“ನಾನು ಮುಂದಿನ ಜನ್ಮ ಅಂತ ಇದ್ರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ವಿಡಿಯೋ ನೋಡಿ” ಎಂದು ಸಾಕಷ್ಟು ಮಂದಿ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಿಜೆಪಿ ಐಟಿಸೆಲ್ ಸದಸ್ಯ ರಿಶಿ ಬಿಗ್ರೀ ಮತ್ತು ಹಲವು ಬಿಜೆಪಿಯ ಕಾರ್ಯಕರ್ತರು ಇದೇ ವಿಡಿಯೋವನ್ನು ಹೆಚ್ಚು ಪ್ರಚಾರ ಮಾಡಿದ್ದಾರೆ.
ಮುಂದಿನ ಜನ್ಮ ಯಾಕೆ ಇವಾಗ್ಲೇ ಕನ್ವರ್ಟ್ ಆಗಿ,🙏 pic.twitter.com/LhruF22ikk
— Murali Purshotham (@MurariMurali3) March 11, 2024
ಇನ್ನು ಸುಳ್ಳು ಸುದ್ದಿಗೆ ಹೆಸರುವಾಸಿಯಾಗಿರುವ ಹಾಗೂ ಸಾಮಾಜದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಟಿವಿ ವಿಕ್ರಮ ಕೂಡ, ಇದೇ ಕುರಿತು ವಿಡಿಯೋವನ್ನು ಮಾಡಿದ್ದು, ಮತ್ತೆ ತನ್ನ ಸಂಸ್ಥೆಯ ನಿರೂಪಕಿಯರ ಕೈಯಿಂದ ಸುಳ್ಳು ಹೇಳಿಸುವ ಚಾಳಿಯನ್ನ ಅದರ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಮುಂದುವರೆಸಿದ್ದಾನೆ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಪ್ಯಾಕ್ಟ್‌ಚೆಕ್ ತಂಡ ಪರಿಶೀಲನೆಯನ್ನ ನಡೆಸಿದ್ದು, ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ಬದಲಾಯಿಸಿ ಹುಡುಕಿದಾಗ ಟಿವಿ 9 ಕನ್ನಡದ ವಿಡಿಯೋವೊಂದು ಯುಟ್ಯುಬ್‌ನಲ್ಲಿ ಕಾಣಿಸಿಕೊಂಡಿದೆ ಅದರಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದ ಪೂರ್ಣವಿಡಿಯೋವನ್ನು ನೋಡಬಹುದಾಗಿದೆ. ಮೂಲ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ” ಇದೇ ದೇವೇಗೌಡ್ರು ನಾನು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗೊಲ್ಲ, ಏನಾದ್ರೂ ಇನ್ನೊಂದು ಜನ್ಮ ಅನ್ನೋದು ಇರೋದಾದ್ರೆ, ನಾನು ಮುಸಲ್ಮಾನನಾಗಿ ಹುಟ್ಟಬೇಕು ಅಂತ ಇದ್ದೇನೆ, ಯಾಕಂದ್ರೆ ಬಿಜೆಪಿ ಕೋಮುವಾದಿ ಪಕ್ಷ”
ಎಂದು ದೇವೇಗೌಡರ ಮಾತನ್ನು ಉಲ್ಲೇಖಿಸಿದ್ದರೆ ಹೊರತು ಸಿದ್ದರಾಮಯ್ಯನವರೇ ವೈಯಕ್ತಿಕವಾಗಿ ಹೇಳಿಕೆ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಇನ್ನು ಪೂರ್ಣ ವಿಡಿಯೋವನ್ನು ನೋಡಿದಾಗ ಇದರಲ್ಲಿ ದೇವೇಗೌಡರ ಮಾತನ್ನ ಉಲ್ಲೇಖಿಸಿದ ಅಂಶವನ್ನು ಮಾತ್ರ ಕಟ್ ಮಾಡಿ ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ದ ಹಿಂದು ಕೂಡ ವರದಿ ಮಾಡಿದೆ.
ಇನ್ನು ಸುಳ್ಳು ಸುದ್ದಿಯನ್ನು ಹಬ್ಬಿಸಲು ಕುಖ್ಯಾತಿಯನ್ನು ಪಡೆದಿರುವ ಮತ್ತು ಹಲವು ಸುಳ್ಳು ಸುದ್ದಿ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಮಹೇಶ್ ವಿಕ್ರಮ ಹೆಗ್ಡೆಯ ಯುಟ್ಯುಬ್ ಚಾನಲ್ ಕೂಡ ಇದೇ ಸುಳ್ಳು ಸುದ್ದಿಯ ವಿಡಿಯೋ ಪ್ರಕಟಿಸಿದ್ದು, ಆ ವಿಡಿಯೋ ನಿರೂಪಕಿ ಶ್ವೇತ ಕೂಡ ಈ ವಿಡಿಯೋ ಬಗ್ಗೆ ಸ್ಪಷ್ಟನೆ ಇಲ್ಲದಿದ್ದರೂ, ಸಿದ್ದರಾಮಯ್ಯನವರ ಮನಸ್ಸಿನಲ್ಲಿರುವ ಆಸೆ ಹೊರ ಬಂದಿದೆ ಎಂಬಂತೆ ಈಕೆ ಬಿಂಬಿಸಿದ್ದಾಳೆ.
ಹೀಗಾಗಿ ಸುಳ್ಳು ಸುದ್ದಿಯನ್ನು ಹಬ್ಬುವ ಇಂತಹ ಯುಟ್ಯುಬ್ ಚಾನಲ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹಳ ಉತ್ತಮ..
ಇದನ್ನೂ ಓದಿ : ಮೋದಿ ನಾಯಕತ್ವವನ್ನು ಮೆಚ್ಚಿ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಿದ್ದಾರೆ ಎಂಬುದು ಸುಳ್ಳು
ಈ ವಿಡಿಯೋ ನೋಡಿ : ಮೋದಿ ನಾಯಕತ್ವವನ್ನು ಮೆಚ್ಚಿ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.