“ಈ ವಿಡಿಯೋ ನೋಡಿ ಮುಸ್ಲಿಂ ಪುರುಷರು ಬಿಜೆಪಿ ಧ್ವಜಗಳನ್ನು ಹಿಡಿದುಕೊಂಡು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಲವು ಮಂದಿ ಇದು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಪ್ಪು ಸಂದೇಶವನ್ನು ಸಾರುತ್ತಿದ್ದಾರೆ.
Video is from Uttar Pradesh
Jai Ho Buldozer Baba https://t.co/2L3Qc5DgHr
— Frontalforce 🇮🇳 (@FrontalForce) March 16, 2024
ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮುಸ್ಲಿಂ ಸಮುದಾಯದ ಟೋಪಿಯನ್ನು ಧರಿಸಿರುವ ಪುರುಷರ ಗುಂಪು, ಬಿಜೆಪಿ ಧ್ವಜವನ್ನು ಹಿಡಿದುಕೊಂಡು ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಹಾಗೂ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಘೋಷಣೆಗಳು ಕೂಡ ಕಂಡು ಬಂದಿವೆ. ಹಾಗಾಗಿ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು ಮುಸಲ್ಮಾನರೇ ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿದ್ದಾರೆ ಎಂದು ವೈರಲ್ ವಿಡಿಯೋವನ್ನು ಹೆಚ್ಚು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ.
बोलो…. और कितने अच्छे दिन चाहिये? pic.twitter.com/dlsooHfbvS
— Sudhir Mishra 🇮🇳 (@Sudhir_mish) March 16, 2024
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ವೈರಲ್ ಆಗುತ್ತಿರುವ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳನ್ನಾಗಿ ವಿಂಗಡಿಸಿ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತ್ತು. ದಿನಾಂಕ 1 ಡಿಸೆಂಬರ್ 2022ರಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆಗಿದ್ದ ವಿಡಿಯೋವೊಂದು ಪತ್ತೆಯಾಗಿತ್ತು. ಈ ವಿಡಿಯೋ ವೈರಲ್ ವಿಡಿಯೋದ ಮೂಲವಾಗಿದ್ದು, ಇದರಲ್ಲಿ ಎಲ್ಲಿಯೂ ಮುಸ್ಲಿಂ ವಿರೋಧಿಯ ಘೋಷಣೆಗಳು ಕೇಳಿ ಬಂದಿಲ್ಲ. ಆದರೆ ಬಿಜೆಪಿ ಪರವಾದ ಘೊಷಣೆಗಳು ಕೇಳೇ ಬಂದಿದೆ.
View this post on Instagram
ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ವೈರಲ್ ವಿಡಿಯೋ 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ 2021 ರ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಡೆಸಿದ ರ್ಯಾಲಿಯ ದೃಶ್ಯಗಳಾಗಿವೆ. ಮೂಲತಃ, ರ್ಯಾಲಿಯಲ್ಲಿ ಭಾಗವಹಿಸಿದವರು ಪಿಎಂ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದರು.
ಇತ್ತೀಚೆಗೆ ವಿಡಿಯೋದ ಧ್ವನಿಯನ್ನು ಬದಲಿಸಿ ಎಡಿಟ್ ಮಾಡಿದ್ದ ಕಾರಣ ಹೆಚ್ಚು ವೈರಲ್ ಆಗಿತ್ತು. ಈ ಕಾರಣದಿಂದಾಗಿ ಸುಲ್ತಾನ್‌ಪುರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕರು ಮಾರ್ಚ್ 2024 ರಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದರು, ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ವಿಡಿಯೋ ಸುಳ್ಳು ಪ್ರತಿಪಾದನೆಯಿಂದ ಕೂಡಿದೆ
ಇದನ್ನೂ ಓದಿ : ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ
ಈ ವಿಡಿಯೋ ನೋಡಿ : ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ