ಇತ್ತೀಚೆಗೆ “ನರೇಂದ್ರ ಮೋದಿ ಮತ್ತು ಬಿಜೆಪಿ ಸೋಲಿಸಲು ದುಬೈನಿಂದ ಮುಸ್ಲಿಮರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅವರಿಗೆ ವಿಮಾನ ವ್ಯವಸ್ಥೆ ಮಾಡಲಾಗಿದೆ” ಎಂದು ಸುಳ್ಳು ಹರಿಬಿಡಲಾಗಿತ್ತು. ಆದರೆ ದುಬೈನಲ್ಲಿ ಪ್ರವಾಹದ ಪರಿಸ್ಥಿತಿ ಇದ್ದ ಕಾರಣ ಎಲ್ಲಾ ವಿಮಾನ ಹಾರಾಟಗಳು ಸ್ಥಗಿತವಾಗಿದ್ದವು. ಮತದಾನಕ್ಕೆ ಆಗಮಿಸಲು ಸಹ ಕಷ್ಟಪಡುವಂತಿತ್ತು. ಈ ಕಾರಣಕ್ಕಾಗಿ ಕೇರಳದ ಕೆಲವು ಮುಸ್ಲಿಂ ಸಂಘಟನೆಗಳು ಸರ್ಕಾರದೊಟ್ಟಿಗೆ ಮಾತನಾಡಿ ಎರಡು ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿದ್ದರು.
ಈಗ, “ದುಬೈನಲ್ಲಿರುವ ಸುನ್ನಿ ಮುಸ್ಲಿಮರ ಸಂಘ, ಚುನಾವಣೆಯಲ್ಲಿ ‘ಫ್ಯಾಸಿಸ್ಟ್ ಶಕ್ತಿ’ಗಳನ್ನು ಸೋಲಿಸಲು ಮತ್ತು ಕಾಂಗ್ರೆಸ್ ಅನ್ನು ಮರುಸ್ಥಾಪಿಸಲು ಕರ್ನಾಟಕಕ್ಕೆ ಬರಲು ಮುಸ್ಲಿಮರಿಗೆ ಸಂಪೂರ್ಣ ಆರ್ಥಿಕ ನೆರವು ನೀಡುತ್ತಿದೆ. ಆದರೆ ಹಿಂದೂಗಳು ಬೇಸಿಗೆ ಎಂದು ಮನೆಯಲ್ಲಿ ಮಲಗಿದ್ದಾರೆ ಅಥವಾ ಮೌಲಾನ ಮೋದಿ ಹಿಂದೂಗಳಿಗೆ ಏನೂ ಮಾಡಿಲ್ಲ ಎಂದು ಸುಳ್ಳು ಹೇಳಿದ್ದಾರೆ.” ಎಂದು ಪ್ರತಿಪಾದಿಸಿ ಸುನ್ನಿ ಮುಸ್ಲಿಮರ ಸಂಘದ ಪ್ರಕಟನೆಯ ಪೋಸ್ಟರ್ ಒಂದು ಸಾಕಷ್ಟು ವೈರಲ್ ಆಗಿದೆ.
Association of Sunni Muslims, Dubai is offering full financial support to Muslims to fly to Karnataka to defeat 'Fascist Forces' and restore CONgress.
Meanwhile Hindus are sleeping at home as it is a hot summer or worse lying that Mualana Modi has done nothing for Hindus. pic.twitter.com/7YuJZGzDvQ
— Arun Pudur (@arunpudur) May 7, 2024
ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ವೈರಲ್ ಪೋಸ್ಟರ್ ನಲ್ಲಿ ನೀಡಲಾದ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳು ನಕಲಿಯಾಗಿದೆ. ದುಬೈನಲ್ಲಿ ಕರ್ನಾಟಕದ ಸುನ್ನಿ ಮುಸ್ಲಿಮರ ಸಂಘ ಇರುವುದು ಕಂಡು ಬಂದಿಲ್ಲ. ನೀಡಲಾದ ವಿಳಾಸ ಹುಡುಕಿದಾಗ ವಿಳಾಸವು ದುಬೈನಲ್ಲಿರುವ ಪಾಕಿಸ್ತಾನದ ಕಾನ್ಸುಲೇಟ್ ಜನರಲ್‌ಗೆ ಸೇರಿದೆ.
ಇದಲ್ಲದೆ, ನೋಟಿಸ್‌ನಲ್ಲಿ ಪಟ್ಟಿ ಮಾಡಲಾದ ಮೂರು ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಿದಾಗ ಅವುಗಳಲ್ಲಿ ಯಾವುದೂ ಸುನ್ನಿ ಮುಸ್ಲಿಮರ ಸಂಘದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಕಂಡುಬಂದಿದೆ. ಮೊದಲ ಸಂಖ್ಯೆ, ಮೊಹಮ್ಮದ್ ಫಯಾಜ್‌ಗೆ ಎಂಬುವವರದಾಗಿದ್ದು, ವಾಸ್ತವವಾಗಿ ಕಾಫಿ ಯಂತ್ರ ಮಾರಾಟ ಮತ್ತು ಸೇವೆಗಳ ಕಂಪನಿ ಡಾಲ್‌ಮೇರ್‌ನ ಸಂಪರ್ಕ ಸಂಖ್ಯೆಯಾಗಿದೆ. ಕಂಪನಿಯು ಪ್ರತಿಕ್ರಿಯಿಸಿ “ಪ್ರಕಟಣೆಯಲ್ಲಿ ಉಲ್ಲೇಖಿಸಿರುವಂತೆ ಸುನ್ನಿ ಮುಸ್ಲಿಂ ಸಂಸ್ಥೆಯೊಂದಿಗೆ ಸಂಬಂಧ ಹೊಂದಿಲ್ಲ. ಈ ವಿಷಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Dallmayr ದುಬೈನ Instagram ಪುಟದಲ್ಲೂ ಸಹ ಸುನ್ನಿ ಮುಸ್ಲಿಮರ ಸಂಘಕ್ಕೆ ಸೇರಿದ ಸಂಖ್ಯೆ ಎಂದು ನೀಡಿರುವ ಅದೇ ಸಂಪರ್ಕ ಸಂಖ್ಯೆಯನ್ನು ಹೊಂದಿದೆ.
ನಾವು WhatsApp ಮೂಲಕ ಪೋಸ್ಟರ್‌ನಲ್ಲಿ ಪಟ್ಟಿ ಮಾಡಲಾದ ಎರಡನೇ ಮತ್ತು ಮೂರನೇ ವ್ಯಕ್ತಿಗಳ ಸಂಖ್ಯೆಗಳನ್ನು ಸಂಪರ್ಕಿಸಿದೆವು, ಇಬ್ಬರೂ ಒಂದೇ ರೀತಿಯ ಉತ್ತರಗಳನ್ನು ನೀಡಿದ್ದಾರೆ ಮತ್ತು ನೋಟೀಸ್ ನಕಲಿ ಮತ್ತು ಅವರು ಅಂತಹ ಯಾವುದೇ ಸಂಸ್ಥೆಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿದರು. ಇದಲ್ಲದೆ, ನೋಟಿಸ್‌ನಲ್ಲಿ ‘ಫಿರೋಜ್ ಹಿದ್ಯತುಲ್ಲಾ’ ಎಂದು ಪಟ್ಟಿ ಮಾಡಲಾದ ಎರಡನೇ ಸಂಪರ್ಕ ಸಂಖ್ಯೆಯವರ ನಿಜವಾದ ಹೆಸರು ಸಂತಕುಮಾರ್ ಮತ್ತು ಅವರು ಕೇರಳದ ತಿರುವನಂತಪುರದವರು ಎಂದು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಬೇಕಂತಲೇ ಇಂತಹ ನಕಲಿ ಪೋಸ್ಟರ್ ಸೃಷ್ಟಿಸಿ ಸುಳ್ಳು ಹಂಚಿಕೊಳ್ಳಲಾಗಿದೆ.
ವಿಡಿಯೋ ನೋಡಿ: ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ