Fact Check | ಸೇನಾಧಿಕಾರಿ ಪುತ್ರಿ ಮತಾಂತರಳಾಗಿದ್ದಾಳೆ ಎಂದು ಬೇರೆ ಯುವತಿಯ ಫೋಟೋ ಹಂಚಿಕೆ

“ನಿಗೂಢವಾಗಿ ನಾಪತ್ತೆಯಾಗಿದ್ದ ತಿರುವನಂತಪುರದ ಸೇನಾಧಿಕಾರಿಯೊಬ್ಬರ ಪುತ್ರಿ ಅಪರ್ಣಾ (21) ಅವರನ್ನು ಮಂಚೇರಿಯ ಇಸ್ಲಾಂ ಧಾರ್ಮಿಕ ಅಧ್ಯಯನ ಕೇಂದ್ರವಾದ ಸತ್ಯಸರಣಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ದುಬೈನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪರ್ಣಾ ಮದುವೆಗೆ ಹದಿನೈದು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಕಳೆದ ದಿನ ಸತ್ಯಸರಣಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಮಲಪ್ಪುರಂ ಮೂಲದ ಆಶಿಕ್ ಜತೆ ಅಪರ್ಣಾ ಮದುವೆಯಾದ ದಾಖಲೆಗಳು ಮಂಜೇರಿ ನಗರಸಭೆಯಲ್ಲೂ ಪತ್ತೆಯಾಗಿವೆ. ಧಾರ್ಮಿಕ ಅಧ್ಯಯನಕ್ಕಾಗಿ ಅಲ್ಲಿಯೇ ಉಳಿದುಕೊಂಡಿರುವುದಾಗಿ ಅಪರ್ಣಾ ಪೊಲೀಸರಿಗೆ ತಿಳಿಸಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದೇ ಪೋಸ್ಟ್‌ನಲ್ಲಿ ಇನ್ನೂ ಮುಂದುವರೆದು  “ರಾಜ್ಯ ಗುಪ್ತಚರ ಸಂಸ್ಥೆಯೂ ತನಿಖೆ ಆರಂಭಿಸಿದೆ. ಅಪರ್ಣಾ ಅವರನ್ನು ವಾಪಸ್ಸು ನೀಡುವಂತೆ ತಾಯಿ ಮಿನಿ ವಿಜಯನ್ ಎಡಿಜಿಪಿ ಬಿ.ಸಂಧ್ಯಾ ಅವರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ದಾಳಿ ನಡೆದಿದೆ. ಯುವತಿ ಹೊಸ ಪಾಸ್ ಪೋರ್ಟ್ ತೆಗೆದುಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅಪರ್ಣಾ ದೇಶ ತೊರೆಯದಂತೆ ತಡೆಯಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಸತ್ಯಸರಣಿಯಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಎಪ್ಪತ್ತು ಹಿಂದೂ ಮತ್ತು ಕ್ರೈಸ್ತ ಯುವತಿಯರ ಮತಾಂತರದ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಬಾಲಕಿಯರನ್ನು ಇಸ್ಲಾಂ ಧಾರ್ಮಿಕ ಅಧ್ಯಯನಕ್ಕಾಗಿ ಇರಿಸಲಾಗಿತ್ತು ಎಂದು ಸತ್ಯಸರಣಿ ಅಧಿಕಾರಿಗಳು ವಿವರಿಸಿದರು.” ಎಂದು ಉಲ್ಲೇಖಿಸಲಾಗಿದೆ.

ಈ ದೀರ್ಘವಾದ ಬರಹವನ್ನು ಯುವತಿಯೊಬ್ಬಳ ಚಿತ್ರದೊಂದಿಗೆ ಓದಿದ ಅನೇಕರು ಇದು ನಿಜವಾದ ಘಟನೆ ಎಂದು ನಂಬಿ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ. ಹಾಗಾಗಿ ಈ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಅಂಕಣದಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿದ್ದು, ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಪರಿಶೀಲನೆ ನಡೆಸಿತು. ಈ ವೇಳೆ ಮಲಯಾಳಂ ಪತ್ರಿಕೆಯೊಂದರ ವರದಿಯೊಂದು ಪತ್ತೆಯಾಗಿತ್ತು. ಈ ವರದಿಯಲ್ಲಿ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ ಮದುವೆ ನಿಶ್ಚಯವಾಗಿರುವ ಯುವತಿ ಅನ್ಯ ಧರ್ಮದ ಪ್ರೇಮಿಯೊಂದಿಗೆ ಶಾರ್ಜಾ ಪ್ರವೇಶಿಸಿದ್ದಾಳೆ ಎಂಬ ಸುದ್ದಿ ವರದಿಯಾಗಿದೆ. ಮನೆಯವರ ಒತ್ತಾಯಕ್ಕೆ ಮಣಿದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಬಳಿಕ ಪ್ರಿಯಕರನೊಂದಿಗೆ ಶಾರ್ಜಾಕ್ಕೆ ತೆರಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದರಲ್ಲಿ ಮತಾಂತರದ ಬಗ್ಗೆ ಅಥವಾ ಇತರ ಮಾಹಿತಿಯನ್ನು ನೀಡಲಾಗಿಲ್ಲ.

ಮಲಯಾಳಂ ಸ್ಥಳೀಯ ಪತ್ರಿಕೆಯಲ್ಲಿ ಕಂಡು ಬಂದ ವರದಿ
ಮಲಯಾಳಂ ಸ್ಥಳೀಯ ಪತ್ರಿಕೆಯಲ್ಲಿ ಕಂಡು ಬಂದ ವರದಿ

ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ,  2018 ಮತ್ತು 2020 ರಲ್ಲಿ ಇದೇ ರೀತಿಯ ಸುದ್ದಿ ವೈರಲ್‌ ಆಗಿತ್ತು ಮತ್ತು ಈ ಸುದ್ದಿ 2016ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. . ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ ವೈರಲ್‌ ಫೋಟೋದಲ್ಲಿರುವ ಯುವತಿ ಸೇನಾಧಿಕಾರಿಯ ಮಗಳು ಅಪರ್ಣ ಎಂಬುದು ಸುಳ್ಳಾಗಿದೆ. ಈ ಪೋಸ್ಟ್‌ನಲ್ಲಿ ನೀಡಲಾದ ಫೋಟೋ ಕಾಞಂಗಾಡ್‌ನಿಂದ ಕಾಣೆಯಾದ ಹುಡುಗಿದೆ.

ಅಪರ್ಣಾ ಪ್ರಕರಣದ ಕುರಿತು ಮಾಧ್ಯಮಂ ವರದಿ
ಅಪರ್ಣಾ ಪ್ರಕರಣದ ಕುರಿತು ಮಾಧ್ಯಮಂ ವರದಿ

29 ಜುಲೈ 2016ರಲ್ಲಿ ಅಪರ್ಣಾ ಅವರು ಮಂಚೇರಿಯ ಸತ್ಯಸರಣಿ ಟ್ರಸ್ಟ್‌ನ ಮರ್ಕಸುದ್ದಾವಾ ಎಂಬ ಸಂಸ್ಥೆಗೆ ಯಾರ ಒತ್ತಡ ಮತ್ತು ಬಲವಂತವಿಲ್ಲದೆ ಇಸ್ಲಾಂ ಬಗ್ಗೆ ಕಲಿಯಲು ಬಂದಿದ್ದೇನೆ ಎಂದು ಹೇಳಿದರು. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟ್ರಸ್ಟ್‌ನ ಪದಾದಿಕಾರಿಗಳು, ಇಲ್ಲಿಗೆ ಯಾರನ್ನೂ ಒತ್ತಾಯ ಮಾಡಿ ಕರೆಯುವುದಿಲ್ಲ. ನಾವು ಇಲ್ಲಿಗೆ ಇಸ್ಲಾಂ ಕುರಿತು ಅಭ್ಯಾಸ ನಡೆಸಲು ಬರುವವರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಮಾಹಿತಿಯನ್ನು ಕೂಡ ನೀಡಿದ್ದಾರೆ. 

2019 ಜುಲೈ 29ರಂದು ಅಪರ್ಣಾ ತಾನೆ ಸ್ವ ಇಚ್ಚೆಯಿಂದ ಇಸ್ಲಾಂ ಧರ್ಮದ ಕುರಿತು ಅಧ್ಯಯನ ನಡೆಸಲು ಬಂದಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಳು
2019 ಜುಲೈ 29ರಂದು ಅಪರ್ಣಾ ತಾನೆ ಸ್ವ ಇಚ್ಚೆಯಿಂದ ಇಸ್ಲಾಂ ಧರ್ಮದ ಕುರಿತು ಅಧ್ಯಯನ ನಡೆಸಲು ಬಂದಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಳು

ಇನ್ನು, ತಿರುವನಂತಪುರಂನಿಂದ ಕಾಣೆಯಾದ ಅಪರ್ಣ 2016ರಲ್ಲಿ ಸುದ್ದಿಗೋಷ್ಠಿ ನಡೆಸಿ ತಾನೆ ಸ್ವ ಇಚ್ಚೇಯಿಂದ ಇಸ್ಲಾಂ ಕುರಿತು ಅಭ್ಯಾಸ ನಡೆಸುತ್ತಿದ್ದೇನೆ ಎಂದು ಹೇಳಿದ್ದರು, ಆದರೆ ವೈರಲ್‌ ಫೋಟೋದಲ್ಲಿರುವ ಹುಡುಗಿಗೂ  ತಿರುವನಂತಪುರಂನ ಅಪರ್ಣಾ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲಎಂಬುದು ಈ ಎಲ್ಲಾ ಅಂಶಗಳಿಂದ ಪತ್ತೆಯಾಗಿದೆ. ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check | CSK ಅಭಿಮಾನಿಗಳ ಮೇಲೆ RCB ಅಭಿಮಾನಿಗಳಿಂದ ಹಲ್ಲೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check | CSK ಅಭಿಮಾನಿಗಳ ಮೇಲೆ RCB ಅಭಿಮಾನಿಗಳಿಂದ ಹಲ್ಲೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *