Fact Check | ಲಂಡನ್ ನಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅನುದಾನ ಕಡಿತಗೊಳಿಸಿದ್ದರು ಎಂಬುದು ಸುಳ್ಳು

ಸಿಎಂ ಸಿದ್ದರಾಮಯ್ಯ ಅವರು ಲಂಡನ್‌ನಲ್ಲಿ ನಿರ್ಮಾಣವಾದ ಬಸವಣ್ಣನವರ ಪುತ್ಥಳಿಗೆ ಯಾವುದೇ ಅನುದಾನವನ್ನು ನೀಡಿಲ್ಲ. 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ  ಅಂದಿನ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಅವರು ನೀಡಿದ್ದ ಅನುದಾನವನ್ನು ಕಡಿತಗೊಳಿಸಿದ್ದರು ಎಂಬ ವಿಡಿಯೋವನ್ನು  ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಇದೇ ವಿಡಿಯೋದಲ್ಲಿ ಹಲವು ಸುಳ್ಳು ಆರೋಪಗಳನ್ನು ಮಾಡಲಾಗಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಸವಣ್ಣನವರ ಪುತ್ತಳಿಯ ಉದ್ಘಾಟನೆಯ ಸಂದರ್ಭದಲ್ಲಿ ಬಂದಿದ್ದರು ಎಂಬ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯನವರು ಅಂದು ಬಸವಣ್ಣನವರ ಪ್ರತಿಮೆಯ ಉದ್ಘಾಟನೆಗೆ ಬರಲಿಲ್ಲ. ಆದರೆ ಇಂದು ಲಂಡನಿಗೆ ತೆರಳಿದ್ದಾಗ ಸಿಎಂ ಸಿದ್ದರಾಮಯ್ಯನವರು ಬಸವಣ್ಣನವರ ಪ್ರತಿಮೆಯ ಬಳಿ ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡು ನಾಟಕವಾಡಿದ್ದಾರೆ ಎಂದು ನಿಂದನಾತ್ಮಕವಾಗಿರುವ ವಿಡಿಯೋವೊಂದು ವೈರಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಹೇಳಿರುವ ಅಂಶಗಳು ನಿಜವೇ ಎಂಬುದನ್ನ ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸದ್ಯಕ್ಕೆ ವೈರಲ್ ಆಗುತ್ತಿರುವ ವಿಡಿಯೋ ಆರು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಾಗಿದೆ. ಈ ಆರೋಪಗಳನ್ನು ಡಾ.ನಿರಜ್ ಪಾಟೀಲ್ ಎಂಬ ವ್ಯಕ್ತಿಯ ಹೇಳಿಕೆಯ ಆಧಾರದ ಮೇಲೆ ಮಾಡಲಾಗುತ್ತೆ. ಈ ನೀರಜ್ ಪಾಟೀಲ್‌ ಅವರು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುವಾಗ ಸಿಎಂ ಸಿದ್ದರಾಮಯ್ಯನವರು ಜಗದೀಶ್ ಶೆಟ್ಟರ್ ನೀಡಿದ್ದ ಅನುದಾನವನ್ನ ಕಡಿತಗೊಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಮೆ ಉದ್ಘಾಟನೆಗೆ ಬರುತ್ತಿದ್ದಾರೆ ಎಂದಾಗ ಸಿಎಂ ಸಿದ್ದರಾಮಯ್ಯ ಆ ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿದ್ದರು ಎಂದು ಆರೋಪಿಸಿದ್ದರು

ಆದರೆ ಇದೇ ವೇಳೆ ಈ ಹೇಳಿಕೆಗಳಿಗೆ ಸಿಎಂ ಸಿದ್ದರಾಮಯ್ಯನವರು ಕೂಡ ಪ್ರತಿಕ್ರಿಯೆ ನೀಡಿದ್ದು, ನಾನು ಬಸವಣ್ಣನವರ ಪ್ರತಿಮೆಯ ಉದ್ಘಾಟನೆಗೆ ಯಾವುದೇ ರೀತಿಯ ಅನುದಾನವನ್ನ ನೀಡಿಲ್ಲ ಜೊತೆಗೆ ಯಾವುದೇ ಅನುದಾನವನ್ನು ಕಡಿತವು ಗೊಳಿಸಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಬಿಜೆಪಿಯವರು ಅಥವಾ ಪ್ರಧಾನಿ ಅವರು ಆ ಕಾರ್ಯಕ್ರಮಕ್ಕೆ ಬರುತ್ತಾರೆ ಎನ್ನುವ ಕಾರಣಕ್ಕೆ ನಾನು ಹೋಗಲಿಲ್ಲ ಎಂಬುದು ಸುಳ್ಳು. ಬದಲಾಗಿ ಆ ಸಂದರ್ಭದಲ್ಲಿ ಬೇರೆ ಕಾರ್ಯಕ್ರಮಗಳು ನಿಗದಿಯಾಗಿದ್ದ ಕಾರಣಕ್ಕಾಗಿ ಪ್ರತಿಮೆ ಉದ್ಘಾಟನೆಯ ಕಾರ್ಯಕ್ಕೆ ಹೋಗಲಾಗಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಘಟನೆಯ ನಂತರ ಕಾಂಗ್ರೆಸ್ ಜೆಡಿಎಸ್ ಸರ್ಕಾರ ಹಾಗೂ ಬಿಜೆಪಿ ಸರ್ಕಾರಗಳು ಆಡಳಿತ ನಡೆಸಿವೆ. ಈ ಸರ್ಕಾರಗಳ ಅವಧಿಯಲ್ಲಿ ಕೂಡ ನಿರಜ್‌ ಪಾಟೀಲ್‌ ಹೇಳಿಕೆಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಗಳು ಅಥವಾ ಸಾಕ್ಷಿಗಳು ಲಭ್ಯವಾಗಿಲ್ಲ. ಅವರ ಎಲ್ಲಾ ಹೇಳಿಕೆಗಳಿಗೆ ಪೂರಕವಾದ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋ ಮತ್ತು ಅದರಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಡಲಾಗುತ್ತಿರುವ ಆಪಾದನೆಗಳು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check: ಸೋನಿಯಾ ಗಾಂಧಿಯವರು 28000 ಸಾವಿರ ಹೋಟೆಲ್ ಹೊಂದಿದ್ದಾರೆ ಎಂಬುದು ಸಂಪೂರ್ಣ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *