ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಬಿಯವರ ಹುಟ್ಟುಹಬ್ಬದ ಪ್ರಯುಕ್ತ ಪಾಕಿಸ್ತಾನದ ಧ್ವಜ ಮತ್ತು ಪಾಕಿಸ್ತಾನದ ಸಮವಸ್ತ್ರ ಧರಿಸಿ ಮೆರವಣಿಗೆ ನಡೆಸಲಾಗಿದೆ. ಇದು ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲದೊಂದಿಗೆ ನಡೆದಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್: ಕೇರಳದ ಕಾಸರಗೋಡಿನ ಕನ್ಹನ್ಗಡ್‌ನ ಬಲ್ಲಾ ಬೀಚ್‌ನಲ್ಲಿ 28 ಸೆಪ್ಟೆಂಬರ್ 2023ರಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಯುವಕರು ಮೆರವಣಿಗೆ ಮತ್ತು ಪರೇಡ್ ನಡೆಸಿದ್ದಾರೆ. ಈ ಕಾರ್ಯಕ್ರಮವನ್ನು ಸಮಸ್ತ ಕೇರಳ ಜೆಮ್-ಇಯಾತುಲ್ ಉಲ್ಮ ಇಸ್ಲಾಮಿಕ್ ಸಂಘಟನೆಯು ಆಯೋಜಿಸಿತ್ತು. ಅಲ್ಲಿ ಯುವಕ ಹಿಡಿದಿರುವ ಬಾವುಟ ಅದರ ವಿದ್ಯಾರ್ಥಿ ಯುವಜನ ಘಟಕವಾದ ಸುನ್ನಿ ಯುವಜನ ಸಂಘಟನ್‌ನ ಬಾವುಟವನ್ನು ಹಿಡಿದಿದ್ದಾರೆ. ಅದು ಪಾಕಿಸ್ತಾನದ ಧ್ವಜವಲ್ಲ.
ಈ ಹಿಂದೆಯೂ ಕೇರಳದಲ್ಲಿ ಪಾಕಿಸ್ತಾನದ ಬಾವುಟವನ್ನು ಪ್ರದರ್ಶಿಸಲಾಗಿದೆ ಎಂದು ಅನೇಕ ಬಾರಿ ಸುಳ್ಳು ಸುದ್ದಿಯಾಗಿತ್ತು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಆದ್ದರಿಂದ ಕೇರಳದಲ್ಲಿ ಮುಸ್ಲಿಮರು ಪಾಕಿಸ್ತಾನದ ಧ್ವಜಗಳೊಂದಿಗೆ ಮೆರವಣಿಗೆ ನಡೆಸಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: ಹಳೆಯ ವಿಡಿಯೋಗಳನ್ನು ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.