Fact Check | ಕಾಂಗ್ರೆಸ್‌ ಮುಸಲ್ಮಾನರ ಪಕ್ಷ ಎಂದು ರಾಹುಲ್‌ ಗಾಂಧಿ ಹೇಳಿಲ್ಲ ; ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳು.!

“ಇದು ಇಂಕ್ವಿಲಾಬ್‌ ಎಂಬ ಉರ್ದು ಪತ್ರಿಕೆ ಈ ಪತ್ರಿಕೆಯ ವರದಿಯಲ್ಲಿ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಮುಸ್ಲಿಂ ಪಕ್ಷ, ಮುಸಲ್ಮಾನರು ದುರ್ಬಲರು ಹಾಗಾಗಿ ಮುಸಲ್ಮಾನರ ಪರವಾಗಿ ಇರುವ ಏಕೈಕ ಪಕ್ಷ ಕಾಂಗ್ರೆಸ್‌‌ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪವಾಗಿ ಹಬ್ಬುತ್ತಿದೆ. ಈ ಸುದ್ದಿಯ ಜೊತೆ ಪೇಪರ್‌ ಕಟ್ಟಿಂಗ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೇಪರ್‌ ಉರ್ದು ಭಾಷೆಯಲ್ಲಿರುವುದರಿಂದ ಇದು ನಿಜವೆಂದು ಸಾಕಷ್ಟು ಮಂದಿ ನಂಬಿದ್ದಾರೆ.

ಇಂಕ್ವಿಲಾಬ್‌ ಪತ್ರಿಕೆಯ ಸುಳ್ಳು ವರದಿ
ಇಂಕ್ವಿಲಾಬ್‌ ಪತ್ರಿಕೆಯ ಸುಳ್ಳು ವರದಿ

ಇನ್ನು ಇದೇ ಪೇಪರ್‌ ಕಟ್ಟಿಂಗ್‌ ಬಳಸಿಕೊಂಡು ಜೀ ಹಿಂದೂಸ್ತಾನ್‌ ಮೊದಲು ವರದಿ ಮಾಡಿದ್ದು, ಈ ವರದಿಯನ್ನು ಕೂಡ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಇನ್ನೀತರ ಮಾಧ್ಯಮಗಳು ಇದೇ ವರದಿಯನ್ನು ಮಾಡಿದ್ದು, ಈ ಇಂಕ್ವಿಲಾಬ್‌ ಪೇಪರ್‌ ಕಟ್ಟಿಂಗ್‌ ಅನ್ನು ಬಳಸಿಕೊಂಡು 2018ರಲ್ಲಿ ನಿರ್ಮಲ ಸೀತಾರಾಮನ್‌ ಸುದ್ದಿಗೋಷ್ಠಿ ನಡೆಸಿ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.

ಫ್ಯಾಕ್ಟ್‌ಚೆಕ್‌

ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ಪೇಪರ್‌ ಕಟ್ಟಿಂಗ್‌ ವರದಿಯ ಕುರಿತು ಸಾಕಷ್ಟು ಮಂದಿ ವಾಟ್ಸ್‌ಆಪ್‌ನಲ್ಲಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವನ್ನು ಸಂಪರ್ಕಿಸಿ ಈ ಕುರಿತು ಸತ್ಯಶೋಧನೆ ನಡೆಸಲು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ಈ ಪೇಪರ್‌ ಕಟ್ಟಿಂಗ್‌ ಹಾಗೂ ವರದಿಯ ಕುರಿತು ಕೆಲವೊಂದು ಮಾಹಿತಿಗಳು ಲಭ್ಯವಾಗಿದೆ. ಅದಲ್ಲಿಯೂ ಪ್ರಧಾನಿ ಮೋದಿ ಅವರೇ ಇದನ್ನು ಪರೋಕ್ಷವಾಗಿ ಅಣಕಿಸಿದ್ರೂ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಮೊದಲು ಪೇಪರ್‌ ಕಟ್ಟಿಂಗ್‌ ಬಗ್ಗೆ ಹೇಳುವುದಾದರೆ ಇದೊಂದು ಸುಳ್ಳು ಸುದ್ದಿ ಮತ್ತು ಗುಮಾನಿ ಆಧಾರಿತ ವರದಿಯಾಗಿದೆ. ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಊಹಾತ್ಮಕ ಸುದ್ದಿಗಳಿಗೆ ಬಲ್ಲ ಮೂಲಗಳಿಂದ  ಬಂದ ಮಾಹಿತಿ ಎಂದು ತೇಪೆ ಹಚ್ಚಿ ಸುದ್ದಿ ಪ್ರಕಟಿಸುವ ಕೆಲಸವನ್ನು ಮಾಡಲಾಗುತ್ತದೆ. ಅದೇ ರೀತಿಯ ವರದಿಯನ್ನು ಇಂಕ್ವಿಲಾಬ್‌ ಪ್ರಕಟಿಸಿದೆ. ಇನ್ನು ಈ ಸುದ್ದಿಯ ಕುರಿತು 12 ಜುಲೈ 2018ರಂದು ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕ ಚತುರ್ವೇದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದು, ಇದೊಂದು ಸುಳ್ಳು ಸುದ್ದಿ.. ಇದನ್ನು ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ ದೇಶವನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದೆ ಎಂದು ವಿಪಕ್ಷವನ್ನು ತರಾಟೆಗೆ ತೆಗೆದುಕೊಂಡಿತ್ತು.

ಇನ್ನು ರಾಹುಲ್‌ ಗಾಂಧಿ ಈ ರೀತಿಯ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಒಬ್ಬ ವ್ಯಕ್ತಿ ಅಧಿಕೃತವಾಗಿ ಹೇಳಿಕೆ ನೀಡಿದಿದ್ದರೂ ಪತ್ರಿಕೆಯೊಂದರ ಪೇಪರ್‌ ಕಟ್ಟಿಂಗ್‌ ವರದಿಯನ್ನು ಆಧಾರಿಸಿ ದೇಶದ ಬೃಹತ್‌ ಮಾಧ್ಯಮಗಳೇ ಸುಳ್ಳು ವರದಿಯನ್ನು ಪ್ರಕಟಿಸಿವೆ. ಅದರಲ್ಲೂ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಯಾವ ಮಾಧ್ಯಮಗಳು ಹೋಗಿಲ್ಲ. ಇಲ್ಲಿ ಯಾವ ಮಾಧ್ಯಮಗಳು ಕೂಡ ರಾಹುಲ್‌ ಗಾಂಧಿ ಅವರು ಹೇಳಿಕೆ ನೀಡಿದ್ದಕ್ಕೆ ಸೂಕ್ತ ಪುರಾವೆಯನ್ನು ಕೂಡ ಒದಗಿಸಿಲ್ಲ.. ಇನ್ನು ರಾಹುಲ್‌ ಗಾಂಧಿ ಅವರು ಸಭೆಯೊಂದರಲ್ಲಿ ಈ ಮಾತನ್ನು ಹೇಳಿದ್ದಾರೆ ಎಂದು ಹೇಳಲಾದ ವರದಿಯ ಕುರಿತು ಅದೇ ಸಭೆಯಲ್ಲಿ ಭಾಗಿಯಾಗಿದ್ದ ಎಸ್‌. ಇರ್ಫಾನ್‌ ಹಬಿಬ್‌ ಅವರು ಆ ರೀತಿಯ ಯಾವುದೇ ವಿಚಾರ ಸಭೆಯಲ್ಲಿ ಪ್ರಸ್ತಾಪವೇ ಆಗಿಲ್ಲ ಎಂದಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರಾಹುಲ್‌ ಗಾಂಧಿ ವಿರುದ್ಧ ದ್ವೇಷ ಹರಡುವ ಸಲುವಾಗಿ ಈ ಸುಳ್ಳು ಸುದ್ದಿಯನ್ನು ಬಲ ಪಂಥಿಯ ಮಾಧ್ಯಮಗಳು ವರದಿ ಮಾಡಿ ಸಿಕ್ಕಿ ಬಿದ್ದಿವೆ. ಹಾಗಾಗಿ ರಾಹುಲ್‌ ಗಾಂಧಿ ಕಾಂಗ್ರೆಸ್‌ ಮುಸ್ಲಿಂ ಪಕ್ಷ ಎಂದಿದ್ದಾರೆ ಎಂಬುದು ಸುಳ್ಳಾಗಿದೆ.


ಇದನ್ನೂ ಓದಿ : ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ಈ ವಿಡಿಯೋ ನೋಡಿ :  ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *