಿ ವ್ಯಾಪಿಸಿದ್ದು, ನಲವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿದೆ ಮತ್ತು ಏಕಕಾಲಕ್ಕೆ ಸಾವಿರದಾ ಎಂಟುನೂರು ಮಂದಿ ಅತಿಥಿಗಳು ಇದರಲ್ಲಿ ಭಾಗವಹಿಸಬಹುದು ಎಂದು ಹೇಳಲಾಗಿದೆ.
ದ ಹಿಂದೂ ವರದಿಯ ಪ್ರಕಾರ, ಮಿಸೊ ಸೆಕ್ಸಿ, ಡ್ಯಾಡಿ(ಇಂದಿರಾ ನಗರ), ಡಯಾಬ್ಲೊ ಮತ್ತು ಬೌಗಿ ಸೇರಿದಂತೆ ಅವರ ಯಶಸ್ವಿ ಆಹಾರ ಮತ್ತು ಪಾನೀಯ (ಎಫ್ ಅಂಡ್ ಬಿ) ಉದ್ಯಮಗಳಿಗೆ ಹೆಸರುವಾಸಿಯಾದ ಲೋಕೇಶ್ ಸುಖಿಜಾ ಅವರು ಓಯಾವನ್ನು ಆರಂಭಿಸಿದ್ದಾರೆ ಎಂದು ಉಲ್ಲೇಖಿಸಿದೆ. ಇದು ಅವರ 40ನೇ ಉಧ್ಯಮವಾಗಿದೆ. ಈ ಕುರಿತು ಎಕನಾಮಿಕ್ಸ್ ಟೈಮ್ಸ್ ಸೇರಿದಂತೆ ಅನೇಕ ಸುದ್ಧಿ ಮಾಧ್ಯಮಗಳು ವರದಿ ಮಾಡಿವೆ.
ಸ್ಮಿತಾರಾಕೇಶ್ ರವರ ಹೆಸರಿನಲ್ಲಿ ಲೇ ಮೆರಿಡಿಯನ್ ಎಂಬ 5 ಸ್ಟಾರ್ ಹೋಟೆಲ್ ಇದ್ದು ಅದನ್ನು ಈಗ ಮುಚ್ಚಲಾಗಿದೆ. ಸಧ್ಯ ರಾಕೇಶ್ ಸಿದ್ದರಾಮಯ್ಯನವರ ಹೆಸರಿನಲ್ಲಿದ್ದ ಶುಗರ್ ಫ್ಯಾಕ್ಟರಿ ಎಂಬ ಪಬ್(ಕೋರಮಂಗಲದಲ್ಲಿದೆ) ಅನ್ನು ಪಾಲುದಾರಿಕೆಯಲ್ಲಿ ಸ್ಮಿತಾರವರು ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈಯಾ ಪಬ್‌ನ ಮಾಲೀಕರು ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಎಂಬುದು ಸುಳ್ಳು.
ಇದನ್ನು ಓದಿ: ಪ್ರಸ್ತುತ ಭಾರತದಲ್ಲಿ ಕೇವಲ 34 ಗುರುಕುಲಗಳಿವೆ ಎಂಬುದು ಸುಳ್ಳು
ವಿಡಿಯೋ ನೋಡಿ: ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.