Fact Check: ಸಂಸದೆ ಸ್ವಾತಿ ಮಲಿವಾಲ್ ಮತ್ತು ಧ್ರುವ ರಾಠಿ ನಡುವಿನ ವೈರಲ್ ಫೋನ್ ಕಾಲ್ ಡೀಪ್‌ಫೇಕ್ ಆಗಿದೆ

ಧ್ರುವ ರಾಠಿ

ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮತ್ತು ಯೂಟ್ಯೂಬರ್ ಧ್ರುವ ರಾಠಿ ನಡುವಿನ ಎಐ-ರಚಿಸಿದ ಫೋನ್ ಸಂಭಾಷಣೆಯನ್ನು ಇಬ್ಬರ ನಡುವಿನ ನಿಜವಾದ ಸಂಭಾಷಣೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಡಿಯೋ ಕ್ಲಿಪ್‌ನಲ್ಲಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಮುಂದೆ ಹೇಗೆ ಹಲ್ಲೆ ನಡೆಸಲಾಯಿತು ಎಂಬುದನ್ನು ಮಲಿವಾಲ್ ವಿವರಿಸುವುದನ್ನು ಕೇಳಬಹುದು ಮತ್ತು ಅದರ ಬಗ್ಗೆ ವೀಡಿಯೊ ಮಾಡದಂತೆ ರಾಠಿಗೆ ವಿನಂತಿಸಿದ್ದಾರೆ. ನಂತರ ಇಬ್ಬರೂ ರಾಠಿಯವರ ‘ಸಂಬಳ’ ಸಮಯಕ್ಕೆ ಬರುತ್ತಿವೆಯೇ ಎಂದು ಚರ್ಚಿಸುತ್ತಾರೆ. 

ಮೇ 13 ರಂದು, ದೆಹಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಸಿಎಂ ನಿವಾಸದೊಳಗೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ಆರೋಪಿಸಿದ್ದಾರೆ. ಕುಮಾರ್ ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ತಮ್ಮ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲು ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ದೆಹಲಿ ಪೊಲೀಸರು ಮೇ 18, 2024 ರಂದು ಕುಮಾರ್ ಅವರನ್ನು ಬಂಧಿಸಿದರು ಮತ್ತು ಅವರು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದರ ನಂತರ, ಯೂಟ್ಯೂಬ್ ಧ್ರುವ ರಾಥಿ ಅವರು ಘಟನೆಯ ಕುರಿತು ವೀಡಿಯೊವನ್ನು ಮಾಡಿದರು ಮತ್ತು ಮಲಿವಾಲ್ ಅವರ ದೂರು ನಕಲಿ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ವೈರಲ್ ಆಗಿರುವ ಆಡಿಯೋ ರೆಕಾರ್ಡಿಂಗ್ ಹಂಚಿಕೊಳ್ಳಲಾಗುತ್ತಿದೆ.

X ನಲ್ಲಿನ ಬಳಕೆದಾರರು AI- ರಚಿತವಾದ ಆಡಿಯೊವನ್ನು ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, ಅದರ ಕನ್ನಡಾನುವಾದ “ದೆಹಲಿ. ಸ್ವಾತಿ ಮಲಿವಾಲ್ ಮತ್ತು ಧ್ರುವ ರಾಠಿ ಅವರ ವೀಡಿಯೊ ವೈರಲ್ ಆಗಿದೆ. ಸ್ವಾತಿ ಮಲಿವಾಲ್ ಕೋರಿಕೆಯ ಮೇರೆಗೆ ವೀಡಿಯೊ ಮಾಡಬೇಡಿ ಎಂದು ಧ್ರುವ ರಾಠಿಯನ್ನು ಕೇಳಿಕೊಂಡಿದ್ದಾರೆ. ಕೇಜ್ರಿವಾಲ್ ಮತ್ತು ಸುನೀತಾ ಅವರ ಸಮ್ಮುಖದಲ್ಲಿಯೇ ಮಲಿವಾಲ್ ಅವರಿಗೆ ಹೊಡೆಯಲಾಗಿದೆ. ದ್ರುವ ರಾಠಿ ಪ್ರತಿಪಕ್ಷಗಳ ಆದೇಶದ ಮೇರೆಗೆ ಅಜೆಂಡಾಗಳ ವೀಡಿಯೊಗಳನ್ನು ಮಾಡುತ್ತಾನೆ. ” ಎಂದು ಆರೋಪಿಸಿ ಆಡಿಯೋ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ವೈರಲ್ ಆಡಿಯೊವನ್ನು ಸೂಕ್ಮವಾಗಿ ಆಲಿಸಿದಾಗ ಕೆಲವು ವ್ಯತ್ಯಾಸಗಳನ್ನು ಕಂಡುಬಂದಿವೆ, ಇದು ಇಬ್ಬರ ಧ್ವನಿಗಳನ್ನು ತಂತ್ರಜ್ಞಾನ ಬಳಸಿ ಸಿಂಥೆಟಿಕ್ ಮಾಡಿರುವ ಸಾಧ್ಯತೆಯನ್ನು ಸೂಚಿಸುತ್ತದೆ.

0:09 ಮಾರ್ಕ್‌ನಲ್ಲಿ, ಅರವಿಂದ್ ಮತ್ತು ಸುನೀತಾ ಕೇಜ್ರಿವಾಲ್ ಇಬ್ಬರ ಸಮ್ಮುಖದಲ್ಲಿಯೇ ತನಗೆ ಹಲ್ಲೆ ನಡೆಸಲಾಗಿದೆ ಎಂದು ಹೇಳುವ ಮಲಿವಾಲ್‌ನ ಧ್ವನಿಯು ಕೇಳಿಬರುತ್ತದೆ, ಅವರ ಧ್ವನಿಗಳನ್ನು ಒಂದರ ಮೇಲೊಂದು ಹೊದಿಸಿ ಜಂಪ್ ಕಟ್ ಇದೆ.

ಇದರಿಂದ ಸುಳಿವು ಪಡೆದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಜೋಧ್‌ಪುರದಿಂದ ರಚಿಸಲಾದ ಡೀಪ್‌ಫೇಕ್ ಡಿಟೆಕ್ಷನ್ ಟೂಲ್ ಇಟಿಸಾರ್ ಮೂಲಕ ನಾವು ಆಡಿಯೊ ಕ್ಲಿಪ್ ಅನ್ನು ರನ್ ಮಾಡಿದಾಗ. ಟೂಲ್‌ನ ಫಲಿತಾಂಶಗಳು ಆಡಿಯೋ ಡೀಪ್‌ಫೇಕ್ ಎಂದು ಹೆಚ್ಚಿನ ವಿಶ್ವಾಸದಿಂದ ಸೂಚಿಸಿವೆ.

ನಾವು ಆಡಿಯೊ ಕ್ಲಿಪ್ ಅನ್ನು ಕಾಂಟ್ರೈಲ್ಸ್‌ನ ಡೀಪ್‌ಫೇಕ್ ಸಂಶೋಧಕರಿಗೆ ಕಳುಹಿಸಿದಾಗ, ಅವರು ವೈರಲ್ ಫೋನ್ ಕರೆ “AI ಆಡಿಯೊ ಸ್ಪೂಫ್” ಎಂದು ನಮಗೆ ಮತ್ತಷ್ಟು ದೃಢಪಡಿಸಿದರು ಮತ್ತು “ಎರಡೂ ಸ್ಪೀಕರ್‌ಗಳು AI ಧ್ವನಿ ಕ್ಲೋನಿಂಗ್‌ನ ಸ್ಪಷ್ಟ ಮಾದರಿಗಳನ್ನು ಹೊಂದಿವೆ” ಎಂದು ತಿಳಿಸಿದ್ದಾರೆ.

ಆದ್ದರಿಂದ ಆಡಿಯೊವನ್ನು AI ಬಳಸಿಕೊಂಡು ರಚಿಸಲಾಗಿದೆ ಮತ್ತು ಇದು ಮಾಲಿವಾಲ್ ಮತ್ತು ಧ್ರುವ ರಾಠಿ ನಡುವಿನ ನಿಜವಾದ ಸಂಭಾಷಣೆಯಲ್ಲ.


ಇದನ್ನು ಓದಿ: ಚೀನಾದಲ್ಲಿ ಸಂಭವಿಸಿದ ಆಲಿಕಲ್ಲು ಚಂಡಮಾರುತವನ್ನು ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗುತ್ತಿದೆ


ವಿಡಿಯೋ ನೋಡಿ: ಉತ್ತರ ಪ್ರದೇಶದಲ್ಲಿ LLB ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆಯೇ ಹೊರತು UPSC ಪರೀಕ್ಷೆಯಲ್ಲಿ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *