ಹೀಗಾಗಲೇ ಎರಡನೇ ಹಂತದ ಲೋಕಸಭಾ ಚುನಾವಣೆ ಮುಗಿದು ಮೂರನೇ ಹಂತದ ಚುನಾವಣೆಗೆ ಇನ್ನು ಒಂದು ದಿನ ಬಾಕಿ ಇರುವಾಗ ಸಾಕಷ್ಟು ರಾಜಕೀಯ ಪಕ್ಷಗಳ ಮುಖಂಡರ ಭಾಷಣಗಳನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ತಮ್ಮ ಕಾಂಗ್ರೆಸ್ ಪಕ್ಷದ ವಿರುದ್ಧವೇ ಮಾಡಿನಾಡಿದ್ದಾರೆ. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಹಣ ದೋಚಿ ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುತ್ತೇವೆ” ಎಂದಿದ್ದಾರೆ ಎಂದು, ಅವರು ಮೋದಿಯವರನ್ನು ಉದ್ದೇಶಿಸಿ ಹೇಳಿದ ಭಾಷಣದ ತುಣುಕೊಂದನ್ನು ಕಟ್ ಮಾಡಿ ಖರ್ಗೆಯವರೇ ಹೀಗೆ ಹೇಳಿದ್ದಾರೆ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ.
ಈಗ, “ಬಿಎಸ್‌ಬಿ ಪಕ್ಷದ ಅಧ್ಯಕ್ಷೆಯಾದ ಮಾಯಾವತಿ ಅವರು ಬಿಜೆಪಿಗೆ ಮತ ನೀಡುವಂತೆ ಮತದಾರಿಗೆ ಕರೆನೀಡಿದ್ದಾರೆ.” ಎನ್ನಲಾದ ಮಾಯಾವತಿಯವರ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಮಾಯಾವತಿ ಅವರು ” ಮಾನ್ಯ ನರೇಂದ್ರ ಮೋದಿಯವರು ಎಲ್ಲರಿಗೂ ಉಚಿತ ಪಡಿತರ ಅಕ್ಕಿ ನೀಡಿದ್ದಾರೆ, ಹಾಗಾಗಿ ಅವರ ಋಣ ತೀರಿಸಲು ಎಲ್ಲರೂ ಬಿಜೆಪಿ ಬೆಂಬಲಿಸೋಣ” ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋ 4 ಮೇ 2024 ರಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾಯಾವತಿ ಅವರು ಮಾಡಿದ ಭಾಷಣದಿಂದ ಕಟ್ ಮಾಡಲಾದ ವೀಡಿಯೊ ಇದಾಗಿದೆ. ಮಾಯಾವತಿ ಅವರು ತಮ್ಮ ಮೂಲ ಭಾಷಣದಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕುರಿತು ಮಾತನಾಡುತ್ತಾ “ವಿಧಾನ ಸಭಾ ಚುನಾವಣೆ ಸಮಯದಲ್ಲಿ ಉಚಿತ ರೇಷನ್ ನೀಡಿ, ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಯಲ್ಲೂ ಸಹ ಉಚಿತ ರೇಷನ್ ಹೆಸರಿನಲ್ಲಿ ಮತ ಪಡೆಯಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಉಚಿತ ಪಡಿತರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಹಳ್ಳಿ ಹಳ್ಳಿಗಳಿಗೆ ಹೋಗಿ ಹೇಳುತ್ತಿದ್ದಾರೆ ‘ಶ್ರೀ ನರೇಂದ್ರ ಮೋದಿಯವರು ಎಲ್ಲರಿಗೂ ಉಚಿತ ಪಡಿತರ ಅಕ್ಕಿ ನೀಡಿದ್ದಾರೆ, ಹಾಗಾಗಿ ಅವರ ಋಣ ತೀರಿಸಲು ಎಲ್ಲರೂ ಬಿಜೆಪಿ ಬೆಂಬಲಿಸೋಣ” ಎಂದು ಹೇಳುತ್ತಿದ್ದಾರೆ. ಎಂದಿದ್ದಾರೆ.
ಮುಂದುವರೆದು ಅವರು “ಆದರೆ ನಾನು ಬಡ ಜನರಿಗೆ ಹೇಳುತ್ತೇನೆ, ಬಿಜೆಪಿ ಅಥವಾ ಶ್ರೀ ನರೇಂದ್ರ ಮೋದಿಯವರು ಅವರ ಜೇಬಿನಿಂದ ನಿಮಗೆ ರೇಷನ್ ನೀಡುತ್ತಿಲ್ಲ. ಬದಲಾಗಿ ನೀವು ಉತ್ತರ ಪ್ರದೇಶ ಸರ್ಕಾರಕ್ಕೆ, ಅಥವಾ ಕೇಂದ್ರ ಸರ್ಕಾರಕ್ಕೆ ಕಟ್ಟುವ ತೆರಿಗೆಯಿಂದ ನೀಡಲಾಗುತ್ತಿದೆ. ನಿಮ್ಮ ಹಣದಿಂದ ನಿಮಗೆ ರೇಷನ್ ನೀಡಲಾಗುತ್ತಿದೆಯೇ ಹೊರತು ಅವರ ಸ್ವಂತ ಹಣದಿಂದ ಅಲ್ಲ.” ಎಂದು ಹೇಳಿದ್ದಾರೆ.
ಆಗ್ರಾದಲ್ಲಿ ನಡೆದ ಬಿಎಸ್‌ಪಿ ಪ್ರಚಾರ ಸಭೆಯ ಮೂಲ ಮತ್ತು ಸಂಪೂರ್ಣ ವಿಡಿಯೋ ಬಹುಜನ್ ಸಮಾಜ್ ಪಾರ್ಟಿಯ ಅಧಿಕೃತ ಯೂಟೂಬ್ ಖಾತೆಯಲ್ಲಿ ಲಭ್ಯವಿದ್ದು. ಅದರಲ್ಲಿ ಮಾಯಾವತಿಯವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕುರಿತು ಮಾತನಾಡಿರುವುದನ್ನು ಕೇಳಬಹುದು. ಮಾಯಾವತಿ ಅವರ ಮಾತನ್ನು ಕಟ್ ಮಾಡಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿ: ಸೌದಿ ಬೋಧಕ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಭಾರತದಲ್ಲಿ ಇಸ್ಲಾಂ ಹರಡುವಿಕೆಯ ಬಗ್ಗೆ ನೀಡಿರುವ ಹೇಳಿಕೆ ನಕಲಿ
ವಿಡಿಯೋ ನೋಡಿ: ಕಾಂಗ್ರೆಸ್ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್ ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ