“ದೇಶ, ಭಾಷೆ, ಗಡಿಯನ್ನು ದಾಟಿ ಗಲ್ಫ್ ದೇಶಕ್ಕೂ ಕಾಲಿಟ್ಟ ಪಪ್ಪು ಉಪನಾಮ, ಗಲ್ಫ್ ದೇಶದ ಪತ್ರಿಕೆಯೊಂದು ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಉಲ್ಲೇಖಿಸಿಯೇ ವರದಿಯೊಂದನ್ನು ಪ್ರಕಟಿಸಿದೆ.” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮತ್ತು ಸಾಕಷ್ಟು ಮಂದಿ ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆ ಕೂಡ ಪ್ರಶ್ನೆಯನ್ನು ಮಾಡಿದ್ದಾರೆ.
PAPPU goes International
Even "GULF NEWS" knows Rahul Gandhi is called PAPPU in India pic.twitter.com/sgJ1mILGbv
— Mahesh Vikram Hegde 🇮🇳 (@mvmeet) January 14, 2019
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿದೆ. ವೈರಲ್ ಪೋಸ್ಟ್‌ನಲ್ಲಿನ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಹಲವಾರು ಪೋಸ್ಟ್‌ಗಳಲ್ಲಿ ರಾಹುಲ್ ಗಾಂಧಿಯವರನ್ನು ಗಲ್ಫ್ ನ್ಯೂಸ್ ಪಪ್ಪು ಎಂದು ಕರೆದಿದೆ ಎಂದೆ ಉಲ್ಲೇಖಿಸಿ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿತ್ತು
ಬಳಿಕ ದುಬೈ ಮೂಲದ ಇಂಗ್ಲೀಷ್ ಪತ್ರಿಕೆ ಗಲ್ಫ್ ನ್ಯೂಸ್‌ನಲ್ಲಿ ಜನವರಿ 9 ರಂದು ಪ್ರಕಟವಾದ ವರದಿಯ ಕುರಿತು ಪರಿಶೀಲನೆಯನ್ನ ನಡೆಸಲಾಯಿತು. ಆಗ ವರದಿಯಲ್ಲಿ ” ಪಪ್ಪು ಎಂಬ ಹಣೆ ಪಟ್ಟಿ ರಾಹುಲ್ ಗಾಂಧಿ ಅವರನ್ನು ಹೇಗೆ ಬದಲಾಯಿಸಿತು” ಎಂಬ ಶೀರ್ಷಿಕೆಯಲ್ಲಿ ವರದಿಯೊಂದು ಕಂಡು ಬಂದಿದೆ. ಆದರೆ ಆ ವರದಿಯಲ್ಲಿ ಎಲ್ಲಿಯೂ ಕೂಡ ರಾಹುಲ್ ಗಾಂಧಿಯವರನ್ನು ಅಣಕಿಸಿ ವರದಿಯನ್ನು ಪ್ರಕಟಿಸಿಲ್ಲ ಎಂಬುದು ಖಚಿವಾಗಿದೆ.
ಗಲ್ಫ್ ನ್ಯೂಸ್ ಪತ್ರಿಕೆಯ ಬಾಬಿ ನಕ್ವಿ ಅವರು ರಾಹುಲ್ ಗಾಂಧಿ ಅವರನ್ನು ಸಂದರ್ಶಿಸಿದಾಗ ಅವರ ಪಪ್ಪು ಎಂಬ ಹಣೆ ಪಟ್ಟಿಯ ಕುರಿತು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದರು ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂದಿ ಅವರು “ನಾನು ಪಡೆದ ಅತ್ಯುತ್ತಮ ಉಡುಗೊರೆ 2014. ನಾನು ಬೇರೆ ಯಾವುದರಿಂದಲೂ ಕಲಿಯಲು ಸಾಧ್ಯವಾಗದ ಹಾಗೆ ಅದರಿಂದ ಕಲಿತಿದ್ದೇನೆ. ಇದರಿಂದ [ಪಪ್ಪು] ನಾನು ವಿಚಲಿತನಾಗುವುದಿಲ್ಲ. ನಾನು ವಿರೋಧಿಗಳ ದಾಳಿಯನ್ನು ಪ್ರಶಂಸಿಸುತ್ತೇನೆ ಮತ್ತು ಅವರಿಂದ ನಾನು ಕಲಿಯುತ್ತೇನೆ. ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದಾದ ಬಳಿಕ ತಮ್ಮ ವ್ಯಂಗ್ಯ ಚಿತ್ರವೊಂದಕ್ಕೆ ಆಟೋಗ್ರಾಫ್ ಕೂಡ ನೀಡಿದ್ದಾರೆ.
ಇದನ್ನೇ ಗಲ್ಫ್ ನ್ಯೂಸ್ ತನ್ನ ವರದಿಯಲ್ಲಿ ಕೂಡ ಉಲ್ಲೇಖಿಸಿದೆ. ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು ರಾಹುಲ್ ಗಾಂಧಿ ಅವರನ್ನು ಗಲ್ಫ್ ನ್ಯೂಸ್ ಸುದ್ದಿ ಸಂಸ್ಥೆ ಪಪ್ಪು ಅಣಕಿಸಿ ವರದಿ ಪ್ರಕಟಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಇದನ್ನೂ ಓದಿ : Fact Check: ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೋದಿಯವರಿಗೆ ಮೊದಲನೇ ಸ್ಥಾನ ಎಂಬುದು ಸುಳ್ಳು
ಈ ವಿಡಿಯೋ ನೋಡಿ : Fact Check: ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೋದಿಯವರಿಗೆ ಮೊದಲನೇ ಸ್ಥಾನ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ