Fact Check: ರಾಯಚೂರಿನಲ್ಲಿ ರವಿ ಸಾಬ್ ಜಿಂದಾಬಾದ್ ಎಂದಿದ್ದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿ ಹಂಚಿಕೆ

ಪಾಕಿಸ್ತಾನ್

ಕಳೆದ ಎರಡು ತಿಂಗಳ ಹಿಂದೆ ವಿಧಾನ ಸೌದದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು ನಂತರ ಬಿಜೆಪಿ ಪಕ್ಷದ ಮುಖಂಡರು ತನಿಖೆಗೆ ಒತ್ತಾಯಿಸಿದ್ದರು, ಪೋಲೀಸರು  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂದಿಸಿದ್ದಾರೆ. ಇದಾದ ನಂತರ ಈಗ ಕಾಂಗ್ರೆಸ್‌ ಕಾರ್ಯಕರ್ತರು ಎಲ್ಲಿಯೇ ಘೋಷಣೆಗಳು ಕೂಗಿದರು ಸಹ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಈಗ, “ಕಾಂಗ್ರೆಸ್‌ ಕಾರ್ಯಕರ್ತರು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದಾರೆ. ಅಂತೂ ಇಂತೂ ರಾಯಚೂರಿಗೂ ಬಂತು ಪಾಕಿಸ್ತಾನ್ ಜಿಂದಾಬಾದ್. ಇವತ್ತು ರಾಯಚೂರು ನಾಳೆ ನಮ್ಮ ಊರು.” ಎಂದು ಆರೋಪಿಸಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ವಿಡಿಯೋವನ್ನು ಅನೇಕರು ತಮ್ಮ ಹಂಚಿಕೊಂಡಿರುವುದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ರಾಯಚೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಕುರಿತು ಯಾವುದೇ ಪತ್ರಿಕೆಗಳು ಅಥವಾ ಸುದ್ದಿ ಮಾಧ್ಯಮಗಳು ವರದಿ ಮಾಡಿಲ್ಲ. ಇಂತಹ ದೇಶದ್ರೋಹಿ ಘೋಷಣೆ ಕೇಳಿ ಬಂದಿದ್ದರೆ ರಾಜ್ಯದ ಇತರೆ ಮಾಧ್ಯಮಗಳು ವರದಿ ಮಾಡಿರುತ್ತಿದ್ದವು, ಯಾವ ಮಾಧ್ಯಮಗಳು ಸಹ ಇಂತಹ ಪ್ರಕರಣ ನಡೆದಿರುವುದನ್ನು ವರದಿ ಮಾಡಿಲ್ಲ.

3೦ ಏಪ್ರಿಲ್ 2024ರಂದು ಕಾಂಗ್ರೆಸ್‌ ಮುಖಂಡ ರವಿ ಬೋಸ್‌ ರಾಜ್ ಅವರು ಲೋಕಸಭಾ ಚುನಾವಣಾ ಕಾಂಗ್ರೆಸ್‌ ಅಭ್ಯರ್ಥಿ ಜಿ. ಕುಮಾರ್ ನಾಯಕ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್‌ ಬೆಂಬಲಿಗರು ರವಿ ಸಾಬ್ ಜಿಂದಾಬಾದ್‌ ಎಂದು ಕೂಗಿದ್ದಾರೆ. ಆ ಆಡಿಯೋವನ್ನು ಸ್ಪಷ್ಟವಾಗಿ ಮತ್ತು ನಿಧಾನ ಮಾಡಿ ಕೇಳಿದರೆ ಇದು ತಿಳಿಯುತ್ತದೆ. ಅದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಲಾಗಿದೆ ಅಷ್ಟೆ.

ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಪರ ಚುನಾವಣಾ ಪ್ರಚಾರದಲ್ಲಿ ಅಭಿಮಾನಿಗಳು ಪಾಕಿಸ್ತಾನ್‌ಕಿ ಜೈ ಎಂದು ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಆರೋಪವನ್ನು ಹರಿಬಿಡಲಾಗಿತ್ತು. ರೋಡ್‌ ಶೋ ವೇಳೆ ಕಾಂಗ್ರೆಸ್ ಅಭಿಮಾನಿಯೊಬ್ಬರು ಬಾಲಕೃಷ್ಣಕಿ ಜೈ, ಡಿ.ಕೆ ಸುರೇಶ್‌ಕಿ ಜೈ, ಹೆಚ್.ಎಂ ರೇವಣ್ಣಕಿ ಜೈ ಎಂದು ಘೋಷಣೆ ಕೂಗಿದ್ದರು ಅದನ್ನು ಕೆಲವು ಕಿಡಿಗೇಡಿಗಳು ಬಾಲಕೃಷ್ಣಕೀ ಜೈ ಎನ್ನುವುದನ್ನು ಪಾಕಿಸ್ತಾನ್ ಕಿ ಜೈ ಎಂದಿದ್ದಾರೆ ಎಂದು ಹಂಚಿಕೊಂಡಿದ್ದರು.

ಈಗಲೂ ಸಹ ಅದೇ ಮಾದರಿಯಲ್ಲಿ ರವಿ ಸಾಬ್‌ ಜಿಂದಾಬಾದ್ ಎಂದಿರುವ ಘೋಷಣೆಯನ್ನು ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ.


ಇದನ್ನು ಓದಿ: ರಾಮನಗರ: ಬಾಲಕೃಷ್ಣಕಿ ಜೈ ಎಂದಿದ್ದನ್ನು ಪಾಕಿಸ್ತಾನ್‌ಕಿ ಜೈ ಎಂದು ಸುಳ್ಳು ಹಬ್ಬಿಸಿದ ಕಿಡಿಗೇಡಿಗಳು


ವಿಡಿಯೋ ನೋಡಿ: ಸಿದ್ದರಾಮಯ್ಯ ಲಾ ಕಾಲೇಜು ಸುತ್ತೋಲೆ ಆರೋಗ್ಯ ಇಲಾಖೆಗೆ ಸಂಬಂಧಿಸಿಲ್ಲ 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *