Fact Check: ಕಮಲ್‌ ನಾಥ್ ಅವರ ಡೀಪ್‌ಫೆಕ್ ವಿಡಿಯೋವನ್ನು ಸುಳ್ಳು ಹರಡಲು ಬಳಸಲಾಗುತ್ತಿದೆ

ಲೋಕಸಭಾ ಚುನಾವಣೆಗಳು ಜರುಗುತ್ತಿರುವ ಈ ಸಂದರ್ಭದಲ್ಲಿ “ಕಾಂಗ್ರೆಸ್‌ ಮುಸ್ಲಿಂ ಓಲೈಕೆ ನಡೆಸುತ್ತಿದ್ದು ಹಿಂದುಗಳನ್ನು ಅವಮಾನಿಸುತ್ತಿದೆ” ಎಂದು ಹಿಂದುತ್ವ ಮತ್ತು ಹಿಂದು ಧರ್ಮದ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಎದುರಾಳಿಯನ್ನಾಗಿಸಿ ಬಿಜೆಪಿ ಪಕ್ಷವು ಮತ ಪಡೆಯಲು ಭಾರತದಾದ್ಯಂತ ಪ್ರಯತ್ನಸುತ್ತಿದೆ. ಇದರ ಭಾಗವಾಗಿ ಪ್ರತೀದಿನವೂ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸುಳ್ಳು ಹೇಳಿಕೆಗಳನ್ನು, ಆರೋಪಗಳನ್ನು ಹಂಚಿಕೊಂಡು ಧರ್ಮಾಧಾರಿತ ರಾಜಕಾರಣವನ್ನು ಬಳಸಿಕೊಂಡು ಸಾಕಷ್ಟು ದ್ವೇಷ ಹರಡುವುದರಲ್ಲಿ ನಿರತವಾಗಿದೆ.

ಈಗ, “ನಿನ್ನೊಂದಿಗೆ ಮಾತನಾಡಬೇಕು ಎಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಆದರೆ ಈ ವಿಷಯ ಕೋಣೆದಾಟಿ ಹೋಗಬಾರದು ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ನಾವು ನಿಮ್ಮ ಬಗ್ಗೆ ತುಂಬಾ ಚಿಂತಿತರಾಗಿದ್ದೇವೆ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇವೆ. ಅದಕ್ಕಾಗಿಯೇ ಮುಸ್ಲಿಂ ಸಹೋದರರು ನಮ್ಮೊಂದಿಗೆ ನಿಲ್ಲಬೇಕೆಂದು ಕಾಂಗ್ರೆಸ್ ಬಯಸುತ್ತದೆ, ಇದರಿಂದ ನಾವು ನಿಮಗೆ ಪ್ರಯೋಜನವಾಗುವ ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ, ನಮ್ಮನ್ನು ಬೆಂಬಲಿಸಿ ಮತ್ತು ನೀವು ಮಸೀದಿಗಾಗಿ ನಿಮ್ಮ ಭೂಮಿಯನ್ನು ಪಡೆಯುತ್ತೀರಿ ಮತ್ತು ನಾವು (ಆರ್ಟಿಕಲ್) 370 ಅನ್ನು ಸಹ ಗಮನಿಸಿಕೊಳ್ಳುತ್ತೇವೆ. ನಾನು ಎಲ್ಲವನ್ನೂ ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ…” ಎಂದು ಕಾಂಗ್ರೆಸ್‌ ನಾಯಕ ಮಾಜಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್‌ ನಾಥ್ ಮುಸ್ಲಿಂ ಮುಖಂಡರ ಜೊತೆಗೆ ರಹಸ್ಯದ ಸಭೆ ನಡೆಸಿದ್ದಾರೆ ಎಂಬ ವಿಡಿಯೋ ಒಂದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ವೈರಲ್ ಆಗುತ್ತಿರುವ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ವಿಡಿಯೋ ಡೀಪ್‌ಪೇಕ್ ವಿಡಿಯೋ ಆಗಿದೆ. ಮೂಲ ವಿಡಿಯೋ ನವೆಂಬರ್ 14, 2018 ರಂದು ಮಧ್ಯ ಪ್ರದೇಶದ ಲೋಕ ಸಭಾ ಚುನಾವಣಾ ಸಮಯದಲ್ಲಿ ಕಮಲ್ ನಾಥ್ ಮುಸ್ಲಿಂ ಮತದಾರರನ್ನು ಭೇಟಿಯಾದ ಸಂದರ್ಭದ್ದಾಗಿದೆ. ಮೂಲ ವೀಡಿಯೋದಲ್ಲಿ, ನಾಥ್ ಅವರು ಮಸೀದಿ ಅಥವಾ 370 ನೇ ವಿಧಿಯ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಅಲ್ಪಸಂಖ್ಯಾತ ಸಮುದಾಯವನ್ನು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡುತ್ತಾರೆ ಮತ್ತು “ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ತಂತ್ರಗಳಿಗೆ” ಎಚ್ಚರವಾಗಿರುವಂತೆ ತಿಳಿಸಿದ್ದಾರೆ.

ಮೂಲ ವೀಡಿಯೋದಲ್ಲಿ, “ಇತ್ತೀಚಿನ ದಿನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಏನು ಮಾಡುತ್ತಿದ್ದಾರೆ, ನನಗೆ ಮಾಹಿತಿ ಇದೆ, ಅವರು ಪ್ರಚಾರ ಮಾಡುತ್ತಿರುವ ಕೇವಲ ಎರಡು ಸಾಲುಗಳಿವೆ, ನೀವು ಹಿಂದೂಗಳಿಗೆ ಮತ ಹಾಕಬೇಕಾದರೆ ಹಿಂದೂ ಹುಲಿ ಮೋದಿಗೆ ಮತ ನೀಡಿ, ಅಥವಾ ಮುಸ್ಲಿಮರಿಗೆ ಮತ ನೀಡಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ” ಎಂದು ಎಲ್ಲೆಡೆ ಹರಡುತ್ತಿದ್ದಾರೆ. ಇದು ಅವರ ಕಾರ್ಯತಂತ್ರವಾಗಿದೆ, ಅವರು ನಿಮ್ಮನ್ನು ಪ್ರಚೋದಿಸಲು ಪ್ರಯತ್ನಿಸುತ್ತಾರೆ ಅವುಗಳನ್ನು ನೀವು ಚುನಾವಣೆ ಮುಗಿಯುವವರೆಗೂ ಸಹಿಸಿಕೊಳ್ಳಿ.” ಎಂದು ಯಾವುದೇ ಅಹಿತಕರ ಘಟನೆ ಜರುಗದಂತೆ ನೋಡಿಕೊಳ್ಳಿ ಎಂದು ಮುಸ್ಲಿಂ ಮುಖಂಡರಿಗೆ ಮನವಿ ಮಾಡಿದ್ದರು.

ನವೆಂಬರ್ 14, 2018 ರ ಟೈಮ್ಸ್ ಆಫ್ ಇಂಡಿಯಾದ ವರದಿಯ ವೀಡಿಯೊದ ಕುರಿತು ಸುದ್ದಿ ವರದಿಯು ಹೇಳುತ್ತದೆ, “ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು ಉದ್ದೇಶಿಸಿ ಕಮಲ್ ನಾಥ್ ಅವರ ವೀಡಿಯೊ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರು ಅದನ್ನು ತೀವ್ರವಾಗಿ ಟ್ವೀಟ್ ಮಾಡಲು ಮತ್ತು ಮರುಟ್ವೀಟ್ ಮಾಡಲು ಪ್ರಾರಂಭಿಸಿದರು.” ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಲೋಕಮತ್ ಹಿಂದಿ ಮತ್ತು ಜಾಗರನ್ ಸೇರಿದಂತೆ 2018 ರಿಂದ ಹಲವಾರು ಮಾಧ್ಯಮ ವರದಿಗಳಲ್ಲಿ ವೀಡಿಯೊ ಮತ್ತು ಕಮಲ್ ನಾಥ್ ಅವರ ಹೇಳಿಕೆಗಳನ್ನು ವ್ಯಾಪಕವಾಗಿ ವರದಿ ಮಾಡಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಜೋಧ್‌ಪುರದಿಂದ ರಚಿಸಲಾದ ಡೀಪ್‌ಫೇಕ್ ವಿಶ್ಲೇಷಣಾ ಸಾಧನವಾದ ಇಟಿಸಾರ್ ಮೂಲಕ ವೀಡಿಯೊವನ್ನು ರನ್ ಮಾಡಿದಾಗ. ವಾಯ್ಸ್ ಓವರ್ AI ರಚಿತವಾದ ಆಡಿಯೋ ಎಂದು ಉಪಕರಣವು ದೃಢಪಡಿಸಿದೆ.


ಇದನ್ನು ಓದಿ: Fact Check | ಕಾಂಗ್ರೆಸ್ ಪರಿಶಿಷ್ಟರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿತ್ತು ಎಂದು ಸುಳ್ಳು ಹೇಳಿದ ಪ್ರಧಾನಿ ಮೋದಿ


ವಿಡಿಯೋ ನೋಡಿ: ‘ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *