1950ರ ದಶಕದ ನಂತರ ಅಧಿಕೃತವಾಗಿ ಬ್ರಿಟೀಷರು ತಮ್ಮ ಕಡತಗಳ ಇಂಡಿಯಾ ಎಂಬ ಹೆಸರನ್ನ ಬಳಕೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ಬಲಪಂಥೀಯ ಯೂಟ್ಯೂಬ್ ಚಾನಲ್ ಸಂವಾದದಲ್ಲಿ ಹೆಚ್.ಎನ್ ಚಂದ್ರಶೇಖರ್ ತಪ್ಪು ಮಾಹಿತಿಯನ್ನು ನೀಡಿದ್ದಾರೆ,
ಸತ್ಯ; 18ನೇ ಶತಮಾನದಿಂದಲೂ ಬ್ರಿಟೀಷರು ಭಾರತವನ್ನು ಇಂಡಿಯಾ ಎಂದೇ ಸಂಬೋಧಿಸುತ್ತಿದ್ದರು. ಅವರು ಜಾಗತಿಕ ನಕ್ಷೆಯಲ್ಲೂ ಕೂಡ ಇಂಡಿಯಾ ಎಂಬ ಹೆಸರನ್ನೇ ಬಳಸುತ್ತಿದ್ದರು. ಭಾರತವನ್ನು ಈಸ್ಟ್ ಇಂಡಿಯಾ ಕಂಪನಿ ಎಂದೇ ಕರೆಯುತ್ತಿದ್ದರು.,
ಬ್ರಿಟೀಷರು ಭಾರತದಲ್ಲಿ ಆಳ್ವಿಕೆ ಮಾಡಲು ಪ್ರಾರಂಭಿಸಿದಾಗಿನಿಂದ ಅವರ ದಾಖಲೆಗಳಲ್ಲಿ ಅಧಿಕೃತವಾಗಿ ಇಂಡಿಯಾ ಎಂಬ ಹೆಸರನ್ನೇ ಬಳಸುತ್ತಿದ್ದರು. ಹಾಗಾಗಿ 1950ರ ದಶಕದ ನಂತರ ಅಧಿಕೃತವಾಗಿ ಬ್ರಿಟೀಷರು ತಮ್ಮ ಕಡತಗಳಲ್ಲಿ ಇಂಡಿಯಾ ಎಂಬ ಹೆಸರನ್ನ ಬಳಸುತ್ತಿದ್ದರು ಎಂಬುದು ಸುಳ್ಳು.
ಇಂತಹ ಯಾವುದೇ ತಪ್ಪು ಮಾಹಿತಿಗಳು ನಿಮ್ಮ ಗಮನಕ್ಕೆ ಬಂದರೆ, ಅಥವಾ ಯಾವುದಾದರು ಸುದ್ದಿಯ ಬಗ್ಗೆ ನಿಮಗೆ ಅನುಮಾನ ಬಂದರೆ ಅವುಗಳನ್ನ ನಮಗೆ ಕಳುಹಿಸಿಕೊಡಿ, ನಾವು ಸತ್ಯಶೋಧನೆಯನ್ನ ನಡೆಸಿ ವಾಸ್ತವನ್ನ ನಿಮ್ಮ ಮುಂದೆ ಇಡುವ ಪ್ರಮಾಣಿಕ ಪ್ರಯತ್ನವನ್ನ ಮಾಡುತ್ತೇವೆ.