ತಾಲಿಬಾನ್ ಮುಖ್ಯ ಕಾರ್ಯದರ್ಶಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಹೊಗಳಿದ್ದಾರೆ ಎಂದು ವೈರಲ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದೊಂದು ಶುದ್ಧ ಸುಳ್ಳು ಸುದ್ದಿಯಾಗಿದ್ದು. ಇದರ ಅಸಲಿತ್ತು ಏನು ಎಂಬುವುದು ಫ್ಯಾಕ್ಟ್ ಚೆಕ್‌ನಲ್ಲಿ ಬಹಿರಂಗವಾಗಿದೆ.
ಹೌದು.. ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ತಾಲಿಬಾನ್ ಮುಖ್ಯ ಕಾರ್ಯದರ್ಶಿ ಹೊಗಳಿದ್ದಾರೆ ಎಂಬ ವಿಡಿಯೋ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಈ ವಿಡಿಯೋದ ತುಣುಕು 2019ರ ಮಾರ್ಚ್ 1ರಂದು ರೆಕಾರ್ಡ್ ಮಾಡಲಾಗಿದೆ. ಇದರಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಖಾಲಿದ್ ಮೆಹಮೂದ್ ಅಬ್ಬಾಸಿ. ಈತ ಇಸ್ಲಾಮಾಬಾದ್ ಮೂಲದ ಇಸ್ಲಾಮಿಕ್ ಬೋಧಕ.
2018 ರಲ್ಲಿ ತಂಝೀಮ್-ಎ-ಇಸ್ಲಾಮಿ ತೊರೆದು ಶುಬ್ಬನ್-ಉಲ್-ಮುಸ್ಲಿಮೀನ್ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದು, ತನ್ನ ಸ್ವಂತ ಸಂಘಟನೆಯಲ್ಲಿ ಭೋಧನೆ ಮಾಡುತ್ತಿದ್ದಾರೆ. ಇನ್ನು ಈ ಸಂಘಟನೆ ತಾಲಿಬಾನ್ ಜೊತೆ ಗುರುತಿಸಿಕೊಂಡಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ.
ಹಾಗೂ ಈತ ಆರ್‌ಎಸ್‌ಎಸ್ ಮತ್ತು ಬಿಜೆಪಿ ಅತ್ಯಂತ ಶಕ್ತಿಶಾಲಿ ಎಂದು ಹೇಳಿರುವುದಕ್ಕೂ ಕೂಡ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಈ ವಿಡಿಯೋದಲ್ಲಿ ಹರಡಲಾಗಿರುವ ಸುದ್ದಿ ಸಂಪೂರ್ಣ ಸುಳ್ಳಾಗಿದೆ.
ಇದನ್ನೂ ಓದಿ; ಕೇರಳದ ಲುಲು ಮಾಲ್‌ನಲ್ಲಿ ಭಾರತಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜ ಹಾಕಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.