Fact Check | ಬಾಬಾ ರಾಮ್ ದೇವ್ ರಾಹುಲ್ ಗಾಂಧಿಯವರನ್ನು ಇತ್ತೀಚಿಗೆ ಹೊಗಳಿದ್ದಾರೆ ಎಂದು 2022ರ ವಿಡಿಯೋ ಹಂಚಿಕೆ

“ಇತ್ತೀಚಿಗೆ ಬಾಬಾ ರಾಮದೇವ್ ಅವರು ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿಯವರನ್ನು ಹಾಡಿ ಹೊಗಳಿದ್ದಾರೆ. ಅದರಲ್ಲೂ ರಾಹುಲ್ ಗಾಂಧಿಯವರು ಇತ್ತೀಚಿಗೆ ಎಲ್ಲೆಡೆಯಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದು, ಕೆಲವೊಂದು ಮಾಧ್ಯಮಗಳು ಕೂಡ ರಾಹುಲ್ ಗಾಂಧಿಯವರ ಕುರಿತು ಸದ್ದಿ ಪ್ರಸಾರ ಮಾಡಲು ಅವಕಾಶ ಮಾಡಿಕೊಡುತ್ತೇವೆ. ರಾಹುಲ್ ಗಾಂಧಿ ಕೂಡ ಒಬ್ಬ ಒಳ್ಳೆಯ ನಾಯಕ” ಎಂದು ಬಾಬಾ ರಾಮ್‌ ದೇವ್‌ ಹೇಳಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇದೇ ವಿಡಿಯೋದ ಹೇಳಿಕೆಯ ಮುಂದುವರಿದ ಭಾಗವಾಗಿ “ಗಾಂಧಿ ಕುಟುಂಬದ ಹತ್ಯೆಗಳ ಕುರಿತು ಮತ್ತು ನೆಹರು ಅವರು ಯೋಗಕ್ಕೆ ನೀಡಿದ ಮಹತ್ವದ ಕುರಿತು ಬಾಬಾ ರಾಮದೇವ್ ಮಾತನಾಡಿದ್ದಾರೆ” ಎಂದು ವಿಡಿಯೋದ ವಿಸ್ತೃತ ಆವೃತ್ತಿಯನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಇತ್ತೀಚಿಗೆ ಪತಂಜಲಿ ಸಂಸ್ಥೆಯ ವಿರುದ್ಧ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡು, ಬಳಿಕ ಪತಂಜಲಿ ಸಂಸ್ಥೆ ಜಾಹಿರಾತಿನ ಮೂಲಕ ಕ್ಷಮೆ ಕೇಳಿದ ನಂತರದಲ್ಲಿ ವೈರಲ್ ಆಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲಾಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಟ್ ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವಿಡಿಯೋದ ಕೆಲವೊಂದು ಕೀ ಪ್ರೇಮ್‌ಗಳನ್ನ ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ 2022ರ ವಿಡಿಯೋ ಒಂದು ಪತ್ತೆಯಾಗಿದೆ.

17 ಸೆಪ್ಟೆಂಬರ್ 2022ರಂದು ಲೈವ್ ಹಿಂದುಸ್ತಾನ್ ಯೂಟ್ಯೂಬ್ ಚಾನೆಲ್ ಹಾಗೂ ಅದರ ವೆಬ್‌ಸೈಟ್‌ನಲ್ಲಿ ಬಾಬಾ ರಾಮ್‌ ದೇವ್ ಅವರು ರಾಹುಲ್ ಗಾಂಧಿಯವರನ್ನ ಹಾಡಿ ಹೊಗಳಿದ್ದಾರೆ ಮತ್ತು ಅವರ ಭಾರತ ಜೋಡೋ ಯಾತ್ರೆಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳು ಕಂಡುಬಂದಿದೆ.

ಇನ್ನು ಅಮರ್‌ ಉಜಲ ಕೂಡ 17 ಸಪ್ಟೆಂಬರ್ 2022 ರಂದು ವರದಿಯನ್ನು ಮಾಡಿದ್ದು ಈ ವರದಿಯಲ್ಲೂ ಕೂಡ ಬಾಬಾ ರಾಮ್‌ ದೇವ್ ಅವರು ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ ಎಂದು ಅವರ ಹೇಳಿಕೆಗಳನ್ನ ಸಂಪೂರ್ಣವಾಗಿ ಉಲ್ಲೇಖಿಸಿ ವರದಿ ಪ್ರಕಟಿಸಿದೆ

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಮತ್ತು ವರದಿಗಳನ್ನು ಗಮನಿಸಿದ ನಂತರದಲ್ಲಿ ಬಾಬಾ ರಾಮ್‌ ದೇವ್ ಅವರು ರಾಹುಲ್ ಗಾಂಧಿಯವರನ್ನು ಹೊಗಳಿರುವುದು 2022 ರಲ್ಲಿ ಹೊರತು 2024ರ ಲೋಕಸಭೆ ಚುನಾವಣೆಯಲ್ಲಿ ಅಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ವೈರಲ್ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಬರಹ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check | ಲಂಡನ್ ನಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅನುದಾನ ಕಡಿತಗೊಳಿಸಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *