Fact Check: ಕಾಂಗ್ರೆಸ್ ಜನರನ್ನು ವಿಭಜಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ. ಇದು ಎಡಿಟೆಡ್ ವಿಡಿಯೋ

ಕಳೆದ ಅನೇಕ ವರ್ಷಗಳಿಂದ ರಾಹುಲ್ ಗಾಂಧಿಯವರ ಭಾಷಣದ ವಿಡಿಯೋಗಳನ್ನು ತಪ್ಪು ಅರ್ಥ ಬರುವಂತೆ ಎಡಿಟ್ ಮಾಡಿ ಹಂಚಿಕೊಳ್ಳುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ರಾಹುಲ್ ಗಾಂಧಿಯವರ ಮಾತುಗಳನ್ನು ಜನ ಗಂಭೀರವಾಗಿ ತೆಗೆದುಕೊಳ್ಳದಂತೆ ಮಾಡಲು ಇದು ವಿರೋಧ ಪಕ್ಷಗಳು ನಡೆಸುತ್ತಿರುವ ಕುತಂತ್ರವೂ ಸಹ ಆಗಿದೆ. ಹೀಗೆ ರಾಹುಲ್ ಗಾಂಧಿಯವರ ತಿರುಚಿದ ಅನೇಕ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು.

ಸಧ್ಯ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿಯವರು ಈಶಾನ್ಯ ಭಾರತದ ಮಣಿಪುರದಿಂದ ಮಹಾರಾಷ್ಟ್ರದವರೆಗೆ ಕಾಲ್ನಡಿಗೆ ಜಾಥದ ಮೂಲಕ  ತಮ್ಮ ಪಕ್ಷ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ ಅವರ ಪ್ರತೀ ಭಾಷಣಗಳನ್ನು ತಪ್ಪು ಅರ್ಥ ಬರುವಂತೆ ಎಡಿಟ್ ಮಾಡಿ ಅವರನ್ನು ಹಾಸ್ಯ ಮಾಡಲು ಬಳಸಿಕೊಳ್ಳಲಾಗುತ್ತಿದೆ.

ಈಗ,  “ಬಿಜೆಪಿ ಜನರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ, ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಜನರನ್ನು ಧರ್ಮ ಮತ್ತು ಪ್ರದೇಶದ ಆಧಾರದ ಮೇಲೆ ವಿಭಜಿಸುತ್ತಿದೆ” ಎಂದು ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಹೇಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು 02 ಮಾರ್ಚ್ 2024 ರಂದು ರಾಜಸ್ಥಾನದಿಂದ ಮಧ್ಯಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಮೊರೆನಾ ನಗರದ ಭೀಮರಾವ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಈ ಧ್ವಜ ಹಸ್ತಾಂತರ ಸಮಾರಂಭವನ್ನು ಆಯೋಜಿಸಲಾಗಿದೆ. ಈ ವೀಡಿಯೊ ಮೊರೆನಾದಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿಯವರು ಮಾಡಿದ ಭಾಷಣವಾಗಿದೆ. ಮೂಲ ವಿಡಿಯೋದಲ್ಲಿ ರಾಹುಲ್ ಗಾಂಧಿ, “ಬಿಜೆಪಿ ಜನರು ಧರ್ಮ, ಜಾತಿ ಮತ್ತು ಪ್ರದೇಶದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಜನರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ.” ಎಂದಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಈ ವಿಡಿಯೋ ಎಡಿಟ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ರಾಹುಲ್ ಗಾಂಧಿಯವರ ಭಾಷಣವೂ ಅದನ್ನೇ ಉಲ್ಲೇಖಿಸುತ್ತದೆ. ಈ ಕುರಿತು ಪತ್ರಿಕಾ ವರದಿಗಳು ಸಹ ಲಭ್ಯವಿದ್ದು ಇಲ್ಲಿಯೂ ಸಹ ರಾಹುಲ್ ಗಾಂಧಿಯವರ ಭಾಷಣದ ತುಣುಕನ್ನು ನೋಡಬಹುದಾಗಿದೆ. 

ಮೂಲ ವೀಡಿಯೊವನ್ನು 20:11 ಮತ್ತು 20:30 ಸಮಯಸ್ಟ್ಯಾಂಪ್‌ಗಳ ನಡುವೆ ಎಡಿಟ್ ಮಾಡಲಾಗಿದೆ ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲು ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಜನರನ್ನು ವಿಭಜಿಸುತ್ತಿದೆ ಎಂದು ರಾಹುಲ್ ಗಾಂಧಿಯವರ ಭಾಷಣ ಮಾಡಿದ್ದಾರೆ ಎಂಬುದು ಸುಳ್ಳು ಮತ್ತು ಇದು ಎಡಿಟೆಡ್ ವಿಡಿಯೋ.


ಇದನ್ನು ಓದಿ: Fact Check | ರಾಹುಲ್‌ ಗಾಂಧಿ ಪಾಕಿಸ್ತಾನಕ್ಕೆ 5 ಸಾವಿರ ಕೋಟಿ ಸಾಲದ ನೆರವು ನೀಡುತ್ತೇನೆ ಎಂದು ಹೇಳಿಲ್ಲ


ವಿಡಿಯೋ ನೋಡಿ: ಸಮೀಕ್ಷೆಯಲ್ಲಿ ಇಂಡಿಯಾ ಮೈತ್ರಿ ಕೂಟ ಗೆಲ್ಲಲಿದೆ ಎಂದು ಎಡಿಟ್ ವೀಡಿಯೊ ಹಂಚಿಕೆ | Kannada Fact Check 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *