Fact Check | ಎಕ್ಸ್‌ ರೇ ಎಂದರೇ ಜಾತಿ ಗಣತಿ ಎಂಬರ್ಥದಲ್ಲಿ ರಾಹುಲ್‌ ಗಾಂಧಿ ಮಾತನಾಡಿಲ್ಲ

“ಈ ವಿಡಿಯೋ ನೋಡಿ ರಾಹುಲ್‌ ಗಾಂಧಿ ಅವರಿಗೆ ಎಕ್ಸ್‌ರೇ ಮತ್ತು ಜಾತಿಗಣತಿ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ.. ಜಾತಿ ಗಣತಿ ಎಂದರೇ ಎಕ್ಸ್‌ ರೇ ಎಂದು ಹೇಳುತ್ತಿದ್ದಾರೆ, ಇಂತಹವರು ದೇಶದ ಪ್ರಧಾನಿ ಆದರೆ ದೇಶದ ಗತಿ ಏನು ಎಂಬುದನ್ನು ನೀವೇ ಊಹೆ ಮಾಡಿ ನೋಡಿ ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅದರಲ್ಲೂ ಇತ್ತೀಚೆಗೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಹುಲ್‌ ಗಾಂಧಿ ವಿರುದ್ಧದ ಅಪಪ್ರಚಾರ ಮತ್ತು ಸುಳ್ಳು ಮಾಹಿತಿಗಲು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಕೇವಲ ಇಷ್ಟು ಮಾತ್ರವಲ್ಲದೆ ರಾಹುಲ್‌ ಗಾಂಧಿ ಅವರನ್ನು ದಡ್ಡ ಎಂಬ ರೀತಿಯಲ್ಲಿ ಬಿಂಬಿಸಲು ಸಾಕಷ್ಟು ರೀತಿಯ ಪ್ರಯತ್ನಗಳನ್ನು ಬಲಪಂಥೀಯ ಸಿದ್ಧಾಂತದ ಹಲವು ಸಂಘಟನೆಗಳು ಮತ್ತು ಕೆಲ ವ್ಯಕ್ತಿಗಳು ನಿತಂರವಾಗಿ ಪ್ರಯತ್ನಿಸುತ್ತಿದ್ದಾರೆ. ಇದೀಗ ಇಂತಹದ್ದೇ ಪ್ರಯೋಗ ಈಗ ವೈರಲ್‌ ಆಗುತ್ತಿರುವ ವಿಡಿಯೋದಲ್ಲೂ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್‌

ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋವನ್ನು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಹುಡುಕಾಟವನ್ನು ನಡೆಸಿತು. ಇದಕ್ಕಾಗಿ ವೈರಲ್‌ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ ಹಲವು ವಿಡಿಯೋಗಳು ಪತ್ತೆಯಾಗಿದ್ದು, ನಿಜವಾದ ವಿಡಿಯೋದ ಪೂರ್ತೀ ಆವೃತ್ತಿಯು ಯೂಟ್ಯುಬ್‌ನಲ್ಲಿ ಪತ್ತೆಯಾಗಿದೆ.

ಆ ವಿಡಿಯೋವನ್ನು ಸಂಪೂರ್ಣವಾಗಿ ಗಮನಿಸಿದಾಗ ವೈರಲ್‌ ಆಗಿರುವ ವಿಡಿಯೋ ಎಡಿಟೆಡ್‌ ವಿಡಿಯೋ ಆಗಿದ್ದು, ಇಲ್ಲಿ ರಾಹುಲ್‌ ಗಾಂಧಿ ಅವರು ಎಕ್ಸ್‌ರೇಯ ಉದಾಹರಣೆ ನೀಡಿದ್ದಾರೆ. ತಮ್ಮ ಭಾಷಣದಲ್ಲಿ ಮಾತನಾಡುತ್ತಾ “ನಮ್ಮ ಕಾಲಿಗೆ ಏನಾದರು ಪೆಟ್ಟು ಬಿದ್ದಾಗ, ಎಲ್ಲರೂ ಮೊದಲು ಹೇಳುವವುದು ಎಕ್ಸ್‌ರೇ ಮಾಡಿಸಿ ಎಂದು, ಹಾಗಾಗಿ ನಮ್ಮ ಸಮಾಜದಲ್ಲಿ ಜಾತಿ ಗಣತಿಯ ಎಕ್ಸ್‌ರೇ ಆಗಬೇಕು, ಆ ಮೂಲಕ ಯಾವ ಯಾವ ಸಮುದಾಯ ಹೆಚ್ಚು ತುಳಿತಕ್ಕೆ ಒಳಗಾಗಿದೆ ಎಂಬುದನ್ನು ಪತ್ತೆ ಹಚ್ಚಬಹುದು” ಎಂದು ಹೇಳಿದ್ದಾರೆ.

ಆದರೆ ಇದೇ ವಿಡಿಯೋವನ್ನು ಕತ್ತರಿಸಿರುವ ಕೆಲ ಕಿಡಿಗೇಡಿಗಳು “ರಾಹುಲ್‌ ಗಾಂಧಿ ಅವರು ಎಕ್ಸ್‌ರೇ ಅಂದರೆ, ಜಾತಿಗಣತಿ ಎಂದು ಅರ್ಥ ಬರುತ್ತದೆ” ಎಂಬ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಹರಡುತ್ತಿದ್ದಾರೆ.


ಇದನ್ನೂ ಓದಿ : Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ


ಈ ವಿಡಿಯೋ ನೋಡಿ : Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *