ದಿ ನ್ಯೂಯಾರ್ಕ್ ಟೈಮ್ಸ್‌ನ ಮೊದಲ ಪುಟದ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮಾರ್ಚ್ 15, 2024ರ ದಿನಾಂಕದಂದು ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಿಡುಗಡೆ ಮಾಡಿದ ನಂತರ ಪ್ರಧಾನಿ ಮೋದಿಯವರ ಪರಿಸ್ಥಿತಿಯನ್ನು ಚಿತ್ರಿಸಲು ಅಂತರರಾಷ್ಟ್ರೀಯ ಪತ್ರಿಕೆ ಈ ಗ್ರಾಫಿಕ್ ಅನ್ನು ಬಳಸಿದೆ ಎಂದು ಪ್ರತಿಪಾದಿಸಲಾಗುತ್ತಿದೆ.
“ಚುನಾವಣಾ ಬಾಂಡ್‌ಗಳ ಕುರಿತು, ಅಂತಾರಾಷ್ಟ್ರೀಯ ಮಾಧ್ಯಮ, ದಿ ನ್ಯೂಯಾರ್ಕ್ ಟೈಮ್ಸ್, ರಾಜ ಬೆತ್ತಲಾಗಿದ್ದಾನೆ ಎಂದು ವರದಿ ಮಾಡಿದೆ” ಎಂಬ ತಲೆಬರಹದೊಂದಿಗೆ “ದಿ ನ್ಯೂಯಾರ್ಕ್ ಟೈಮ್ಸ್” ಮೊದಲ ಪುಟದ ವರದಿ ಎಂದು ಹಂಚಿಕೊಳ್ಳಲಾಗುತ್ತಿದೆ.
इलेक्टोरल बॉन्ड पर इंटरनेशनल मीडिया दा न्यू यॉर्क टाइम्स बता रहा है कि राजा नं गा हो चुका है,
"मोदी का परिवार" pic.twitter.com/keSVWrdcCU— मिस्टर इंडिया (@mistarindia624) March 16, 2024
ಅನೇಕರು ಈ ವರದಿಯನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಈ ವರದಿ ಸಾಕಷ್ಟು ವೈರಲ್ ಆಗಿದೆ.
ಫ್ಯಾಕ್ಟ್‌ಚೆಕ್: ಮಾರ್ಚ್ 15, 2024 ರ ನ್ಯೂಯಾರ್ಕ್ ಟೈಮ್ಸ್ ಆವೃತ್ತಿಯ ಮೊದಲ ಪುಟವನ್ನು ಹುಡುಕಿದಾಗ. ಆ ದಿನದ NYT ಯ ಮೊದಲ ಪುಟವು ವೈರಲ್ ಚಿತ್ರವನ್ನು ಹೊಂದಿಲ್ಲ ಎಂದು ಕಂಡುಕೊಂಡಿದ್ದೇವೆ. ಕೆಳಗಿನ ಹೋಲಿಕೆಯಲ್ಲಿ ನೋಡಬಹುದಾದಂತೆ ಎರಡು ಪುಟಗಳ ನಡುವೆ ಹಲವಾರು ವ್ಯತ್ಯಾಸಗಳಿವೆ. ವೈರಲ್ ಚಿತ್ರದಲ್ಲಿ, “ಸಟೈರ್ ಎಡಿಷನ್” ಎಂಬ ಪದಗಳನ್ನು ಮಾಸ್ಟ್‌ಹೆಡ್‌ನ ಮೇಲೆ ಬರೆದಿರುವುದನ್ನು ಓದುಗರು ನೋಡಬಹುದು. ಗ್ರಾಫಿಕ್ ಪಕ್ಕದಲ್ಲಿ, ಹಿಂದಿಯಲ್ಲಿ ವರದಿ ಇರುವುದನ್ನು ಸಹ ಕಾಣಬಹುದು. ಆದ್ದರಿಂದ ಇದು ಎಡಿಟೆಡ್ ವರದಿಯಾಗಿದೆ.
X ನಲ್ಲಿ @EducatedBilla ಎಂಬ ಹೆಸರಿನ ಬಳಕೆದಾರರು ಮಾರ್ಚ್ 15 ರಂದು ವೈರಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ @EducatedBilla ಅವರು ಮತ್ತೊಂದು ಕಾಮೆಂಟ್‌ಗೆ ಉತ್ತರಿಸುತ್ತಾ, ಈ ಚಿತ್ರವನ್ನು ತಾನು ರಚಿಸಿದ್ದೇನೆ ಎಂದು ಹೇಳಿದ್ದಾರೆ, ಇದು ಕೇವಲ ವಿಡಂಬನೆಯ ತುಣುಕು ಎಂದು ಸ್ಪಷ್ಟಪಡಿಸಿದ್ದಾರೆ.
It's a Satire made by me only😅 pic.twitter.com/Q4xgWazqxy
— Schrodinger Ka Billa (@EducatedBilla) March 17, 2024
ಆದ್ದರಿಂದ ಚುನಾವಣಾ ಬಾಂಡ್ ಕುರಿತು ದಿ ನ್ಯೂಯಾರ್ಕ್ ಟೈಮ್ಸ್, ರಾಜ ಬೆತ್ತಲಾಗಿದ್ದಾನೆ ಎಂದು ವರದಿ ಮಾಡಿದೆ ಎಂಬುದು ಸುಳ್ಳು. ಇದು ವ್ಯಂಗ್ಯ ಮಾಡಲು ತಯಾರಿಸಿರುವ ಸುಳ್ಳು ವರದಿಯಾಗಿದೆ.
ವಿಡಿಯೋ ನೋಡಿ: ಡಿ.ಕೆ.ಶಿವಕುಮಾರ್ ಎಂದು BJP ನಾಯಕನ ಅಶ್ಲೀಲ ಫೋಟೋ ಹಂಚಿಕೆ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ