” ‘ಬೇಟ್ ದ್ವಾರಕಾ’ದಲ್ಲಿರುವ ಎರಡು ದ್ವೀಪಗಳು ತಮಗೆ ಸೇರಿದ್ದು ಎಂದು ಗುಜರಾತ್ ವಕ್ಫ್ ಮಂಡಳಿ ಹೇಳಿಕೊಂಡಿದೆ” ಎಂಬ ಸುದ್ದಿಯೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಲಾಗುತ್ತಿದೆ. ಇನ್ನು ಈ ಸುದ್ದಿ ನಿಜವೋ ಸುಳ್ಳೋ ಎಂದು ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಅಸಲಿಗೆ ಗುಜರಾತ್ ವಕ್ಫ್ ಬೋರ್ಡ್‌ಗೆ ಭೂವಿವಾದದ ಪ್ರಕರಣವೊಂದು ಹೈಕೋರ್ಟ್‌ನಲ್ಲಿ ಇದೆ. ಆದರೆ ಇದು ನಿಜಕ್ಕೂ ಬೇಟ್‌ದ್ವಾರಕದ ದ್ವೀಪಗಳ ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ನೋಡೋಣ
ಫ್ಯಾಕ್ಟ್‌ಚೆಕ್
ಈ ಕುರಿತು ಪರಿಶೀಲನೆ ನಡೆಸಲು ಸಂಬಂಧಿತ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದಾಗ, ಈ ಕುರಿತು ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಗಳು ಕಂಡು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ಗುಜರಾತ್‌ನ ಹಲವು ವರದಿಗಳನ್ನು ಪರಿಶೀಲಿಸಿದಾಗಲೂ ಯಾವುದೇ ವರದಿಗಳು ಕಂಡು ಬಂದಿಲ್ಲ. ಹೆಚ್ಚು ಪರಿಶೀಲನೆ ನಡೆಸಿದಾಗ ವೈಬ್ಸ್ ಆಫ್ ಇಂಡಿಯಾ ಎಂಬ ಸುದ್ದಿ ತಾಣದಲ್ಲಿ ಗುಜರಾತ್ ವಕ್ಫ್ ಬೋರ್ಡ್ ಈ ಕುರಿತು ಮಾಹಿತಿ ನೀಡಿದ್ದು ತಿಳಿದು ಬಂದಿದೆ.
ಗುಜರಾತ್ ವಕ್ಫ್ ಬೋರ್ಡ್ ‘ಬೇಟ್ ದ್ವಾರಕಾ’ದಲ್ಲಿನ ಭೂಮಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತು ಇದೊಂದು ಸುಳ್ಳು ಸುದ್ದಿಯಾಗಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದು ಗುಜರಾತ್ ವಕ್ಫ್‌ಬೋರ್ಡ್ ತಿಳಿಸಿದೆ. ಈ ಪ್ರಕರಣದ ಕುರಿತು ಹುಡುಕಿದಾಗ ಸೌರಾಷ್ಟ್ರ ಪ್ರದೇಶದ ಅಮ್ರೇಲಿ ಜಿಲ್ಲೆಯಲ್ಲಿರುವ ‘ಶಿಯಾಲ್‌ಬೆಟ್’ ದ್ವೀಪಕ್ಕೆ ಸಂಬಂಧಿಸಿದ ಪ್ರಕರಣವಿರುದು ನಿಜ ಎಂಬುದು ಸ್ಪಷ್ಟವಾಗಿದೆ.
ಆದರೆ ಗುಜರಾತ್‌ನ ಪಶ್ಚಿಮದಲ್ಲಿರುವ ದೇವಭೂಮಿ ಎಂದು ಕರೆಯಲ್ಪಡುವ ದ್ವಾರಕ ಜಿಲ್ಲೆಯಲ್ಲಿರುವ ‘ಬೇಟ್ ದ್ವಾರಕ’ ನಮಗೆ ಸೇರಬೇಕು ಎಂದು ಗುಜರಾತ್ ವಕ್ಫ್ ಬೋರ್ಡ್ ಹೇಳಿಲ್ಲ.. ಇದನ್ನ ತಪ್ಪಾಗಿ ಅರ್ಥ ಮಾಡಿಕೊಂಡ ಕೆಲವರು ಸುಳ್ಳು ಸುದ್ದಿಯನ್ನ ಹರಡಿದ್ದಾರೆ.
ಇನ್ನು ಈ ಕುರಿತು ಸ್ವತಃ ಜಾಮ್‌ನಗರ ಬಿಜೆಪಿ ಸಂಸದೆ ಪೂನಂಬೆನ್ ಗುಜರಾತ್ GSTV ಎಂಬ ಸುದ್ದಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ಅರ್ಜಿಯಲ್ಲಿ ‘ಶಿಯಾಲ್ ಬೇಟ್’ ಎಂದು ಉಲ್ಲೇಖವಾಗಿದೆಯೇ ಹೊರತು ‘ಬೇಟ್ ದ್ವಾರಕಾ’ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂಬುದನ್ನೂ ತಿಳಿಸಿದ್ದಾರೆ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳಾಗಿದೆ.
ಇದನ್ನೂ ಓದಿ : Fact Check: ಕಾಂಗ್ರೆಸ್ ಜನರನ್ನು ವಿಭಜಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ. ಇದು ಎಡಿಟೆಡ್ ವಿಡಿಯೋ
ವಿಡಿಯೋ ನೋಡಿ : Fact Check: ಕಾಂಗ್ರೆಸ್ ಜನರನ್ನು ವಿಭಜಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ. ಇದು ಎಡಿಟೆಡ್ ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.