ಕೇಂದ್ರ ಸರ್ಕಾರದ ಹೆಸರಿನಲ್ಲಿ ಹಲವು ವೆಬ್‌ಸೈಟ್‌ಗಳು ಕೆಲಸ ಖಾಲಿ ಇದೆ, ಶುಲ್ಕ ಪಾವತಿಸಿದ ಬಳಿಕ ಅರ್ಜಿ ಸಲ್ಲಿಸಿ, ಶೇ.100 ರಷ್ಟು ಉದ್ಯೋಗ ಖಾತ್ರಿ ಇದೆ ಎಂಬ ಮೆಸೆಜ್‌ಗಳು ವೈರಲ್ ಆಗುತ್ತಲೇ ಇರುತ್ತವೆ
ಇದೀಗ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಕಾಸ್ ಯೋಜನೆಯ ಅಡಿಯಲ್ಲಿ ಉದ್ಯೋಗವನ್ನು ನೀಡಲಾಗುತ್ತಿದೆ. ರಾಷ್ಟ್ರೀಯ ವಿಕಾಸ್ ಯೋಜನೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಅರ್ಜಿ ಸಲ್ಲಿಸುವವರು 1,675 ರೂ ಶುಲ್ಕ ಪಾವತಿಸಬೇಕು ಎಂಬ ಪೋಸ್ಟ್ ಒಂದು ವೈರಲ್ ಆಗುತ್ತಿದೆ.
ಈ ಕುರಿತು PIB ಫ್ಯಾಕ್ಟ್‌ಚೆಕ್ ನಡೆಸಿ, ರಾಷ್ಟ್ರೀಯ ವಿಕಾಸ್ ಯೋಜನೆಯ ವೆಬ್‌ಸೈಟ್ ನಕಲಿ ಎಂದು ಸ್ಪಷ್ಟ ಪಡಿಸಿದೆ. ಕೇಂದ್ರ ಸರ್ಕಾರದ ಅಧಿನದಲ್ಲಿ ಈ ವೆಬ್‌ಸೈಟ್ ಅಸ್ತಿತ್ವದಲ್ಲಿ ಇಲ್ಲ ಎಂದು ತಿಳಿದು ಬಂದಿದೆ. ಹಾಗೆಯೇ ಈ ವೆಬ್‌ಸೈಟ್‌ಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಬಹಿರಂಗವಾಗಿದೆ.
ಹಾಗಾಗಿ ಇದೊಂದು ನಕಲಿ ವೆಬ್‌ಸೈಟ್ ಆಗಿದ್ದು ಇದನ್ನು ನಂಬಿ ನೀವು ಶುಲ್ಕ ಪವಾತಿಸಿದ್ದೇ ಆದಲ್ಲಿ ಹಣ ಕಳೆದುಕೊಳ್ಳುವ ಅಪಾಯವಿದೆ. ಇನ್ನು ಇದೇ ನಕಲಿ ವೆಬ್‌ಸೈಟ್‌ನಲ್ಲಿ ಹಲವು ಉದ್ಯೋಗ ಮಾಹಿತಿ ಮತ್ತು ಉದ್ಯೋಗ ಕೌಶಲ್ಯಗಳನ್ನು ಕಲಿಸಲಾಗುತ್ತದೆ ಎಂದು ಮಾಹಿತಿಗಳು ಕಂಡು ಬಂದಿವೆ. ಇವೆಲ್ಲವು ಕೂಡ ನಕಲಿ ಎಂಬುದು ಸ್ಪಷ್ಟವಾಗಿದೆ.
ಇಂತಹ ವೆಬ್‌ಸೈಟ್‌ಗಳನ್ನ ನಂಬುವ ಮೊದಲು ಎಚ್ಚರಿಕೆಯನ್ನ ವಹಿಸುವುದು ಉತ್ತಮ ಹಾಗೂ ಯಾವವುದಾದರು ವೆಬ್‌ಸೈಟ್ ತಾನು ಸರ್ಕಾರದ ಅಧೀನದಲ್ಲಿ ಕಾರ್ಯವನ್ನು ನಿರ್ವಹಿಸುತ್ತೇನೆ ಎಂದು ಹೇಳಿಕೊಂಡರೆ ಆಯಾ ಇಲಾಖೆಯಲ್ಲಿ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಮೋಸ ಹೋಗುವ ಅಪಾಯವೇ ಹೆಚ್ಚಿದೆ.
ಈ ಸುದ್ದಿಯನ್ನೂ ಓದಿ : ಕೇರಳದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಎಂದಿರುವ ಆಜ್‌ತಕ್ ವರದಿ ಸುಳ್ಳು
ಈ ವಿಡಿಯೋ ನೋಡಿ : ಆಕಸ್ಮಿಕವಾಗಿ ನಾನು ಹಿಂದೂ! ಎಂದು ಜವಹರಲಾಲ್ ನೆಹರುರವರು ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ