Fact Check | ಕೇರಳದ ಹೋಟೆಲ್‌ನಲ್ಲಿ ಕಾಂಗ್ರೆಸ್‌ ನಾಯಕ ಕೆ.ಸಿ ವೇಣುಗೋಪಲ್‌ ಕುಡಿದಿದ್ದು ಬ್ಲ್ಯಾಕ್‌ ಟೀ ಹೊರತು ವಿಸ್ಕಿ ಅಲ್ಲ

“ನಿನ್ನೆ ರಾಹುಲ್‌ ಗಾಂದಿ ಅವರು ಕೇರಳಕ್ಕೆ ತೆರಳಿದ್ದರು, ಈ ವೇಳೆ ಅವರು ಕೇರಳದ ವೈಟ್‌ ಹೌಸ್‌ ಎಂಬ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಖಾದ್ಯಗಳನ್ನು ತಯಾರಿಸುವ ವಿಧಾನ ಮತ್ತು ಅಲ್ಲಿನ ಕೆಲಸದವರನ್ನು ಮಾತನಾಡಿಸಿದ್ದಾರೆ. ಬಳಿಕ ಅಲ್ಲೇ ಆಹಾರವನ್ನು ಸೇವಿಸಿದ ಅವರು ತಮ್ಮ ಜೊತೆಗಿದ್ದ ಕೆ.ಸಿ. ವೇಣುಗೋಪಲ್‌ ಅವರಿಗೆ ಐಸ್‌ಕ್ರೀಮ್‌ ನೀಡಲು ಮುಂದಾಗಿದ್ದಾರೆ. ಆದರೆ ಕೆ.ಸಿ ವೇಣುಗೋಪಲ್‌ ಮದ್ಯವನ್ನು ಸೇವಿಸುತ್ತಿದ್ದಾರೆ. ಬಳಿಕ ಮದ್ಯ ಸೇವನೆಗೆ ರಾಹುಲ್‌ ಗಾಂಧಿ ಅನುವು ಮಾಡಿಕೊಟ್ಟಿದ್ದಾರೆ.”  ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇನ್ನೂ ಕೆಲವರು “ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವನೆಗೆ ಅವಕಾಶವೇ ಇಲ್ಲ. ಆದರೂ ಕೆ.ಸಿ ವೇಣುಗೋಪಾಲ್‌ ಅವರು ಧೈರ್ಯದಿಂದ ಮಧ್ಯವನ್ನು ಸೇವಿಸಿದ್ದಾರೆ ಎಂದರೆ ಇದರ ಹಿಂದೆ ರಾಹುಲ್‌ ಗಾಂಧಿ ಅವರ ಪ್ರಭಾವ ಇರಬಹುದು” ಎಂದು ಕೂಡ ಶೇರ್‌ ಮಾಡಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಹಿಂದಿನ ಸತ್ಯವೇನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

https://twitter.com/delhichatter/status/1800938938263273665

ಫ್ಯಾಕ್ಟ್‌ಚೆಕ್‌

ಈ ಕುರಿತು ಸತ್ಯಶೋಧನೆಯನ್ನು ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ಕೇರಳದ ತಾಮರಸ್ಸೆರಿಯಲ್ಲಿರುವ ವೈಟ್‌ಹೌಸ್‌ ರಸ್ಟೋರೆಂಟ್‌ನ ವೆಬ್‌ತಾಣವನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ರೆಸ್ಟೋರೆಂಟ್‌ನಲ್ಲಿನ ವಿವಿಧ ಖಾಧ್ಯಗಳ ಮೆನುಕಾರ್ಡ್‌ ಪತ್ತೆಯಾಯಿತು ಆದರೆ ಇಲ್ಲಿ ಎಲ್ಲಿಯೂ ಕೂಡ ಯಾವುದೇ ಮದ್ಯದ ಪಾನಿಯಗಳು ಕಂಡು ಬಂದಿಲ್ಲ. ಆದರೆ ತಂಪು ಪಾನಿಯ, ಚಹಾ ಮತ್ತು ಕಾಫಿ ಕುರಿತು ಕಂಡು ಬಂದಿದ್ದು, ಬ್ಲ್ಯಾಕ್‌ ಟೀ ಎಂಬ ಪಾನೀಯ ಕೂಡ ಕಂಡು ಬಂದಿದೆ. ಹೀಗಾಗಿ ಇಲ್ಲಿ ಕೆ.ಸಿ. ವೇಣುಗೋಪಲ್‌ ಮದ್ಯ ಸೇವಿಸಿಲ್ಲ ಬದಲಾಗಿ ಬ್ಲ್ಯಾಕ್‌ ಟೀ ಅಥವಾ ಲೆಮೆನ್‌ ಟೀ ಸೇವನೆ ಮಾಡಿರುವ ಸಾಧ್ಯತೆ ಹೆಚ್ಚಿದೆ ಎಂಬುದು ತಿಳಿದು ಬಂದಿದೆ.

ಹೀಗಾಗಿ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ  ಹುಡುಕಾಟ ನಡೆಸಿದಾಗ ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕರ್‌ ಮೊಹಬದ್‌ ಜುಬೈರ್‌ ಅವರು ಈ ಕುರಿತು ಟ್ವೀಟ್‌ ಮಾಡಿದ್ದು, “ವೈಟ್‌ಹೌಸ್‌ ರೆಸ್ಟೋರೆಂಟ್‌ ಮ್ಯಾನೆಜರ್‌ ಕಬೀರ್‌ ಅವರ ಬಳಿ ಈಗಷ್ಟೇ ಮಾತನಾಡಿದೆ. ಕೆ.ಸಿ ವೇಣು ಗೋಪಲ್‌ ಅವರು ಸೇವನೆ ಮಾಡಿರುವುದು ಬ್ಲ್ಯಾಕ್‌ ಟೀ ಇದು ಮದ್ಯವಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ” ಎಂದು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲಿಗೆ ಕೆ.ಸಿ ವೇಣುಗೋಪಾಲ್‌ ಅವರು ಸೇವನೆ ಮಾಡಿರುವುದು ಬ್ಲ್ಯಾಕ್‌ ಟೀ ಎಂಬುದು ಸ್ಪಷ್ಟವಾಗಿದೆ.

ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೇರಳದ ಯಾವುದಾದರು ಸುದ್ದಿ ಮಾಧ್ಯಮ ವರದಿ ಮಾಡಿವೆಯೆ ಎಂದು ಪರಿಶೀಲನೆ ನಡೆಸಿದಾಗ, ಕೇರಳದ ಮಿಡಿಯಾ ಒನ್‌ ಸುದ್ದಿ ಸಂಸ್ಥೆ ಈ ಕುರಿತು ವರದಿಯೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಕೂಡ ಕೆ.ಸಿ.ವೇಣುಗೋಪಾಲ್‌ ಸೇವಿಸಿದ್ದು ಬ್ಲ್ಯಾಕ್‌ ಟೀ ಹೊರತು ಮದ್ಯವಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.

ಇಲ್ಲಿ ಬ್ಲ್ಯಾಕ್‌ ಟೀ ಎಂಬುದು ಕಪ್ಪು ಚಹಾವಾಗಿದ್ದು,  ಮಾಮೂಲಿಯಾಗಿ ಕುಡಿಯುವ ಚಹಾಗೆ ಹಾಲನ್ನು ಬೆರೆಸದೆ ಮಾಡಲಾಗುತ್ತದೆ. ಇನ್ನು ಈ ಬ್ಲ್ಯಾಕ್‌ ಟೀ ಅನ್ನು ಕೇರಳದಲ್ಲಿ ಕಟ್ಟನ್‌ ಚಾಯ್ ಎಂದು ಕರೆಯುತ್ತಾರೆ. ಇದು ಅಲ್ಲಿನ ಜಯಪ್ರಿಯ ಚಹಾಚಾಗಿದ್ದು, ಕೇರಳಿಗರು ಯಾವುದಾದರು ಒಂದು ಖಾದ್ಯವೋ  ಅಥವಾ ಉಪಹಾರದ ಜೊತೆಗೆ ಈ ಚಹಾವನ್ನು ಸೇವನೆ ಮಾಡುತ್ತಾರೆ. ಇನ್ನು ಆರೋಗ್ಯದ ದೃಷ್ಟಿಯಿಂದಲೂ ಈ ಬ್ಲ್ಯಾಕ್‌ ಟೀ ಒಳ್ಳೆಯದು ಎಂದು ಹೇಳಲಾಗುತ್ತದೆ.

ಒಟ್ಟಾರೆಯಾಗಿ ರಾಹುಲ್‌ ಗಾಂಧಿ ಕೇರಳದ ವೈಟ್‌ಹೌಸ್‌ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗ ಅವರ ಜೊತೆಗೆ ಆಗಮಿಸಿದ್ದ ಕೆ.ಸಿ ವೇಣುಗೋಪಲ್‌ ಅವರು ವಿಸ್ಕಿಯನ್ನು ಸೇವಿಸಿದ್ದಾರೆ. ಆ ಮೂಲಕ ಮದ್ಯಪಾನ ನಿಷೇಧವಿರುವ ಜಾಗದಲ್ಲೇ ಮದ್ಯ ಸೇವಿಸಿದ್ದಾರೆ ಎಂಬುದು ಸುಳ್ಳು ಮತ್ತು ಕೆ.ಸಿ ವೇಣುಗೋಪಾಲ್‌ ಅವರು ಸೇವಿರಿಸುವುದು ಬ್ಲ್ಯಾಕ್‌ ಟೀ ಆಗಿದೆ.


ಇದನ್ನೂ ಓದಿ : Fact Check | ಪ್ರಧಾನಿ ಮೋದಿ ಕ್ಯಾಬಿನೆಟ್ ಸಚಿವರ ಶೈಕ್ಷಣಿಕ ಅರ್ಹತೆ ಎಂದು ಹಳೆಯ ಗ್ರಾಫಿಕ್ಸ್‌ ಹಂಚಿಕೆ!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *