Fact Check | ಅನಿಲ್‌ ಅಂಬಾನಿ, ಮುಖೇಶ್‌ ಅಂಬಾನಿ ರಾಹುಲ್‌ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿಲ್ಲ

” ನೋಡಿ ಇದು ಈ ಹಿಂದೆ ಅನಿಲ್‌ ಅಂಬಾನಿಯವರು ರಾಹುಲ್‌ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ರೀತಿ, ಈಗ ಮುಖೇಶ್‌ ಅಂಬಾನಿ ಕೂಡ ರಾಹುಲ್‌ ಗಾಂಧಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ, ಈ ಮೂಲಕ ತಮ್ಮನ್ನು ಆಗಾಗ ಸುಖಾ ಸುಮ್ಮನೆ ತೆಗಳುತ್ತಿದ್ದ ರಾಹುಲ್‌ ಗಾಂದಿಗೆ ಭಾರತದ ಕುಬೇರರು ತಕ್ಕ ಉತ್ತರ ನೀಡಿದ್ದಾರೆ” ಎಂಬ ಬರಹವೊಂದನ್ನು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಬರಹವನ್ನು ಓದಿದವರು ಇದನ್ನು ನಿಜವಿರಬಹುದು ಎಂದು ನಂಬಿದ್ದಾರೆ.

ಈ ಬರಹದಲ್ಲಿ ಸಾಕಷ್ಟು ವಿಷಯಗಳನ್ನು ಅನಿಲ್‌ ಅಂಬಾನಿ, ಮುಖೇಶ್‌ ಅಂಬಾನಿ ಹೇಳಿದಂತೆ ಬರೆದಿದ್ದರು ಸಹ ಈ ಹೇಳಿಕೆಗಳನ್ನು ಎಲ್ಲಿ ನೀಡಿದ್ದಾರೆ, ಯಾವಾಗ ಮತ್ತು ಯಾವ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರನ್ನು ಟೀಕೆ ಮಾಡಿದ್ದಾರೆ ಎಂಬುದಕ್ಕೆ ಸೂಕ್ತವಾದ ಪುರಾವೆಯನ್ನೇ ನೀಡಿಲ್ಲ. ಆದರೂ ಈ ಬರಹವನ್ನು ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಬರಹದ ಸತ್ಯಾಸತ್ಯತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಬರಹದ ಕುರಿತು ಸತ್ಯ ಪರಿಶೀಲನೆ ನಡೆಸಲು ವಾಟ್ಸ್‌ಆಪ್‌ ಮೂಲಕ ಹಲವರು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡಕ್ಕೆ ಹಂಚಿಕೊಂಡು, ಈ ಬಗ್ಗೆ ಸತ್ಯ ತಿಳಿಸುವಂತೆ ಮನವಿ ಮಾಡಿದ್ದರು.. ಈ ಹಿನ್ನೆಲೆಯಲ್ಲಿ ನಮ್ಮ ತಂಡ ಈ ವೈರಲ್‌ ಸಂದೇಶವನ್ನು ಸಂಪೂರ್ಣವಾಗಿ ಓದಿಕೊಂಡಿತ್ತು.. ನಂತರ ಇದರಲ್ಲಿನ ಕೆಲವೊಂದು ಅಂಶಗಳನ್ನು ಬಳಸಿ ಗೂಗಲ್‌ನಲ್ಲಿ ವಿವಿಧ ಕೀ ವರ್ಡ್ಸ್‌ಗಳನ್ನು ಉಪಯೋಗಿಸಿ ಪರಿಶೀಲನೆ ನಡೆಸಿತು. ಆದರೆ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಯಾವುದೇ ವರದಿಗಳು ಕಂಡು ಬಂದಿಲ್ಲ

ಮುಖೇಶ್‌ ಅಂಬಾನಿ ಮತ್ತು ಅನಿಲ್‌ ಅಂಬಾನಿ ರಾಹುಲ್‌‌ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಯಾವುದೇ ವರದಿಗಳು ಕಂಡು ಬಂದಿಲ್ಲ.
ಮುಖೇಶ್‌ ಅಂಬಾನಿ ಮತ್ತು ಅನಿಲ್‌ ಅಂಬಾನಿ ರಾಹುಲ್‌‌ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಯಾವುದೇ ವರದಿಗಳು ಕಂಡು ಬಂದಿಲ್ಲ.

ಇನ್ನು ಅನಿಲ್‌ ಅಂಬಾನಿ ಹಾಗೂ ಮುಖೇಶ್‌ ಅಂಬಾನಿಯವರ ಇತ್ತೀಚೆಗಿನ ಹೇಳಿಕೆ ವರದಿಗಳನ್ನು ಕೂಡ ಗಮನಿಸಿದ್ದೇವು, ಆದರೆ ಅವರ ಇತ್ತೀಚೆಗಿನ ಯಾವ ಹೇಳಿಕೆಯಲ್ಲೂ ಅವರು ರಾಹುಲ್‌ ಗಾಂಧಿಯವರನ್ನಾಗಲಿ ಅಥವಾ ಕಾಂಗ್ರೆಸ್‌ ಪಕ್ಷವನ್ನಾಗಲಿ ತೆಗಳಿ ಹೇಳಿಕೆ ನೀಡಿರುವುದು ಕಂಡು ಬಂದಿಲ್ಲ. ಇದರ ಜೊತೆಗೆ ಭಾರತದ ಬೃಹತ್‌ ಉದ್ಯಮಿಗಳು ವಿಪಕ್ಷ ನಾಯಕನನ್ನು ತೆಗೆಳುತ್ತಾರೆ ಎಂದರೆ ಈ ಕುರಿತು ರಾಷ್ಟ್ರ ಮಟ್ಟದಲ್ಲಿ ವರದಿಯಾಗ ಬೇಕಿತ್ತು, ಆದರೆ ಆ ರೀತಿಯ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ.

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವಾಟ್ಸ್‌ಆಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಬರಹ ಸುಳ್ಳಿನಿಂದ ಕೂಡಿದೆ. ಹಾಗೂ ಈ ರೀತಿಯ ಕಪೋ ಕಲ್ಪತ ಬರಹಗಳು ಜನಸಾಮಾನ್ಯರನ್ನು ರಾಜಕೀಯವಾಗಿ ದಿಕ್ಕು ತಪ್ಪಿಸಲು ಬಳಸಲಾಗುತ್ತಿದೆ ಎಂಬುದು ಬಹಿರಂಗವಾಗಿದೆ. ಇಂತಹ ಬರಹಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿ..


ಇದನ್ನೂ ಓದಿ : ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ವಿಡಿಯೋ ನೋಡಿ: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *