“ಸೌದಿ ಅರೇಬಿಯಾ ತನ್ನ ಶೈಕ್ಷಣಿಕ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಅಳವಡಿಸಿಕೊಂಡಿದೆ. ಇದಕ್ಕೆ ಸಂಬಂಧ ಪಟ್ಟಂತೆ ಸ್ಮೃತಿ ಇರಾನಿಯವರು ಸೌದಿ ಅರೇಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹಾಗಿದ್ದರೆ ಈ ಸುದ್ದಿ ಎಷ್ಟು ನಿಜಾಂಶದಿಂದ ಕೂಡಿದೆ. ಈ ಸುದ್ದಿಯನ್ನ ನಂಬಬಹುದ ಅಥವಾ ನಂಬಬಾರದ ಈ ಎಲ್ಲಾ ವಿಚಾರದ ಕುರಿತಾಗಿ ಮಾಹಿತಿ ಈ ಸಂಪೂರ್ಣ ಅಂಕಣದಲ್ಲಿ ನೋಡೋಣ ಬನ್ನಿ.
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಾಕವಾಗಿ ಹಂಚಿಕೊಳ್ಳಲಾಗುತ್ತಿರುವ ಸುದ್ದಿಯ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ಹೀಗೆ ಹಂಚಿಕೊಳ್ಳಲಾಗುತ್ತಿರುವ ಸುದ್ದಿಯ ಕುರಿತು ಯಾವುದೇ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆಯೇ ಅಂತ ಪರಿಶೀಲಿಸಿದಾಗ ಯಾವುದೇ ವರದಿಗಳು ಪತ್ತೆಯಾಗಿಲ್ಲ. ಈ ಕುರಿತು ಕೇಂದ್ರ ಸರ್ಕಾರದ ಯಾವುದಾದರೂ ಅಧಿಕೃತ ಪ್ರಕಟಣೆ ಇದೆಯೇ ಅಂತ ಪರಿಶೀಲನೆ ನಡೆಸಿದಾಗ ಯಾವುದೇ ರೀತಿಯಾದ ಪ್ರಕಟಣೆಯೂ ಕಂಡು ಬಂದಿಲ್ಲ.
Glad to have joined Hon'ble Minister @smritiirani ji on this occasion in Jeddah, Kingdom of Saudi Arabia. Confident that Indian pilgrims will get excellent services in this year Hajj as well. https://t.co/ZFXOLulUuT pic.twitter.com/QPi0Uxvt2j
— V. Muraleedharan (@MOS_MEA) January 7, 2024
ಇನ್ನು ಸೌದಿ ಸರ್ಕಾರದ ಪ್ರಕಟಣೆಗಾಗಿ ಸೌದಿ ವಿಷನ್ 2030 ರ ಅಧಿಕೃತ ವೆಬ್ಸೈಟ್ ನೋಡಿದಾಗ, ಅದರಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿತ್ತು. ಇನ್ನು ಸ್ಮೃತಿ ಇರಾನಿ ಅವರನ್ನು ಒಳಗೊಂಡ ವೈರಲ್ ಚಿತ್ರವನ್ನು ಪರಿಶೀಲಿಸಿದಾಗ ಅದು ಭಾರತ ಮತ್ತು ಸೌದಿ ಅರೇಬಿಯಾ ನಡುವೆ ದ್ವಿಪಕ್ಷೀಯ ಹಜ್ ಒಪ್ಪಂದ 2024ಕ್ಕೆ ಇತ್ತೀಚೆಗೆ ಸಹಿ ಮಾಡಿದ್ದಾಗಿದೆ ಎಂದು ತಿಳಿದು ಬಂದಿದ್ದು ಈ ಪೋಟೋವನ್ನು ಕೆಲ ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ಇನ್ನು ಇದೇ ರೀತಿಯಾದ ಸುಳ್ಳು ಸುದ್ದಿಯನ್ನು ಈ ಹಿಂದೆಯೂ ಕೂಡ ಹಂಚಿಕೊಳ್ಳಲಾಗಿದ್ದು ಅದನ್ನೂ ಕೂಡ ಕನ್ನಡ ಫ್ಯಾಕ್ಟ್‌ಚೆಕ್ ಪರಿಶೀಲನೆ ನಡೆಸಿ ಸತ್ಯವನ್ನು ಬಯಲಿಗೆಳೆದಿತ್ತು.
ಇದನ್ನೂ ಓದಿ : ಟಿಪ್ಪು ಸುಲ್ತಾನ್ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ
ಈ ವಿಡಿಯೋವನ್ನು ನೋಡಿ : ಟಿಪ್ಪು ಸುಲ್ತಾನ್ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ