ಆಮ್ ಆದ್ಮಿ ಪಕ್ಷದ ಸಂಸದೆ ಮತ್ತು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರಿಗೆ ದೆಹಲಿ ಮುಖ್ಯಮಂತ್ರಿ ಕಚೇರಿ ಒಳಗೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣ ದೇಶಾದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Scene from Delhi CMs official residence Sheesh Mahal
🤣🤣🤣🤣
*This was bound to happen, Swati Maliwal has been beaten up, Kejriwal's PA has done the beating, news is coming that there is heavy kicking going on in CMO, the reason being told is everyone wants to become CM pic.twitter.com/HKCSADRElm
— M. S. Srinivasa Rao (@macharajarao) May 15, 2024
ಇದರ ನಡುವೆ ಇದೀಗ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಪುರುಷರು ಮತ್ತು ಮಹಿಳೆಯರ ನಡುವಿನ ಹೊಡೆದಾಟವನ್ನು ನೋಡಬಹುದಾಗಿದೆ. ಇದನ್ನೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಚೇರಿಯಲ್ಲಿ ನಡೆದ ಗಲಾಟೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವಿಡಿಯೋದ ಕುರಿತು ಸತ್ಯಾಸತ್ಯತೆಯನ್ನು ಈ ಅಂಕಣದಲ್ಲಿ ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್
ಈ ವಿಡಿಯೋ ಕುರಿತು ಕನ್ನಡ ಫ್ಯಾಟ್ ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದಲ್ಲಿ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ, ಈ ಘಟನೆ ತೀಸ್ ಹಜಾರಿಯಲ್ಲಿ ನಡೆದಿದೆ ಎಂಬುದು ತಿಳಿದುಬಂದಿದೆ. ಈ ಕುರಿತು ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ ನಲ್ಲಿ ಹಲವು ಪೋಸ್ಟ್‌ಗಳು ಕೂಡ ಕಂಡು ಬಂದಿದೆ.
दिल्ली तीस हजारी कोर्ट मीडिएशन सेंटर
पति के साथ पुलिस के सामने हमला और मारपीट
ये सब कोर्ट परिसर मे खुलेआम होता है।#दोगली_न्याय_व्यवस्था pic.twitter.com/u8GfaWabNW— Chetan (@cskkanu) May 13, 2024
ಹೆಚ್ಚಿನ ಮಾಹಿತಿಗಾಗಿ ಎಕ್ಸ್ ಬಳಕೆದಾರರ ಖಾತೆಗಳನ್ನು ಪರಿಶೀಲಿಸಿದಾಗ ಅದರಲ್ಲಿ @EcoCrazyAnkur ಎಂಬ ಬಳಕೆದಾರರು ಮೇ 13 ರಂದು ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಮಧ್ಯಸ್ಥಿಕೆಯ ಕೊಠಡಿಯಲ್ಲಿ ಈ ಗಲಾಟೆ ನಡೆದಿದೆ ಎಂದು ಬರೆದುಕೊಂಡಿದ್ದಾರೆ.ಇನ್ನು ಈ ಘಟನೆಯ ಬಗ್ಗೆ ಇಂಗ್ಲೀಷ್ ವೆಬ್ ಸುದ್ದಿ ತಾಣವಾದ ದ ಕ್ವಿಂಟ್, ತೀಸ್ ಹಜಾರಿ ನ್ಯಾಯಾಲಯದ ಹಿರಿಯ ವಕೀಲರು ಮತ್ತು ನ್ಯಾಯಾಲಯದ ವರದಿಗಾರರ ಬಳಿ ಮಾಹಿತಿಯನ್ನು ಕಲೆಹಾಕಿದ್ದು, ಅವರು ಕೂಡ ಈ ಗಲಾಟೆ ನಡೆದಿರುವುದು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ಎಂಬ ವಿಚಾರವನ್ನು ದೃಢಪಡಿಸಿದ್ದಾರೆ. ಈ ತೀಸ್ ಹಜಾರಿ ನ್ಯಾಯಾಲಯದಲ್ಲಿನ ಗಲಾಟೆ ಪ್ರಕರಣ ಕೂಡ ಪ್ರತ್ಯೇಕವಾಗದ್ದು, ಇದಕ್ಕೂ ಮತ್ತು ಸ್ವಾತಿ ಮಲಿವಾಲ್ ಅವರ ಪ್ರಕರಣಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ.
हमारे देश के परिवारों का ऐसा हाल क्यों होता जा रहा है, आख़िर क्यों हम अपने संस्कारों को भूल कर ऐसा करने पर आमादा है @DeepikaBhardwaj @NCMIndiaa
दिल्ली की तीस हजारी कोर्ट के मध्यस्थता कक्ष का हाल… pic.twitter.com/7gNKcZCTj2
— Ankur Gupta 🇮🇳 (@EcoCrazyAnkur) May 12, 2024
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ವಿಡಿಯೋದಲ್ಲಿನ ಗಲಾಟೆ ದೆಹಲಿಯ ತೀರ್ಸ್ ಹಜಾರಿ ನ್ಯಾಯಾಲಯದಲ್ಲಿ ನಡೆದಿದೆ ಎಂಬುದು ಖಚಿತವಾಗಿದ್ದು ಈ ಘಟನೆಗೂ ದೆಹಲಿಯ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ಸ್ವಾತಿ ಮಲಿವಾಲ್ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ.
ಇದನ್ನೂ ಓದಿ : ಕಾರಿನ ಹಿಂದೆ ಬಾಲಕನನ್ನು ಅಮಾನುಷವಾಗಿ ಥಳಿಸುವ ವಿಡಿಯೋ ಚೀನಾ ದೇಶಕ್ಕೆ ಸಂಬಂಧಿಸಿದ್ದು
ಈ ವಿಡಿಯೋ ನೋಡಿ : POK ನಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿಲ್ಲ; ಮತ್ತೆ ಸುಳ್ಳು ಸುದ್ದಿ ಪ್ರಕಟಿಸಿದ ಸುವರ್ಣ ನ್ಯೂಸ್..!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.