ಕಾರಿನ ಹಿಂದೆ ಬಾಲಕನನ್ನು ಅಮಾನು‍ಷವಾಗಿ ಥಳಿಸುವ ವಿಡಿಯೋ ಚೀನಾ ದೇಶಕ್ಕೆ ಸಂಬಂಧಿಸಿದ್ದು

ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ ಮತ್ತು ಪ್ರತಿ ಗ್ರೂಪ್‌ನಲ್ಲಿ ವೀಡಿಯೊವನ್ನು ಶೇರ್ ಮಾಡಿ ಇದರಿಂದ ತಪ್ಪಿತಸ್ಥರನ್ನು ಹಿಡಿಯಿರಿ ಎಂವ ಶೀರ್ಷಿಕೆಯೊಂದಿಗೆ ವ್ಯಕ್ತಿಯೊಬ್ಬ ದಾರಿಯಲ್ಲಿ ಕಾರಿನ ಹಿಂದೆ ಬಾಲಕನನ್ನು ಅಮಾನುಷವಾಗಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಹಳಷ್ಟು ಜನರು ಇದು ಎಲ್ಲಿಯದು ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವರು ಭಾರತದಲ್ಲಿ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆ ಕುರಿತು ಫ್ಯಾಕ್ಟ್ ಚೆಕ್ ಇಲ್ಲಿದೆ.

ಫ್ಯಾಕ್ಟ್ ಚೆಕ್

ಈ ಕುರಿತು ಹಲವು ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಈ ಘಟನೆಯ ಬಗ್ಗೆ ಚೀನಿ ಮಾಧ್ಯಮ ಲೇಟೈಮ್ಸ್ ವರದಿ ಲಭ್ಯವಾಗಿದೆ. ಅದರಲ್ಲಿ “66 ವರ್ಷದ ವ್ಯಕ್ತಿಯು 9 ವರ್ಷದ ಬಾಲಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದು, ಬಾಲಕ ಗಾಯಗೊಂಡಿದ್ದಾನೆ, ಆತನ ತಂದೆ ಮತ್ತು ಸ್ಥಳೀಯ ಸರ್ಕಾರ ಪ್ರತಿಕ್ರಿಯಿಸಿದೆ, ಪ್ರಕರಣ ಗೌಪ್ಯವಾಗಿದೆ” ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿದೆ.

ಲೇಟೈಮ್ಸ್ ವರದಿ

ಏಪ್ರಿಲ್ 20 ರಂದು ಚೀನಾದ ಶಾಂಡಾಂಗ್‌ ಪ್ರಾಂತ್ಯದ ಗುವಾನ್ ಕೌಂಟಿ, ಲಿಯಾಚೆಂಗ್ ನಲ್ಲಿ ಈ ದುರ್ಘಟನೆ ಜರುಗಿದೆ. ಬಾಲಕನ ತಂದೆ ಮಾತನಾಡಿ, “ತನ್ನ 9 ವರ್ಷದ ಮಗು ಸೈಕಲ್‌ನಲ್ಲಿ ಬರುತ್ತಿರುವ ಇದೇ ಗ್ರಾಮದ 66 ವರ್ಷದ ನೆರೆಮನೆಯ ವ್ಯಕ್ತಿ ಥಳಿಸಿದ್ದಾನೆ. ಆನಂತರ ಇಟ್ಟಿಕೆಯಿಂದ ತಲೆಗೆ ಹೊಡೆಯಲಾಗಿದೆ. ನಮಗೂ ಅವರಿಗೂ ಯಾವುದೇ ದ್ವೇಷ ಇರಲಿಲ್ಲ. ಆದರೂ ಏಕೆ ಥಳಿಸಿದ ಎಂಬ ಕಾರಣ ತಿಳಿದಿಲ್ಲ. ಸದ್ಯ ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ತಲೆಗೆ ತೀವ್ರ ಪೆಟ್ಟಾಗಿದ್ದು 18 ಹೊಲಿಗೆ ಹಾಕಲಾಗಿದೆ” ಎಂದಿದ್ದಾರೆ.

ಸ್ಥಳೀಯ ಸರ್ಕಾರ ಪ್ರತಿಕ್ರಿಯಿಸಿ, “ವಿಷಯವು ಗೌಪ್ಯವಾಗಿದೆ. ಸಾರ್ವಜನಿಕ ಭದ್ರತಾ ಸಂಘಟನೆಗಳು ಈ ಪ್ರಕರಣವನ್ನು ನಿರ್ವಹಿಸುತ್ತಿವೆ. ಪ್ರಾಥಮಿಕ ತನಿಖೆಯ ನಂತರ ಈ ಕುರಿತು ವಿವರ ನೀಡಲಾಗುತ್ತದೆ” ಎಂದಿದ್ದಾರೆ.

ಬಾಲಕನ ಹೆಸರು ಕ್ಸಿಯಾವೊ ಲ್ಯಾಂಗ್ ಎಂದಾಗಿದ್ದು 9 ವರ್ಷ ವಯಸ್ಸಿನವನಾಗಿದ್ದಾನೆ ಮತ್ತು ಪ್ರಾಥಮಿಕ ಶಾಲೆಯ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಈ ಘಟನೆಯು ಬಾಲಕ ಮನಗೆ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಕೇವಲ 4 ಅಥವಾ 5 ಮೀಟರ್ ದೂರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು yeeyi.com news ವರದಿ ಮಾಡಿದೆ.

ಆರೋಪಿಯು ಅದೇ ಊರಿನವನಾಗಿದ್ದು, ಸ್ವಚ್ಚತಾ ಕೆಲಸ ಮಾಡುತ್ತಿದ್ದ. ಬಾಲಕನ ಕುಟುಂಬದ ಮೇಲಿನ ದ್ವೇಷದಿಂದ ಬಾಲಕನ ಮೆಲೆ ಹಲ್ಲೆ ನಡೆಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಈ ಅಮಾನವೀಯ ಘಟನೆಯು ಚೀನಾದ ಶಾಂಡಾಂಗ್‌ ಪ್ರಾಂತ್ಯದಲ್ಲಿ ನಡೆದಿದೆ. ಇದಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ.


ಇದನ್ನೂ ಓದಿ: Fact Check: ಮುಸ್ಲಿಂ ಒಲೈಕೆಗಾಗಿ ಇಂದಿರಾ ಗಾಂಧಿಯವರು ಹಿಜಾಬ್ ಧರಿಸಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *