Fact Check | ‘Go Back Modi’ ಎಂದು ಬಿಜೆಪಿ ಶಾಸಕಿ ಪ್ಲೆಕಾರ್ಡ್ ಪ್ರದರ್ಶಿಸಿದ್ದಾರೆ ಎಂಬುದು ಸುಳ್ಳು..!

ಪ್ರಧಾನಿ ಮೋದಿ ಕನ್ಯಾಕುಮಾರಿಗೆ ಧ್ಯಾನ ಚಿಕಿತ್ಸೆಗೆ ತೆರಳಿರುವ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಕಾಂಗ್ರೆಸ್ ಸಮಿತಿ, ಇದು ಬಿಜೆಪಿ ಮತಗಳನ್ನು ಸೆಳೆಯುವ ಪ್ರಯತ್ನವಾಗಿದೆ ಎಂದು ಮದ್ರಾಸ್ ಹೈಕೋರ್ಟ್‌ ಮೆಟ್ಟಿಲನ್ನು ಸಹ ಏರಿತ್ತು. ಇನ್ನು ಇದಕ್ಕೆ ವಿರೋಧ ವ್ಯಕ್ತ ಪಡಿಸಿ ಡಿಎಂಕೆ ವಕೀಲರೊಬ್ಬರು ಚೆನ್ನೈನ ಹಲವು ಭಾಗಗಳಲ್ಲಿ ಪ್ರತಿಭಟನೆಯಲ್ಲಿ “‘Go Back Modi’ ” ಪೋಸ್ಟರ್‌ಗಳನ್ನು ಹಾಕಿದ್ದರು. ಇದು ಒಂದು ಹಂತದಲ್ಲಿ ಯಶಸ್ವಿಯೂ ಆಗಿತ್ತು.

ಇದೀಗ ಇದೇ Go Back Modi ಎಂಬ ಹ್ಯಾಶ್ ಟ್ಯಾಗ್‌ ಸಾಕಷ್ಟು ಸದ್ದು ಮಾಡುತ್ತಿದ್ದು, ಕೊಯಮತ್ತೂರಿನ ಆದಿಯೋಗಿ ಪ್ರತಿಮೆ ಎದುರು ಮಹಿಳೆಯೊಬ್ಬರು ಗೋ ಬ್ಯಾಕ್ ಮೋದಿ ಎಂದು ಪ್ಲೆಕಾರ್ಡ್‌ ಪ್ರದರ್ಶಿಸಿರುವ ಫೋಟೋ ವೈರಲ್ ಆಗಿದೆ. ಎಕ್ಸ್‌ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಮಹಿಳೆಯೊಬ್ಬರು ಜಗ್ಗಿ ವಾಸು ಆಶ್ರಮದ ಮುಂದೆ ‘ಗೋ ಬ್ಯಾಕ್ ಮೋದಿ’ ಎಂಬ ಫಲಕದೊಂದಿಗೆ ನಿಂತಿರುವುದು ಮನೋಹರವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಈಕೆ ಬಿಜೆಪಿಯ ಸದಸ್ಯೆ, ಈಕೆ ಪ್ರಧಾನಿ ಮೋದಿ ನಡೆಯನ್ನು ಟೀಕಿಸಿದ್ದಾಳೆ ಎಂದು ಸಾಕಷ್ಟು  ಮಂದಿ ಪೋಸ್ಟ್‌ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್ 

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿದೆ. ಇದಕ್ಕಾಗಿ ಮೊದಲು ವೈರಲ್‌ ಫೋಟೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ  24 ಅಕ್ಟೋಬರ್ 2021 ರಂದು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಮತ್ತು ತಮಿಳುನಾಡಿನ ವಿಧಾನಸಭೆಯ ಸದಸ್ಯೆ ವನತಿ ಶ್ರೀನಿವಾಸನ್ ಮಾಡಿದ ತಮ್ಮ X ಮೂಲಕ ಮಾಡಿದ ಪೋಸ್ಟ್‌ ಲಭ್ಯವಾಯಿತು.

ಲಭ್ಯವಾದ ಪೋಸ್ಟ್‌ನಲ್ಲಿ ವೈರಲ್ ಫೋಟೋದ ಮೂಲ ಆವೃತ್ತಿ ಕಂಡುಬಂದಿದ್ದು, ಪೋಸ್ಟ್‌ನಲ್ಲಿ ವನತಿ ಶ್ರೀನಿವಾಸನ್ ಕೋವಿಡ್‌ ಸಂದರ್ಭದಲ್ಲಿ ವ್ಯಾಕ್ಸಿನೇಷನ್‌ ಅಭಿಯಾನದ 100 ಕೋಟಿ ಜನ ವ್ಯಾಕ್ಸಿನ್‌ ಪಡೆದ ಸೂಚಕವಾಗಿ ಫಲಕ ಹಿಡಿದು ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲಿಗೆ ಪ್ಲೆಕಾರ್ಡ್‌ ಹಿಡಿದ ಮಹಿಳೆ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಎಂಬುದು ಖಚಿತವಾಗಿದೆ.

ಇನ್ನು ಈ ವನತಿ ಶ್ರೀನಿವಾಸನ್‌ ತಮಿಳುನಾಡಿನ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದು,  100 ಕೋಟಿ ವ್ಯಾಕ್ಸಿನೇಷನ್‌ನೊಂದಿಗೆ ಭಾರತ ಇತಿಹಾಸ ಸೃಷ್ಟಿಸುತ್ತದೆ, ಧನ್ಯವಾದಗಳು ಮೋದಿ ಜೀ” ಎಂದು ಬರೆಯಲಾದ ಪ್ಲೇ ಕಾರ್ಡ್‌ ಅನ್ನು 2021ರಲ್ಲಿ ಹಂಚಿಕೊಂಡಿದ್ದರು ಇದೀಗ ಈ ಫೋಟೋದಲ್ಲಿನ ಪ್ಲೆಕಾರ್ಡ್‌ ಅನ್ನು ಎಡಿಟ್‌ ಮಾಡಿರುವ ಕಿಡಿಗೇಡಿಗಳು ಜನ ಸಾಮಾನ್ಯರನ್ನು ದಾರಿ ತಪ್ಪಿಸಲು ಈ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬುದು ಸಾಬೀತಾಗಿದೆ.


ಇದನ್ನೂ ಓದಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ಈ ವಿಡಿಯೋ ನೋಡಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *