Fact Check: ಲಕ್ನೋ ಸೂಪರ್ ಜೈಂಟ್ಸ್ ಮಾಲಿಕ ಸಂಜೀವ್ ಗೋಯೆಂಕಾ ಅವರು ಕೆ.ಎಲ್ ರಾಹುಲ್ ಅವರಿಗೆ ಕ್ಷಮೆಯಾಚಿಸಿದ್ದಾರೆ ಎಂಬುದು ಸುಳ್ಳು

ಕೆ ಎಲ್ ರಾಹುಲ್

ಇತ್ತೀಚೆಗೆ ಮೇ 8 ರಂದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೋಲಿನ ನಂತರ, ಮಾಜಿ ಮಾಲೀಕ ಸಂಜೀವ್ ಗೋಯೆಂಕಾ ಅವರು ತಂಡದ ನಾಯಕ ಕೆ. ಎಲ್ ರಾಹುಲ್ ಅವರನ್ನು ಸಾರ್ವಜನಿಕವಾಗಿ ನಿಂದಿಸುತ್ತಿರುವ ವೀಡಿಯೊ ವೈರಲ್ ಆಗಿದೆ.

ಇಬರಿಬ್ಬರ ವಿಡಿಯೋ ವೈರಲ್ ಆದ ನಂತರ, ಈಗ ಸಂಜೀವ್ ಗೋಯೆಂಕಾ ಅವರು ರಾಹುಲ್ ಅವರಿಗೆ ಕ್ಷಮೆಯಾಚಿಸಿದ್ದಾರೆ ಎನ್ನಲಾದ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾದರೆ ನಿಜಕ್ಕೂ ಸಂಜೀವ್ ಗೋಯೆಂಕಾ ಅವರು ಕೆ. ಎಲ್ ರಾಹುಲ್ ಅವರಿಗೆ ಕ್ಷಮೆ ಕೇಳಿದ್ದಾರೆಯೇ ಎಂದು ಪರಿಶೀಲಿಸೋಣ.

ಒಂದು ವಿಡಿಯೋದಲ್ಲಿ ಸಂಜೀವ್ ಗೋಯೆಂಕಾ ಅವರು “ಎಲ್ಲಾ ಅಭಿಮಾನಿಗಳು, ಆಟಗಾರರು, ತರಬೇತುದಾರರು ಮತ್ತು ಇಡೀ ಕೋಚಿಂಗ್ ಸಿಬ್ಬಂದಿಗೆ” ಎಂದು ಹೇಳುವುದನ್ನು ತೋರಿಸುತ್ತದೆ, ವೀಡಿಯೊವನ್ನು ಧ್ವನಿಮುದ್ರಿಸುವ ಮೊದಲು ಅವರು KL ರಾಹುಲ್ ಮತ್ತು ಇತರರಿಗೆ ಕ್ಷಮೆಯಾಚಿಸಿದ್ದಾರೆ. “ಕೆಎಲ್ ರಾಹುಲ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ನ ಪೋಷಕ ಸಿಬ್ಬಂದಿಗೆ ಸಂಜೀವ್ ಗೋಯೆಂಕಾ ಕ್ಷಮೆಯಾಚಿಸಿದ್ದಾರೆ” ಎಂಬಂತಹ ಪ್ರತಿಪಾದನೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್: ಈ ಕುರಿತು ಕೀವರ್ಡ್ ಬಳಸಿ ಹುಡುಕಾಟ ನಡೆಸಿದಾಗ, ಈ ವೀಡಿಯೊವನ್ನು ಮೊದಲು ಏಪ್ರಿಲ್ 15 ರಂದು ಮೋಹನ್ ಬಗಾನ್ ಸೂಪರ್ ಜೈಂಟ್ ಫುಟ್‌ಬಾಲ್ ಕ್ಲಬ್‌ನ ಅಧಿಕೃತ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಗೋಯೆಂಕಾ ಈ ಕ್ಲಬ್‌ನ ಅಧ್ಯಕ್ಷರಾಗಿದ್ದಾರೆ. ವೀಡಿಯೊದಲ್ಲಿ, ಮೋಹನ್ ಬಗಾನ್ ಮೊದಲ ಬಾರಿಗೆ ಲೀಗ್ ಟ್ರೋಫಿಯನ್ನು ಗೆದ್ದಿದ್ದರಿಂದ ಇದು ಐತಿಹಾಸಿಕ ದಿನ ಎಂದು ಗೋಯೆಂಕಾ ಹೇಳುವುದನ್ನು ಕೇಳಬಹುದು.

ಇಂಡಿಯನ್ ಸೂಪರ್ ಲೀಗ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಏಪ್ರಿಲ್ 15 ರಂದು ಮೋಹನ್ ಬಗಾನ್ ತನ್ನ ಮೊದಲ ಲೀಗ್ ಶೀಲ್ಡ್ ಅನ್ನು ಗೆದ್ದು ಮುಂಬೈ ಸಿಟಿ ಫುಟ್‌ಬಾಲ್ ಕ್ಲಬ್ ಅನ್ನು ಸೋಲಿಸಿತು. ಹೀಗಾಗಿ, ಈ ವೀಡಿಯೊಗೆ ಕೆಎಲ್ ರಾಹುಲ್‌ಗೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಎರಡನೇ ವಿಡಿಯೋ:

ಎರಡನೇ ವೀಡಿಯೊದಲ್ಲಿ, “ನಾವು ಗೆಲ್ಲಲು ಆಡಲಿದ್ದೇವೆ ಎಂಬ ನಿಲುವನ್ನು ತಿಳಿದಿರುವ ಯಾರಾದರೂ. ಯಾವುದೇ ಆಟದಲ್ಲಿ ಗೆಲ್ಲಲು ಬಯಸುವ ವಿಧಾನವನ್ನು ನೀವು ನೋಡುತ್ತೀರಿ. ಆದ್ದರಿಂದ, ನಮ್ಮನ್ನು ನಂಬಿರಿ, ನಮಗೆ ಬೆಂಬಲ ನೀಡಿ, ನಾವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಎಂದು ಗೋಯೆಂಕಾ ಹೇಳುವುದನ್ನು ಕೇಳಬಹುದು, ಅದರ ಆರ್ಕೈವ್ ಅನ್ನು ಇಲ್ಲಿ ನೋಡಬಹುದು. 

ಈ ಕ್ಲಿಪ್ ಅನ್ನು ಸಂಜೀವ್ ಗೋಯೆಂಕಾ ಅವರ ಅಧಿಕೃತ Instagram ಖಾತೆಯಿಂದ ಡಿಸೆಂಬರ್ 19, 2023 ರಂದು ಮೊದಲ ಬಾರಿಗೆ ಹಂಚಿಕೊಳ್ಳಲಾಗಿದೆ, 2024 ರ ಇಂಡಿಯನ್ ಪ್ರೀಮಿಯರ್ ಲೀಗ್ ದುಬೈನಲ್ಲಿ ನಡೆದ ದಿನ. ವೀಡಿಯೊವನ್ನು “#LucknowSuperGiants” ಮತ್ತು “#IPLAuction” ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ. ಹೀಗಾಗಿ, ಈ ವಿಡಿಯೋವಿಗೂ ಕೆ.ಎಲ್‌ ರಾಹುಲ್‌ಗು ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಗೋಯೆಂಕಾ ಮತ್ತು ಕೆ. ಎಲ್ ರಾಹುಲ್:

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಸಂಜೀವ್ ಗೋಯೆಂಕಾ ಅವರು ಮೇ 13 ರಂದು ಕೆಎಲ್ ರಾಹುಲ್ ಅವರಿಗೆ ಭೋಜನಕ್ಕೆ ಆತಿಥ್ಯ ವಹಿಸಿದ್ದರು ಮತ್ತು ಈ ಸಂದರ್ಭದಲ್ಲಿ ಅವರು ರಾಹುಲ್ ಅವರನ್ನು ತಬ್ಬಿಕೊಂಡಿರುವ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆದರೆ, ಗೋಯೆಂಕಾ ಅವರು ಕೆ. ಎಲ್ ರಾಹುಲ್ ಬಳಿ ಕ್ಷಮೆಯಾಚಿಸುವ ಯಾವುದೇ ವಿಡಿಯೋ ನಮಗೆ ಲಭ್ಯವಾಗಿಲ್ಲ.


ಇದನ್ನು ಓದಿ: ಟಿಪ್ಪು ಸುಲ್ತಾನ್‌ ಸಿನಿಮಾದಲ್ಲಿ ಶಾರುಖ್‌ ಖಾನ್‌ ಅಭಿನಯಿಸಲಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *