ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬಲು ಪ್ರಾರಂಭವಾಗಿವೆ. ಇದೇ ರೀತಿಯಲ್ಲಿ ಈಗ ಮಧ್ಯಪ್ರದೇಶದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ 2023 ರ ಮಧ್ಯಪ್ರದೇಶ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ದಿಗ್ವಿಜಯ ಸಿಂಗ್ ಅವರು ಸನಾತನ ಧರ್ಮದ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ ಎಂಬ ವಿಡಿಯೋವನ್ನ ಹಂಚಿಕೊಳ್ಳಲಾಗುತ್ತಿದೆ..
ಈ ಕುರಿತು ಫ್ಯಾಕ್ಸ್‌ಲೀ ವೆಬ್ ತಂಡ ಫ್ಯಾಕ್ಟ್‌ಚೆಕ್ ಮಾಡಿದ್ದು ವೈರಲ್ ಆಗುತ್ತಿರುವ ವಿಡಿಯೋ ಮೂರು ಕ್ಲಿಪ್‌ಗಳನ್ನು ಎಡಿಟ್ ಮಾಡಿ ಒಂದು ವಿಡಿಯೋವಾಗಿ ಪರಿವರ್ತಿಸಲಾಗಿದೆ ಎಂಬುವುದನ್ನು ಬಯಲಿಗೆಳೆದಿದೆ. ವಿಡಿಯೋದಲ್ಲಿನ ಒಂದು ಕ್ಲಿಪ್ 2023 ರ ಮೇ ತಿಂಗಳಿನದ್ದಾಗಿದ್ದು, ಇನ್ನುಳಿದ ಎರಡನೇ ಮತ್ತು ಮೂರನೇ ಕ್ಲಿಪ್‌ಗಳು 2019ರದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.
ಇನ್ನು ದಿಗ್ವಿಜಯ್ ಸಿಂಗ್ ಅವರು ಇತ್ತೀಚೆಗೆ ಚುನಾವಣೆಗೋಸ್ಕರವೇ ಸನಾತನ ಧರ್ಮದ ಪರವಾಗಿ ನಿಲುವು ತೆಳೆದಿದ್ದಾರೆ ಎಂಬ ವಿಚಾರವನ್ನು ಈ ವಿಡಿಯೋದಲ್ಲಿ ಪ್ರಮುಖ ವಿಷಯವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಹುಡುಕಿದಾಗ ಇತ್ತೀಚೆಗೆ ಕೆಲ ತಿಂಗಳುಗಳ ಹಿಂದೆ ದಿಗ್ವಿಜಯ್ ಸಿಂಗ್ ಅವರು “ಸನಾತನ ಧರ್ಮವೇ ನನ್ನ ಧರ್ಮ ಆದೆರೆ ಹಿಂದುತ್ವ ನನ್ನ ಧರ್ಮವಾಗಲು ಸಾಧ್ಯವಿಲ್ಲ” ಎಂಬ ಹೇಳಿಕೆ ನೀಡಿದ್ದರು.
ಹೀಗಾಗಿ ಈ ಹಿಂದಿನಿಂದಲೂ ಕೂಡ ದಿಗ್ವಿಜಯ್ ಸಿಂಗ್ ಸನಾತನ ಧರ್ಮದ ಪರವಾಗಿ ಮಾತನಾಡುತ್ತಾ ಬಂದಿರುವುದಕ್ಕೆ ಹಲವು ಸಾಕ್ಷಿಗಳು ಕೂಡ ಲಭ್ಯವಾಗುತ್ತಿದೆ. ಅದೇ ರೀತಿ ಬಿಜೆಪಿ ಸಾರುವ ರಾಜಕೀಯ ಸಿದ್ದಾಂತವಾದ ಹಿಂದುತ್ವದ ವಿರುದ್ಧ ದಿಗ್ವಿಜಯ್ ಸಿಂಗ್ ಅವರು ಕಟುವಾದ ಟೀಕೆಯನ್ನೂ ಮಾಡಿದ್ದಾರೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ದಿಗ್ವಿಜಯ್ ಸಿಂಗ್ ಅವರು ರಾಜಕೀಯಕ್ಕಾಗಿ ಸನಾತನ ಧರ್ಮದ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ ಎಂಬುದು ಸುಳ್ಳು ಮತ್ತು ವೈರಲ್ ಆಗಿರುವ ವಿಡಿಯೋ ಕೂಡ ಮೂರು ಕ್ಲಿಪ್‌ಗಳನ್ನು ಸೇರಿಸಿ ಮಾಡಲಾದ ವಿಡಿಯೋ ಎಂಬುದು ಕೂಡ ಸಾಭೀತಾಗಿದೆ. ಹೀಗಾಗಿ ದಿಗ್ವಿಜಯ್ ಸಿಂಗ್ ವಿರುದ್ಧ ಮಾಡಲಾದ ವಿಡಿಯೋ ಆಪಾದನೆ ಸುಳ್ಳಾಗಿದೆ.
ಇದನ್ನೂ ಓದಿ : ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಿದೆ ಎಂಬುದು ಸುಳ್ಳು
ವಿಡಿಯೋ ನೋಡಿ: ಜಾರ್ಖಂಡ್ ಪೊಲೀಸರ ಅಣಕು ಡ್ರಿಲ್ ವಿಡಿಯೋ ಸುಳ್ಳು ಹೇಳಿಕೆಗಳೊಂದಿಗೆ ವೈರಲ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ