“ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಇತರ ಜನರೊಂದಿಗೆ ಹಿಂದೂ ದೇವರಾದ ಭಗವಾನ್ ಶ್ರೀರಾಮನ ಭಾವಚಿತ್ರವನ್ನು ಹಿಡಿದು ಪೋಸ್ ಕೊಟ್ಟಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲನ್ನು ಗ್ರಹಿಸಿರುವ ಓವೈಸಿ ಹಿಂದೂ ಧರ್ಮದ ಜನರ ಬೆಂಬಲವನ್ನು ಕೋರುತ್ತಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.
*जब लगता है कि फट जाएगी तो अच्छे अच्छे लाईन पर आ जाते हैं !!*😂😂 pic.twitter.com/Sy5EgzWhr6
— 🚩योगीआदित्यनाथफैन(डिजिटल योद्धा)गोडसे का भक्त 🕉 (@maheshyagyasain) May 13, 2024
ಈ ವೈರಲ್ ಫೋಟೋ ಮೂಲಕ ಈ ಬಾರಿ ಓವೈಸಿ ಸೋಲು ಖಚಿತವಾಗಿದೆ. ಹಾಗಾಗಿ ಅವರು ಹಿಂದೂಗಳನ್ನ ಓಲೈಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂದು ಹಲವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಸತ್ಯಾಸತ್ಯತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ
अबे ये क्या देख लिया आज, 🤣🤣🤣
राम से बड़ा कोई नही है ❤️🙏#जय_श्री_राम #जय_श्रीराम #भारत_माता_की_जय pic.twitter.com/2lcFemCaTk
— ARanjeet Singh (@contact2ranjeet) May 19, 2024
ಫ್ಯಾಕ್ಟ್‌ಚೆಕ್
ವೈರಲ್ ಆಗುತ್ತಿರುವ ಪೋಟೋವನ್ನು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ Google ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ 07 ಏಪ್ರಿಲ್ 2018 ರಂದು ಅಸಾದುದ್ದೀನ್ ಓವೈಸಿ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್‌ವೊಂದು ಕಂಡು ಬಂದಿತು. ಅದರಲ್ಲಿ “ಮೋಚಿ ಕಾಲೋನಿಯ ದಲಿತ ಸಮುದಾಯದ ಜನ AIMIM ಅಧ್ಯಕ್ಷ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಅವರನ್ನು AIMIM ಪಕ್ಷದ ಪ್ರಧಾನ ಕಛೇರಿ ದರುಸ್ಸಲಾಮ್‌ನಲ್ಲಿ ಭೇಟಿ ಮಾಡಿ ಅವರಿಗೆ ಧನ್ಯವಾದ ಅರ್ಪಿಸಿದ್ದರು. ತಮ್ಮ ಪ್ರದೇಶದಲ್ಲಿ (ರಾಮನಸ್ಪುರ ವಿಭಾಗ, ಬಹದ್ದೂರ್ಪುರ ಕ್ಷೇತ್ರ) ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಮನವಿ ಮಾಡಿದರು.” ಎಂದು ಬರೆದುಕೊಳ್ಳಲಾಗಿತ್ತು.. ಇನ್ನು ಇದೇ ಪೋಸ್ಟ್‌ನಲ್ಲಿದ್ದ ಫೋಟೋದಲ್ಲಿ ಓವೈಸಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ
ಈ ಪೋಟೋ ಮತ್ತು ವೈರಲ್ ಫೋಟೋವನ್ನು ಹೋಲಿಕೆ ಮಾಡಿದಾಗ,ವೈರಲ್ ಫೋಟೋದಲ್ಲಿರುವ ವ್ಯಕ್ತಿಗಳು, ಸ್ಥಳ, ಎಲ್ಲವೂ ಒಂದೇ ರೀತಿಯಲ್ಲಿದ್ದು ಫೋಟೋದಲ್ಲಿ ನೀಡಲಾದ ಭಾವಚಿತ್ರ ಮಾತ್ರ ಬೇರೆಯದ್ದಾಗಿದೆ.
ಹೀಗಾಗಿ ಇದು ಎಡಿಟೆಡ್ ಫೋಟೋವಾಗಿದೆ ಮತ್ತು 6 ವರ್ಷದ ಹಿಂದಿನ ಫೋಟೋವಾಗಿದೆ. ಈ ಫೋಟೋಗೂ ಈಗಿನ ಲೋಕಸಭೆ ಚುನಾವಣೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ದೃಢ ಪಟ್ಟಿದೆ. ಹಾಗಾಗಿ ಇಂತಹ ಪೋಸ್ಟ್‌ಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ..
ಇದನ್ನೂ ಓದಿ : ಮೋದಿ ಪ್ರಧಾನಿಯಾಗುವ ಮುನ್ನ ಭಾರತದಲ್ಲಿ ಕೇವಲ 300 ಸ್ಟಾರ್ಟಪ್‌ಗಳಿದ್ದವು ಎಂಬುದು ಸುಳ್ಳು
ಈ ವಿಡಿಯೋ ನೋಡಿ : ಮೋದಿ ಪ್ರಧಾನಿಯಾಗುವ ಮುನ್ನ ಭಾರತದಲ್ಲಿ ಕೇವಲ 300 ಸ್ಟಾರ್ಟಪ್‌ಗಳಿದ್ದವು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.