Fact Check | ನಿತಾಶಾ ಕೌಲ್‌ ಪಾಕಿಸ್ತಾನದವರು ಎಂಬುದು ಸುಳ್ಳು

“ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಆಮಂತ್ರಣದಂತೆ ಭಾರತದ ಸಂವಿಧಾನದ ಬಗ್ಗೆ ಭಾಷಣ ಮಾಡಲು ಪಾಕಿಸ್ತಾನದಿಂದ ಬಂದಿದ್ದ ನಿತಾಷ ಕೌಲ್‌ ಅನ್ನೋ ಜಿಹಾದಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆದೇಶದಂತೆ ಕೇಂದ್ರೀಯ ಭದ್ರತಾ ಪಡೆ ಬೆಂಗಳೂರು ವಿಮಾನ ನಿಲ್ದಾಣದಿಂದ ಸಿದ್ದರಾಮಯ್ಯ ತವರು ಮನೆ ಪಾಕಿಸ್ತಾನಕ್ಕೆ ಹಿಂದೆ ಕಳಿಸಿದೆ.”

“ಮಾನ ಮರ್ಯಾದೆ ಇಲ್ಲದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಸರಕಾರಿ ಪೋಷಿತ ಜಿಹಾದಿ ಕೂಲಿಗಳನ್ನು ರಾಜ್ಯಕ್ಕೆ ಕರೆಸಿಕೊಳ್ಳುತ್ತಿರುವುದು ದುರಂತ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ.

ಫ್ಯಾಕ್ಟ್‌ಚೆಕ್‌ 

ಇವರು ಪಾಕಿಸ್ತಾನದವರು ಅಲ್ಲ, ಜಿಹಾದಿಯೂ ಅಲ್ಲ.. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಜನಿಸಿದ್ದ ನಿತಾಶಾ ಕೌಲ್‌, ಪ್ರಸ್ತುತ ಲಂಡನ್‌ನಲ್ಲಿ ವಾಸವಿದ್ದಾರೆ. ಶ್ರೀನಗರದ ಪಂಡಿತ ಕುಟುಂಬವಾಗಿದ್ದ ಈಕೆ, ಬಳಿಕ ಉತ್ತರ ಪ್ರದೇಶಕ್ಕೆ ವಲಸೆ ಬಂದಿದ್ದರು. ಈಗ ಲಂಡನ್​ ವೆಸ್ಟ್​ ಮಿನಿಸ್ಟರ್​ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ, ಅಂತಾರಾಷ್ಟ್ರೀಯ ಸಂಬಂಧ ಬಗ್ಗೆ ಉಪನ್ಯಾಸವನ್ನೂ ನೀಡುತ್ತಾರೆ.

ಇನ್ನು ಈ ಘಟನೆಯ ಬಗ್ಗೆ ತಮ್ಮ ಎಕ್ಸ್‌  ( ಈ ಹಿಂದಿನ ಟ್ವಿಟರ್‌ನಲ್ಲಿ) ಖಾತೆಯಲ್ಲಿ ಬರೆದುಕೊಂಡಿರುವ ನಿತಾಶಾ ಕೌಲ್‌, ನಾನು ಭಾರತ ವಿರೋಧಿ ಅಲ್ಲ. ಆರ್​ಎಸ್​ಎಸ್​ ಟೀಕಿಸಿದ್ದಕ್ಕೆ ನನಗೆ  ಪ್ರವೇಶ ನೀಡುತ್ತಿಲ್ಲ. ನಾನು ಸರ್ವಾಧಿಕಾರಿ ಧೋರಣೆ ವಿರುದ್ಧವಾಗಿದ್ದು, ಪ್ರಜಾಪ್ರಭುತ್ವದ ಪರವಾಗಿದ್ದೇನೆ. ನನಗೆ ಕರ್ನಾಟಕ ಸರ್ಕಾರ ಆಹ್ವಾನ ನೀಡಿತ್ತು. ಆದರೆ, ಕೇಂದ್ರ ಸರ್ಕಾರ ಅವಕಾಶ ನೀಡಿರಲಿಲ್ಲ. ಹಲವು ವರ್ಷಗಳಿಂದ ಹಿಂದುತ್ವ ಟ್ರೋಲ್​ಗಳಿಂದ ನನಗೆ ಬೆದರಿಕೆ ಹಾಕಲಾಗುತ್ತಿದೆ. ಕೊಲೆ,ಅತ್ಯಾಚಾರ,ನಿಷೇಧ ಸೇರಿ ಹಲವು ರೀತಿಯಾಗಿ ಧಮ್ಕಿ ಹಾಕಲಾಗುತ್ತಿದೆ’ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದರ ಜೊತೆಗೆ “ಪ್ರಜಾಸತ್ತಾತ್ಮಕ & ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮಾತನಾಡುವ ಸಲುವಾಗಿ ಬೆಂಗಳೂರಿಗೆ ಹೋಗಿದ್ದೆ. ಆದರೆ,  ಕೇಂದ್ರ ಸರ್ಕಾರ ಬೆಂಗಳೂರು ಪ್ರವೇಶಕ್ಕೆ ಅವಕಾಶವನ್ನೇ ಕೊಡಲಿಲ್ಲ. ಬೆಂಗಳೂರು ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲೇ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ.

ಅಧಿಕಾರಿಗಳು ನನಗೆ ಕಿರುಕುಳ ನೀಡಿದ್ದಲ್ಲದೆ, ಕನಿಷ್ಠ ಸೌಲಭ್ಯ ನೀಡಲಿಲ್ಲ.24 ಗಂಟೆಯಲ್ಲೇ ಬೆಂಗಳೂರಿಂದ ಲಂಡನ್​ಗೆ ವಾಪಸ್​ ಕಳಿಸಿದ್ದಾರ. ಇದು ದೆಹಲಿ ಆದೇಶ.. ನಾವು ಏನು ಮಾಡಲಾಗಲ್ಲ ಎಂದು ಅಧಿಕಾರಿಗಳು  ಹೇಳಿದ್ದರು ಎಂದು ನಿತಾಶಾ ತಿಳಿಸಿದ್ದಾರೆ.


ಇದನ್ನೂ ಓದಿ : Fact Check: ವಿಧಾನ ಸೌಧದಲ್ಲಿ “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಎಂದು ಸುಳ್ಳು ವರದಿ ಮಾಡಿದ ಕರ್ನಾಟಕದ ಮಾಧ್ಯಮಗಳು


ಈ ವಿಡಿಯೋವನ್ನು ಓದಿ : Fact Check: ವಿಧಾನ ಸೌಧದಲ್ಲಿ “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಎಂದು ಸುಳ್ಳು ವರದಿ ಮಾಡಿದ ಕರ್ನಾಟಕದ ಮಾಧ್ಯಮಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *