ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಭಾರತದ ಸಂವಿಧಾನವನ್ನು ಬದಲಾಯಿಸುವಂತಹ ದೇಶದ್ರೋಹಿ ಹೇಳಿಕೆಗಳನ್ನು ರಾಜಕಾರಣಿಗಳು ಹೇಳುತ್ತಿರುವುದು ನಿಜಕ್ಕೂ ದುರಂತದ ಸಂಗಂತಿ. ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ನಾಯಕರೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದು. ದೇಶ್ರದ್ರೋಹಿ ಹೇಳಿಕೆಗಳಿಗೆ ಯಾವುದೇ ಶಿಕ್ಷೆಯನ್ನು ಇದುವರೆಗೂ ನೀಡಿಲ್ಲ. ಈಗ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕಾರಣಕ್ಕಾಗಿ ಬಿಜೆಪಿ ಸರ್ಕಾರ ತೀವ್ರ ವಿರೋಧ ಎದುರಿಸುತ್ತಿದೆ ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯ ಮುಖ್ಯ ವಿಷಯವಾಗಿದೆ.
ಆದರೆ ಈಗ, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಮುಗಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಬಿಜೆಪಿ ಬೆಂಬಲಿತ ಮಾಧ್ಯಮಗಳಾದ ಎಟಿಎಂ ಸರ್ಕಾರ ಮತ್ತು ಖದೀಮ ಕಾಂಗ್ರೆಸ್ ಎಂಬ ಪುಟಗಳಿಂದ ಹರಿಬಿಡಲಾಗಿದೆ.
ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ವೈರಲ್ ವಿಡಿಯೋ 29 ಏಪ್ರಿಲ್ 2024 ರಂದು ಛತ್ತಿಸ್ಗಢದ ಬಿಲಾಸಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಡಿದ ಮಾತುಗಳಾಗಿವೆ. ತಮ್ಮ ಭಾಷಣದಲ್ಲಿ “ಒಂದು ಕಡೆಯಿಂದ ಬಿಜೆಪಿಯವರು ಸಂವಿಧಾನವನ್ನು ಮುಗಿಸಲು ನೋಡುತ್ತಿದ್ದಾರೆ. ಇನ್ನೊಂದು ಕಡೆ ಇಂಡಿಯಾ ಒಕ್ಕುಟ ಅಥವಾ ಮಹಾಘಟಬಂಧನವು ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಎಂದಿದ್ದಾರೆ.
ಮೂಲ ವಿಡಿಯೋ ಭಾರತೀಯ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟೂಬ್ ಖಾತೆಯಲ್ಲಿ ಲಭ್ಯವಿದ್ದು, ತಮ್ಮ ಭಾಷಣದಲ್ಲಿ, “ಬಿಜೆಪಿಯ ಮುಖಂಡರು, ಒಬ್ಬರಲ್ಲ ಅನೇಕರು ನಮ್ಮ ಸರ್ಕಾರ ಬಂದರೆ ಸಂವಿಧಾನವನ್ನು ಮುಗಿಸುತ್ತೇವೆ ಎಂದಿದ್ದಾರೆ. ಎಂದು ಬಿಜೆಪಿ ಮುಖಂಡರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆಯೇ ಹೊರತು ತಮ್ಮ ಅಭಿಪ್ರಾಯವನ್ನಲ್ಲ.
ಮುಂದುವರೆದು, “ಇಷ್ಟೇ ಅಲ್ಲದೆ ಮೀಸಲಾತಿಯನ್ನು ಸಹ ತೆಗೆದುಹಾಕುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಸಂವಿಧಾನ ಮೀಸಲಾತಿಯನ್ನು ಕೊಟ್ಟಿದೆ, ಸಂವಿಧಾನ ಮತಧಾನದ ಹಕ್ಕನ್ನು ಕೊಟ್ಟಿದೆ, ಸಂವಿಧಾನ ಸಾರ್ವಜನಿಕ ಸೇವೆಗಳನ್ನು ನೀಡಿದೆ, ಸಂವಿಧಾನದಿಂದ ನಿಮಗೆ ಅಧಿಕಾರ ಸಿಕ್ಕಿದೆ, ಎಲ್ಲಾ ಹಕ್ಕುಗಳನ್ನು ಸಂವಿಧಾನ ಕೊಟ್ಟಿದೆ ಎಂದಿದ್ದಾರೆ.
ಸಂವಿಧಾನಕ್ಕೆ ಸಂಬಂಧಿಸಿದಂತೆ ರಾಹುಲ್ ಆಡಿರುವ ಮಾತುಗಳನ್ನು ಇಲ್ಲಿ ನೋಡಬಹುದು.
ಆದ್ದರಿಂದ ನಾವು ಅಧಿಕಾರಕ್ಕೆ ಬಂದರೆ ಸಂವಿಧಾನ ಮುಗಿಸುತ್ತೇವೆ ಎಂದು ರಾಹುಲ್ ಗಾಂಧಿಯವರು ಹೇಳಿಲ್ಲ. ಇದು ಎಡಿಟೆಡ್ ವಿಡಿಯೋ ಆಗಿದೆ.
ಇದನ್ನು ಓದಿ: ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎಂದು ಕನ್ಹಯ್ಯ ಕುಮಾರ್ ಹೇಳಿಲ್ಲ
ವಿಡಿಯೋ ನೋಡಿ: ಸಿದ್ದರಾಮಯ್ಯ ಲಾ ಕಾಲೇಜು ಸುತ್ತೋಲೆ ಆರೋಗ್ಯ ಇಲಾಖೆಗೆ ಸಂಬಂಧಿಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.