Fact Check | ಕಳೆದ ವರ್ಷ ಈದ್ ಮಿಲಾದ್ ಹಬ್ಬದ ವೇಳೆ ನಡೆದ ಗಲಭೆಯನ್ನು ಇತ್ತೀಚಿನದ್ದು ಎಂದು ಸುಳ್ಳು ಮಾಹಿತಿ ಹಂಚಿಕೆ

“ಈ ವಿಡಿಯೋ ನೋಡಿ ಇದು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಆಗುತ್ತಿರುವ ಬದಲಾವಣೆ, ಬೀದಿಯಲ್ಲಿ ಹಸಿರು ಬಾವುಟವನ್ನು ಹಿಡಿದು ಮೆರವಣಿಗೆ ಮಾಡುತ್ತಿರುವ ಒಂದು ಕೋಮಿನವರು ಇದರಿಂದ ಬೃಹತ್ ಟ್ರಾಫಿಕ್ ಜಾಮ್ ಉಂಟಾಗಿದ್ದರು ತಲೆಕೆಡಿಸಿಕೊಳ್ಳದ ಅಲ್ಲಿನ ಕಾಂಗ್ರೆಸ್‌ ಸರ್ಕಾರ” ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋವನ್ನು ನೋಡಿದ ಬಹುತೇಕರು ಇದು ಇತ್ತೀಚೆಗೆ ನಡೆದ ಘಟನೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದರ ಜೊತೆಗೆ ಬಲಪಂಥೀಯವಾದಿಗಳು ಕೂಡ ಒಂದು ಕೋಮಿನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿರುವುದರ ಜೊತೆಗೆ ತೆಲಂಗಾಣದ ರೇವಂತ್‌ ರೆಡ್ಡಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಕೂಡ ವ್ಯಾಪಕವಾಗಿ ಟೀಕೆ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಇನ್ನು ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ವಿಡಿಯೋವಿನ ಕೆಲ ಕೀ ಫ್ರೇಂಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ವೈರಲ್‌ ಆಗಿರುವ ವಿಡಿಯೋಗೆ ಹೋಲಿಕೆಯಾಗುವ ಹಲವು ವಿಡಿಯೋಗಳು ಕಂಡು ಬಂದಿದ್ದು, ಅದರಲ್ಲಿ ಯೂಟ್ಯುಬ್‌ನ ಶಾರ್ಟ್‌ ವಿಡಿಯೋವೊಂದು ಕಂಡು ಬಂದಿದೆ.

ಯುಟ್ಯುಬ್‌ನ ಶಾರ್ಟ್‌ ವಿಡಿಯೋದಲ್ಲಿ ಈದ್‌ ಉನ್‌ ನಬಿ ಸಂದರ್ಭದಲ್ಲಿ ನಡೆದ ಗಲಾಟೆಯಿಂದ ಉಂಟಾದ ಟ್ರಾಫಿಕ್‌ ಜಾಮ್‌ ಎಂದು ಬರೆದುಕೊಳ್ಳಲಾಗಿತ್ತು. ಇದೇ ಕಾರಣಕ್ಕೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಈ ಕುರಿತು ಹುಡುಕಾಟವನ್ನು ನಡೆಸಿದಾಗ ಈದ್‌ ಮಿಲಾದ್‌ ಹಬ್ಬದ ಮೆರವಣಿಗೆಯನ್ನು ಗಣೇಶ ಹಬ್ಬದ ಸಲುವಾಗಿ ಮುಂದೂಡಲಾಗಿದೆ ಎಂಬ ವರದಿಗಳು ಕಂಡು ಬಂದಿವೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರು ವಿಡಿಯೋ  7 ಡಿಸೆಂಬರ್ 2023 ರಂದು ಈದ್ ಮಿಲಾದ್ ಹಬ್ಬದ ಸಂಭ್ರಮದಲ್ಲಿ ನಡೆದ ಘಟನೆಯಾಗಿದೆ ಎಂಬುದು ನಿಖರವಾಗಿ ತಿಳಿದು ಬಂದಿದ್ದು.

ಈ ವೇಳೆ ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ಅವರ ನೇತೃತ್ವದ ಬಿಎಸ್ಆರ್ ಪಕ್ಷ ಅಧಿಕಾರದಲ್ಲಿತ್ತು. ಇನ್ನು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಸುದ್ದಿ ಎಂದು ಹೈದರಾಬಾದ್ ನಗರ ಪೊಲೀಸರು 9 ಏಪ್ರಿಲ್ 2024 ರಂದು ಟ್ವೀಟ್ ಮಾಡಿ ಖಚಿತ ಪಡಿಸಿದ್ದಾರೆ


ಇದನ್ನೂ ಓದಿ : Fact Check: ಹಿಂದೂಗಳ ಅಗತ್ಯವಿಲ್ಲವೆಂದು ಸಿಎಂ ಸಿದ್ದರಾಮಯ್ಯನವರು ಹೇಳಿಲ್ಲ. ಈ ಪತ್ರಿಕಾ ವರದಿ ನಿಜವಲ್ಲ


ಈ ವಿಡಿಯೋ ನೋಡಿ : Fact Check: ಹಿಂದೂಗಳ ಅಗತ್ಯವಿಲ್ಲವೆಂದು ಸಿಎಂ ಸಿದ್ದರಾಮಯ್ಯನವರು ಹೇಳಿಲ್ಲ. ಈ ಪತ್ರಿಕಾ ವರದಿ ನಿಜವಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *