Fact Check | ಕಾಂಗ್ರೆಸ್‌ ವಿರೋಧಿಗಳಿಂದ ರಾಹುಲ್‌ ಗಾಂಧಿ ವಿರುದ್ಧ ನಕಲಿ ಜಾಹಿರಾತು

“ರಾಮ ಮಂದಿರದ ಮೇಲೆ ಬಾಬರಿ ಮಸೀದಿ, ರಾಹುಲ್‌ ಗಾಂಧಿಗೆ ಮತ ಚಲಾಯಿಸಿ : ವಯನಾಡ್‌ ಕಾಂಗ್ರೆಸ್‌ ಕಮಿಟಿ” ಎಂದು ವಿಡಿಯೋ ಜಾಹಿರಾತು ಒಂದನ್ನು ವ್ಯಾಪಕವಾಗಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಜಾಹಿರಾತಿನಲ್ಲಿ ಕಾಂಗ್ರೆಸ್‌ ವಿರುದ್ಧವಾದ ಭಾವನೆಯನ್ನು ಮೂಡಿಸುವ ಪ್ರಯತ್ನವನ್ನು ಹೆಚ್ಚಾಗಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ಇನ್ನು ಈ ವೈರಲ್‌ ವಿಡಿಯೋದಲ್ಲಿ ಕೋಮು ಸೌಹಾರ್ದತೆಯನ್ನು ಕೂಡ ಹಾಳು ಮಾಡುವುದರ ಜೊತೆಗೆ ರಾಹುಲ್‌ ಗಾಂಧಿ ಕುಟುಂಬ ಕೇವಲ ಮುಸಲ್ಮಾನರ ಪರವಾಗಿ ಇದೆ, ಇವರಿಗೆ ಹಿಂದೂಗಳ ಅವಶ್ಯಕತೆ ಇಲ್ಲಾ. ಇವರು ಮತ್ತೆ ಅಧಿಕಾರಕ್ಕೆ ಬಂದರೆ ರಾಮ ಮಂದಿರವನ್ನು ಧ್ವಂಸ ಮಾಡಿ ಅದೇ ಜಾಗದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸುವ ಸಾಧ್ಯತೆ ಹೆಚ್ಚಿದೆ ಎಂಬ ರೀತಿಯಲ್ಲಿ ಈ ಜಾಹಿರಾತಿನಲ್ಲಿ ಪರೋಕ್ಷವಾಗಿ ಬಿಂಬಿಸಲಾಗಿದೆ.

https://twitter.com/BhairavVaam/status/1783690330786992232

ಫ್ಯಾಕ್ಟ್‌ಚೆಕ್‌

ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ವಯನಾಡ್‌ ಕಾಂಗ್ರೆಸ್‌ ಈ ಜಾಹಿರಾತು ನೀಡಿರುವ ಕುರಿತು ಯಾವುದೇ ರೀತಿಯಾದ ಮಾಹಿತಿ ಇರಲಿಲ್ಲ. ಬಳಿಕ ಇದೊಂದು ವಿವಾದಾತ್ಮಕ ಜಾಹಿರಾತು ಎಂಬ ಕಾರಣಕ್ಕಾಗಿ ಯಾವುದಾದರೂ ವರದಿ ಪ್ರಕಟವಾಗಿದೆಯೇ ಎಂದು ಪರಿಶೀಲನೆ ನಡೆಸಿದಾಗ ಅಂತಹ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ.

ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಕಂಡು ಬಂದ ಸುಳ್ಳು ಸುದ್ದಿಗಳು
ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಕಂಡು ಬಂದ ಸುಳ್ಳು ಸುದ್ದಿಗಳು

ಇನ್ನು ಇದೊಂದು ಎಡಿಟೆಡ್‌ ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಜೊತೆಗೆ ಈ ಸುಳ್ಳು ವಿಡಿಯೋವನ್ನು ಹಂಚಿಕೊಂಡವರ ಮೇಲೆ FIR ದಾಖಲಾಗಿರುವ ಬಗ್ಗೆ @rebelliousdogra ಎಂಬವವರು ತಮ್ಮ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.  ಇದೇ ವೇಳೆ ಪ್ಯಾಕ್ಟ್‌ಚೆಕರ್‌ ಮೊಹಮದ್‌ ಜು಼ಬೈರ್‌ ಕೂಡ ಈ ಕುರಿತು ಟ್ವಿಟ್‌ ಮಾಡಿರುವುದು ಕಂಡು ಬಂದಿದೆ.

ಹೆಚ್ಚಿನ ಮಾಹಿತಿಗಾಗಿ ವಯನಾಡ್‌ ಕಾಂಗ್ರೆಸ್‌ನ ಎಕ್ಸ್‌ ಖಾತೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ 26 ಏಪ್ರಿಲ್‌ 2024ರಂದು “ಇದೊಂದು ಪ್ರೊಪಗೆಂಡ ವಿಡಿಯೋವಾಗಿದೆ. ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಹೂಡಿದ ಷಡ್ಯಂತ್ರ ದಯನೀಯವಾಗಿ ವಿಫಲವಾಗಿದೆ” ಎಂದು ಬರೆದುಕೊಳ್ಳುವುದರ ಜೊತೆಗೆ ಇದೊಂದು ನಕಲಿ ವಿಡಿಯೋ ಎಂದು ಸ್ಪಷ್ಟ ಪಡಿಸಿದೆ.

ಇನ್ನು ಈ ರೀತಿಯ ಜಾಹಿರಾತುಗಳು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದ್ದು, ಕೇವಲ ಕಾಂಗ್ರೆಸ್‌ ಮಾತ್ರವಲ್ಲ ಯಾವುದೇ ಪಕ್ಷಗಳು ಕೂಡ ಈ ರೀತಿಯ ವಿವೇಚನ ರಹಿತ  ಜಾಹಿರಾತನ್ನು ನೀಡುವುದಿಲ್ಲ ಹಾಗಾಗಿ ವೈರಲ್‌ ವಿಡಿಯೋ ಶುದ್ದ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ :  ಡಿ.ಕೆ.ಶಿವಕುಮಾರ್‌ ಎಂದು BJP ನಾಯಕನ ಅಶ್ಲೀಲ ಫೋಟೋ ಹಂಚಿಕೆ 


ಈ ವಿಡಿಯೋ ನೋಡಿ : ಡಿ.ಕೆ.ಶಿವಕುಮಾರ್‌ ಎಂದು BJP ನಾಯಕನ ಅಶ್ಲೀಲ ಫೋಟೋ ಹಂಚಿಕೆ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *